2018ರ ವೇಳೆಗೆ 25,128 ಪೊಲೀಸ್ ಹುದ್ದೆಗಳ ನೇಮಕ
.jpg)
ಬೆಂಗಳೂರು, ಅ.30: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ಕೇಡರ್‌ಗಳ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ರಚನಾತ್ಮಕ ವಾರ್ಷಿಕ ನೇಮಕಾತಿ ಪ್ರಕ್ರಿಯೆ ಯೋಜನೆ ರೂಪಿಸಿದೆ. ಬೆಂಗಳೂರು, ಅ.30: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಕೇಡರ್‌ಗಳಹುದ್ದೆಗಳರ್ತಿಗೆ ರಾಜ್ಯ ಸರಕಾರ ರಚನಾತ್ಮಕ ವಾರ್ಷಿಕ ನೇಮಕಾತಿ ಪ್ರಕ್ರಿಯೆ ಯೋಜನೆ ರೂಪಿಸಿದೆ. ಪೊಲೀಸರ ನೇಮಕಾತಿ ವಾರ್ಷಿಕ ಕ್ರೀಯಾ ಯೋಜನೆ ರೂಪಿಸುವಂತೆ ಈ ಹಿಂದೆ ಹೈಕೋರ್ಟ್ ಸರಕಾರಕ್ಕೆ ಹಲವು ಬಾರಿ ನಿರ್ದೇಶನ ನೀಡಿತ್ತು. ಅದರಂತೆ ಸರಕಾರ ಯೋಜನೆ ಸಿದ್ಧಪಡಿಸಿ ಹೈಕೋರ್ಟ್‌ಗೆ ಸಲ್ಲಿಸಿದೆ.
2016ರ ಅ.31ರ ವೇಳೆಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಕೇಡರ್‌ಗಳ ಒಟ್ಟು 25,128 ಹುದ್ದೆಗಳು ಖಾಲಿಯಿವೆ. ಅದರಲ್ಲಿ 2018ರ ಅಂತ್ಯಕ್ಕೆ ನೇರ ನೇಮಕಾತಿ ಮೂಲಕ 19,464 ಮತ್ತು ಬಡ್ತಿ ಮೂಲಕ 4,411 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ನೇಮಕಾತಿಗೆ ಸರಕಾರ 2016ರ ಆ.2ರಂದು ಆದೇಶ ಮಾಡಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಪೊಲೀಸ್ ಇಲಾಖೆಯಲ್ಲಿ ವಿವಿಧ ವಿಭಾಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ವರ್ಗೀಕರಿಸಲಾಗುವುದು. ಎಪ್ರಿಲ್ ಎರಡನೆ ವಾರದಿಂದ ನೇಮಕ ಪ್ರಕ್ರಿಯೆ ಆರಂಭಿಸಿ ಡಿಸೆಂಬರ್ ಅಂತ್ಯದೊಳಗೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದೇ ಮಾರ್ಗಸೂಚಿಯನ್ನು 2017 ಮತ್ತು 2018 ಸಾಲಿನ ನೇಮಕಾತಿಗೆ ಅನುಸರಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.
ಕ್ರಿಯಾ ಯೋಜನೆಯಂತೆ 2017ರಲ್ಲಿ 4,046 ಕಾನ್ಟ್ಸೇಬಲ್, 313 ಪಿಎಸ್‌ಐ ಮತ್ತು 2018ರಲ್ಲಿ 4,045 ಕಾನ್ಟ್ಸೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅದರಲ್ಲಿ 164 ಸಬ್ ಇನ್ಸಪೇಕ್ಟರ್ (ಸಿವಿಲ್) 38, ಆರ್‌ಎಸ್‌ಐ(ಸಿಎಆರ್/ಡಿಎಆರ್), 9 ಪಿಎಸ್‌ಐ, 28 ವಿಶೇಷ ಆರ್‌ಎಸ್‌ಐ(ಕೆಎರ್ಸ್ಸಾಪಿ), ಕೆಎಸ್‌ಐಎಸ್‌ಎಫ್, 69 ಎಸ್‌ಐ, ಕಾನ್ಟ್ಸೇಬಲ್ 2,111 (ಸಿವಿಲ್), 688 ಎಸಿಪಿ(ಸಿಎಆರ್/ಡಿಎಆರ್), 849 ವಿಶೇಷ ಕೆಎರ್ಸ್ಸಾಪಿ, ಪೊಲೀಸ್ ಕಾನ್ಟ್ಸೇಬಲ್ 395 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸರಕಾರವು ನ್ಯಾಯಪೀಠಕ್ಕೆ ತಿಳಿಸಿದೆ.







