ಗೂಡಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಕಾಸರಗೋಡು , ಅ.30: ಉಳಿಯತ್ತಡ್ಕದಲ್ಲಿ ಗೂಡಂಗಡಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನನ್ನು ಬಿಎಂಎಸ್ ಕಾರ್ಯಕರ್ತ ಕೆ.ಎಂ. ಗಣೇಶ್ (28) ಎಂದು ಗುರುತಿಸಲಾಗಿದೆ.
ಅಕ್ಟೊಬರ್ 12ರಂದು ರಾತ್ರಿ ಘಟನೆ ನಡೆದಿತ್ತು ಉಳಿಯತ್ತಡ್ಕ ರಹಮತ್ ನಗರದ ಸಲಾಹುದ್ದೀನ್ ಎಂಬವರ ಗೂಡಂಗಡಿಗೆ ಬೆಂಕಿ ಹಚ್ಚಿದ್ದು ಎರಡು ಲಕ್ಷ ರೂ. ನಷ್ಟ ಉಂಟಾಗಿತ್ತು. ಕೃತ್ಯಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು.
Next Story





