ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನಾಚರಣೆ

ಚಿಕ್ಕಮಗಳೂರು, ಅ.30: ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 10 ಪ್ರೌಢ ಶಾಲೆಗಳಿಂದ 24 ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಎಂ.ಇ.ಎಸ್. ಪ್ರೌಢಶಾಲೆ ಕುಮಾರಿ ಧಾರಣಿ, ಎನ್.ಭುವನೇಂದ್ರ ಪ್ರೌಢಶಾಲೆಯ ಕುಮಾರಿ ಕವನಾ, ಸೈಂಟ್ ಜ್ಯೋಸೆಫ್ ಪ್ರೌಢಶಾಲೆ ಯ ನಿಶ್ಚಿತಾ ಎಸ್. ಇವರಿಗೆ ಬಹುಮಾನ ವಿತರಿಸಲಾಯಿತು.
ನಂತರ ಜಿಲ್ಲಾ ವಿಚಕ್ಷಣಾಧಿಕಾರಿಗಳು ಡಾ. ಬಿ.ಎಲ್. ಕಲ್ಪನಾ ಮಾತನಾಡಿ, ವಿದ್ಯಾರ್ಥಿಗಳಿಗೆ ಅಯೋಡಿನ್ ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಅರಿವು ಮೂಡಿಸಿದರು ಹಾಗೂ ಅಯೋಡಿನ್ ಉಪ್ಪಿನ ಪ್ರಾತ್ಯಕ್ಷಿತೆಯನ್ನು ತೋರಿಸಿದರು.
ಮಲೆನಾಡು ವಿದ್ಯಾಸಂಸ್ಥೆಯ ಪೌಢಶಾಲಾ ಭಾಗದ ಉಪ ಪ್ರಾಂಶುಪಾಲೆ ಸುಶೀಲಾ ಜೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು, ವಿಜ್ಞಾನ ಶಿಕ್ಷಕಿ ಕೌಸರ್ ಫಾತಿಮಾ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಮಯದಲ್ಲಿ ಹಿರಿಯ ಶಿಕ್ಷಕ ಲೋಕೇಶ್ ಬಿ.ಎಂ., ಜಿಲ್ಲಾ ಆರ್.ಸಿ.ಎಚ್.ಅಧಿಕಾರಿಗಳಾದ ಡಾ.ಎಸ್.ಜಿ. ಕಿರಣ್, ಡಾ.ಮಹಂತೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಎಚ್.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







