ಹಾಡಹಗಲೇ ಯುವತಿಯನ್ನು ಇರಿದು ಕೊಲ್ಲುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಬಹಿರಂಗ

ಹೊಸದಿಲ್ಲಿ, ಅ. 30: ಹಾಡಹಗಲೇ ಯುವಕನೊಬ್ಬ 22ವರ್ಷ ವಯಸ್ಸಿನ ಯುವತಿಯನ್ನು ಇರಿದು ಕೊಂದಿರುವ ಘಟನೆಯಸಿಸಿಟಿವಿ ದೃಶ್ಯಗಳು ಬಹಿರಂಗವಾಗಿದೆ ಎಂದು ವರದಿಯಾಗಿದೆ. ಗುಡ್‌ಗಾಂವ್‌ನ ಎಂಜಿ ರಸ್ತೆ ಮೆಟ್ರೊಸ್ಟೇಶನ್‌ನಲ್ಲಿ ಕಳೆದ ವಾರ ಈ ಘಟನೆ ನಡೆದಿತ್ತು.
ನಡೆಯುತ್ತಾ ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ಬಂದ ಯುವಕ ಚಾಕುಉಪಯೋಗಿಸಿ ಆಕ್ರಮಿಸಿದ್ದಾನೆ. ನೆಲಕ್ಕುರುಳಿದ ಯುವತಿಯನ್ನು ನಿರಂತರ ಇರಿದಿದ್ದಾನೆ.ಆತನ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿವೆ.
ಯುವತಿಯನ್ನು ಪಾರು ಮಾಡಲು ಬಂದವರ ಮೇಲೆ ದುಷ್ಕರ್ಮಿ ಆಕ್ರಮಣಕ್ಕೆ ಮುಂದಾಗುವ ದೃಶ್ಯಗಳು ಕೂಡಾ ಸಿಸಿಟಿವಿಯಲ್ಲಿ ದಾಖಲಾಗಿದೆ. ಜೀತೇಂದ್ರ ಎಂಬಾತ ಮೇಘಾಲಯದ ಯುವತಿ ಪಿಂಕಿಗೆ ಮೂವತ್ತು ಸಲ ತಿವಿದು ಕೊಂದು ಹಾಕಿದ ಘಟನೆ ಕಳೆದ ವಾರ ನಡೆದಿತ್ತು ಎಂದು ವರದಿ ತಿಳಿಸಿದೆ.
Next Story





