ನಾಳೆ ಸುಳ್ಯದಲ್ಲಿ ಸವಿತಾ ಕ್ರೀಡಾಕೂಟ
ಸುಳ್ಯ, ಅ.30: ಸುಳ್ಯದಲ್ಲಿ ಡಿ.13ರಂದು ನಡೆಯಲಿರುವ ಬೃಹತ್ ಸವಿತಾ ಸಮಾವೇಶಕ್ಕೆ ಪೂರ್ವಭಾವಿಯಾಗಿ ನ.1ರಂದು ಸವಿತಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿ ಪಕ್ಕದ ಸರಕಾರಿ ಪಪೂ ಕಾಲೇಜಿನ ಮೈದಾನದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಸುಳ್ಯ, ಪುತ್ತೂರು, ಕಾಸರಗೋಡು ಹಾಗೂ ಮಡಿಕೇರಿ ತಾಲೂಕುಗಳ ಸವಿತಾ ಸಮಾಜದ ಬಾಂಧವರು ಭಾಗವಹಿಸಬೇಕು ಎಂದು ಸುಳ್ಯ ವಿಭಾಗ ಮಟ್ಟದ ಸವಿತಾ ಸಮಾವೇಶದ ಸಂಘಟನಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಕೋರಿದ್ದಾರೆ.
ನ.1ರಂದು ಬೆಳಗ್ಗೆ 8:30ಕ್ಕೆ ರಾಷ್ಟ್ರೀಯ ಕ್ರೀಡಾಪಟುಗಳಾದ ಅಶ್ವಿತಾ ಬಳ್ಪ ಹಾಗೂ ಸವೀನ್ ಪಂಜ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಸೈನಿಕ ಶ್ರೀಧರ ಹರಿಹರ ಪಲ್ಲತ್ತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





