ನ.2: ಸರ್ವಧರ್ಮ ದೀಪಾವಳಿ
ಉಡುಪಿ, ಅ.30: ಉಡುಪಿ ಶೋಕಮಾತಾ ಇಗರ್ಜಿಯ ಸೌಹಾರ್ದ ಸಮಿತಿ ಕೆಥೊಲಿಕ್ ಸಭಾದ ವತಿಯಿಂದ ಸರ್ವಧರ್ಮ ದೀಪಾವಳಿ ಕಾರ್ಯಕ್ರಮವನ್ನು ನ.2ರಂದು ಸಂಜೆ 5:30ಕ್ಕೆ ಶೋಕಮಾತಾ ಇಗರ್ಜಿ ವಠಾರದಲ್ಲಿ ಆಯೋಜಿಸಲಾಗಿದೆ. ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ಫ್ರೆಡ್ ಮಸ್ಕರೇನ್ಹಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲೆ ಮಾಧವಿ ಭಂಡಾರಿ, ಡಾ.ಸುಶೀಲ್ ಜತ್ತನ್ನ, ಖಲೀಲ್ ಅಹ್ಮದ್ ಭಾಗವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಬೃಹತ್ ಗಾತ್ರದ ಗೋಪುರ ದೀಪದ ಪ್ರದರ್ಶನ, ಗೂಡುದೀಪಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದುಪ್ರಕಟನೆ ತಿಳಿಸಿದೆ.
Next Story





