ಈ ದೀಪಾವಳಿಗೆ ಅತ್ತಾರಿ ಗಡಿಯಲ್ಲಿ ಸಿಹಿತಿಂಡಿಗಳ ವಿನಿಮಯವಿಲ್ಲ

ಅಮೃತಸರ,ಅ.30: ಈ ಬಾರಿ ಅತ್ತಾರಿ/ವಾಘಾ ಭಾರತ-ಪಾಕಿಸ್ತಾನ ಗಡಿಯಲ್ಲಿ ದೀಪಾವಳಿ ಈ ಹಿಂದಿನಂತಿಲ್ಲ. ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಬಿಎಸ್‌ಎಫ್ ಇಂದು ಪಾಕಿಸ್ತಾನಿ ರೇಂಜರ್‌ಗಳೊಂದಿಗೆ ಸಿಹಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಿಲ್ಲ.
ಬಿಎಸ್‌ಎಫ್ ಮತ್ತು ಪಾಕಿಸ್ತಾನಿ ರೇಂಜರ್ಸ್ ಈ ಹಿಂದೆಲ್ಲ ದೀಪಾವಳಿ ಮತ್ತು ಈದ್ ಗಳಂತಹ ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ,ಉಭಯ ರಾಷ್ಟ್ರಗಳ ಸ್ವಾತಂತ್ರೋತ್ಸವ ಗಳ ವೇಳೆ ಸಿಹಿತಿಂಡಿಗಳು ಮತ್ತು ಉಡುಗೊರೆಗಳನ್ನು ವಿನಿಮಯಿಸಿಕೊಳ್ಳುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿವೆ.
ಆದರೆ ಕಳೆದ 2-3 ವರ್ಷಗಳಲ್ಲಿ ಎರಡೂ ಕಡೆಗಳ ಗಡಿ ರಕ್ಷಣಾ ಪಡೆಗಳು ಕೆಲವು ಸಂದರ್ಭಗಳಲ್ಲಿ ಈ ಸಂಪ್ರದಾಯವನ್ನು ಪಾಲಿಸಿರಲಿಲ್ಲ.
Next Story





