Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಟಿಪ್ಪು ಜಯಂತಿಯ ಔಚಿತ್ಯವೇನು?

ಟಿಪ್ಪು ಜಯಂತಿಯ ಔಚಿತ್ಯವೇನು?

ವಾರ್ತಾಭಾರತಿವಾರ್ತಾಭಾರತಿ30 Oct 2016 11:44 PM IST
share
ಟಿಪ್ಪು ಜಯಂತಿಯ ಔಚಿತ್ಯವೇನು?

 ಭಾರತದ ಸ್ವಾತಂತ್ರ ಹೋರಾಟಗಳಿಗೆ ಹಲವು ಮುಖಗಳಿವೆ, ಹಲವು ಆಯಾಮಗಳಿವೆ. ಭಗತ್‌ಸಿಂಗ್, ನೇತಾಜಿಯಂಥವರಿಗೆ ಬ್ರಿಟಿಷರನ್ನು ಓಡಿಸುವುದಷ್ಟೇ ಸ್ವಾತಂತ್ರದ ಮುಖ್ಯ ಗುರಿಯಾಗಿತ್ತು. ಆ ನಿಟ್ಟಿನಲ್ಲೇ ತಮ್ಮ ಹೋರಾಟ ತಂತ್ರವನ್ನು ಅವರು ರೂಪಿಸಿದ್ದರು. ನೇತಾಜಿ ಅದಕ್ಕಾಗಿ ಇನ್ನೊಂದು ಅಡ್ಡಹಾದಿಯನ್ನು ಹಿಡಿದಿದ್ದರು. ಇನ್ನೊಬ್ಬ ಸರ್ವಾಧಿಕಾರಿ ಹಿಟ್ಲರ್‌ನ ಬೆಂಬಲದೊಂದಿಗೆ ಭಾರತದ ಸರ್ವಾಧಿಕಾರಿಗಳನ್ನು ಓಡಿಸುವ ಕನಸು ಕಂಡರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಸ್ವಾತಂತ್ರದ ಕಲ್ಪನೆ ಇನ್ನಷ್ಟು ವಿಸ್ತಾರವಾಗಿತ್ತು. ಬ್ರಿಟಿಷರು ಬರುವ ಮೊದಲು ಈ ದೇಶದ ಕೆಳಜಾತಿಯ ಜನರು ಸ್ವತಂತ್ರರೇನೂ ಆಗಿರಲಿಲ್ಲ. ಶಿಕ್ಷಣ, ಭೂಮಿ, ನೀರು ಮೊದಲಾದ ಮೂಲಭೂತ ಹಕ್ಕುಗಳೇ ಕೆಳಜಾತಿಯವರಿಗೆ ಇದ್ದಿರಲಿಲ್ಲ. ಆದ್ದರಿಂದ ಬ್ರಿಟಿಷರು ಈ ದೇಶವನ್ನು ತೊರೆದಾಕ್ಷಣ ಕೆಳಜಾತಿಯ ಜನರಿಗೆ ಸ್ವಾತಂತ್ರ ಸಿಗುತ್ತದೆ ಎಂಬ ಧೈರ್ಯ ಅಂಬೇಡ್ಕರ್ ಅವರಿಗಿರಲಿಲ್ಲ. ಅಸ್ಪಶ್ಯತೆ, ಜಾತೀಯತೆ ಅಳಿಯದೇ ಈ ದೇಶದ ಕೆಳಜಾತಿಯ ಜನರಿಗೆ ಸ್ವಾತಂತ್ರ ಸಿಗಲಾರದು ಎನ್ನುವ ಅರಿವು ಅವರಿಗಿತ್ತು. ಆದುದರಿಂದ ಈ ದೇಶದ ಪುರೋಹಿತಶಾಹಿ ವ್ಯವಸ್ಥೆಯಿಂದ ಬಿಡುಗಡೆ ಪಡೆದುಕೊಳ್ಳುವುದು ಅವರಿಗೆ ಬಹುಮುಖ್ಯವಾಗಿತ್ತು. ಗಾಂಧೀಜಿಯವರ ಹೋರಾಟ ಇವರೆಲ್ಲರಿಗಿಂತ ಭಿನ್ನವಾಗಿತ್ತು. ಅಸ್ಪಶ್ಯರನ್ನೂ ಜೊತೆಗೂಡಿಸಿಕೊಂಡು ಸರ್ವರನ್ನೂ ತನ್ನ ಹೋರಾಟದಲ್ಲಿ ತೊಡಗಿಸಿಕೊಂಡ ಅವರು ಅಂತರಂಗದ ಬದಲಾವಣೆಗಳ ಮೂಲಕ ಸ್ವಾತಂತ್ರದ ದಾರಿಯನ್ನು ಹುಡುಕಿದರು. ಅಂತರಂಗದಲ್ಲಿ ಬದಲಾವಣೆಗಳಾಗದೆ ಹೊರಗಿನ ಬದಲಾವಣೆಗಳು ಈ ದೇಶದಲ್ಲಿ ಪರಿವರ್ತನೆಗಳನ್ನು ತರಲಾರವು ಎಂದು ಅವರು ನಂಬಿದ್ದರು.
 ಅದೇನೇ ಇರಲಿ, ಜನರಿಂದ ಹುಟ್ಟಿದ ಹೋರಾಟಗಳನ್ನು ನಾವು ಸ್ವಾತಂತ್ರ ಹೋರಾಟಗಳೆಂದು ಭಾವಿಸಬಹುದೇ ಹೊರತು ರಾಜಮಹಾರಾಜರು ತಮ್ಮ ರಾಜ್ಯಗಳನ್ನು,ತಮ್ಮ ಅರಸೊತ್ತಿಗೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟಗಳನ್ನು ಈ ಕಾರಣಕ್ಕಾಗಿಯೇ ನಾವು ಸ್ವಾತಂತ್ರ ಹೋರಾಟ ಎಂದು ಪರಿಗಣಿಸಲಾಗುವುದಿಲ್ಲ. ರಾಜಸತ್ತೆಯ ಹೋರಾಟ ಅಂತಿಮವಾಗಿ ರಾಜಕೀಯ ಅಧಿಕಾರವನ್ನು ಜನರ ಕೈಗೆ ಕೊಡುವುದಿಲ್ಲ. ಈ ಕಾರಣಕ್ಕೇ ಈ ದೇಶದಲ್ಲಿ ನೂರಾರು ಅರಸರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರಾದರೂ ಅದನ್ನು ಸಂಪೂರ್ಣವಾಗಿ ಸ್ವಾತಂತ್ರ ಹೋರಾಟವೆಂದು ಒಪ್ಪಲು ಕಷ್ಟವಾಗುತ್ತದೆ. ಈ ಅರಸರು ತಮ್ಮ ನೆಲಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಡಿದರೇ ವಿನಃ ಇಡೀ ಭಾರತದಿಂದ ಬ್ರಿಟಿಷರನ್ನು ಓಡಿಸುವ ಕಲ್ಪನೆ ಅವರಲ್ಲಿರಲಿಲ್ಲ. ಅಥವಾ ಜನರ ಒಳಿತೂ ಅವರ ಗುರಿಯಾಗಿರಲಿಲ್ಲ. ಬ್ರಿಟಿಷರು ಒಬ್ಬ ರಾಜನ ವಿರುದ್ಧ ಹೋರಾಡುವಾಗ, ಇದೇ ನೆಲದ ಇನ್ನೊಬ್ಬ ರಾಜ ಬ್ರಿಟಿಷರಿಗೆ ನೆರವನ್ನು ನೀಡುತ್ತಿದ್ದ. ಟಿಪ್ಪುವಿನ ವಿರುದ್ಧ ಹೋರಾಡುವಾಗ ಮರಾಠರು ಮತ್ತು ನಿಜಾಮರು ಬ್ರಿಟಿಷರಿಗೆ ಸಹಕರಿಸಿದ್ದರು. ಮುಂದೆ ಇದೇ ಮರಾಠರು ತಮ್ಮ ನೆಲಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿ ಸೋತರು. ಮರಾಠರ ಹೋರಾಟವನ್ನು ನಾವು ‘ಸ್ವಾತಂತ್ರಕ್ಕಾಗಿ ಹೋರಾಟ’ ಎಂದು ಕರೆಯಲು ಸಾಧ್ಯವೇ? ಮರಾಠರು ಬ್ರಿಟಿಷರ ವಿರುದ್ಧ ಹೋರಾಡಿದಾಗ ಈ ನೆಲದ ದಲಿತರು ಬ್ರಿಟಿಷರ ಪರವಾಗಿ ನಿಂತರು. ಯಾಕೆಂದರೆ ಮರಾಠರು ಅನುಸರಿಸುತ್ತಿದ್ದ ಜಾತೀಯತೆ, ಅಸ್ಪಶ್ಯತೆ ಅವರನ್ನು ಅನ್ಯರನ್ನಾಗಿಸಿತ್ತು. ಮರಾಠರಿಗಿಂತ ಬ್ರಿಟಿಷರೇ ವಾಸಿ ಎಂದು ಆ ದಲಿತರಿಗೆ ಅನ್ನಿಸಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಟಿಪ್ಪು ಜಯಂತಿಯನ್ನು ನಾವು ಯಾಕೆ ಆಚರಿಸಬೇಕು ಎಂಬ ಪ್ರಶ್ನೆಗೆ ನಮ್ಮಿಂದ ಹೊರಬೀಳುವ ಮೊದಲ ಉತ್ತರ ‘ಆತ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ’ ಎನ್ನುವುದಾಗಿದೆ. ತನ್ನ ರಾಜಪ್ರಭುತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಟಿಪ್ಪು ಬ್ರಿಟಿಷರ ಜೊತೆ ನಡೆಸಿದ್ದ ಹೋರಾಟವನ್ನು ಸ್ವಾತಂತ್ರ ಹೋರಾಟ ಎಂದು ಕರೆಯಬಹುದೇ ಎಂಬ ಪ್ರಶ್ನೆ ಹುಟ್ಟುವುದು ಇದೇ ಸಂದರ್ಭದಲ್ಲಿ. ಆದರೆ ಕರ್ನಾಟಕದ ಪಾಲಿಗೆ ಈತ ಬರೇ ರಾಜನಾಗಿರಲಿಲ್ಲ. ಈತ ತಳಸ್ತರದ ಜನರ ರಾಜನಾಗಿದ್ದ ಎನ್ನುವ ಕಾರಣಕ್ಕಾಗಿ ಈತನ ಹೋರಾಟವನ್ನು ನಾವು ಜನರ ಹೋರಾಟ ಎಂದು ಕರೆಯಬೇಕಾಗಿದೆ. ಟಿಪ್ಪು ಈ ನಾಡಿಗಾಗಿ ಕೊಟ್ಟ ಕೊಡುಗೆ, ಆತ ಸಾಮಾಜಿಕ ನ್ಯಾಯಕ್ಕಾಗಿ ಜಾರಿಗೊಳಿಸಿದ ಕಾನೂನು, ರೈತರು, ದಲಿತರಿಗಾಗಿ ನೀಡಿದ ಭೂಮಿ, ಜಮೀನ್ದಾರರು ಮತ್ತು ಪುರೋಹಿತಶಾಹಿಗಳ ವಿರುದ್ಧ ನಡೆಸಿದ ಹೋರಾಟ ಇವೆಲ್ಲವೂ ಆತನನ್ನು ಈ ನೆಲದ ಜನರ ಪರವಾಗಿ ನಿಲ್ಲಿಸುತ್ತವೆ. ಶೃಂಗೇರಿ, ಕೊಲ್ಲೂರು, ಶ್ರೀರಂಗಪಟ್ಟಣ ಮೊದಲಾದ ಕ್ಷೇತ್ರಗಳ ದೇವಸ್ಥಾನಗಳಿಗೆ ಆತ ನೀಡಿರುವ ಕೊಡುಗೆ, ರಕ್ಷಣೆ ಇವೆಲ್ಲವೂ ಆತನ ‘ರಾಜಧರ್ಮ’ ಪರಿಪಾಲನೆಯನ್ನು ಎತ್ತಿ ಹಿಡಿಯುತ್ತವೆ. ಮೈಸೂರು ಭಾಗದಲ್ಲಿ ದಲಿತರು ತಲೆತಲಾಂತರಗಳಿಂದಲೂ ಅನುಭವಿಸುತ್ತಿರುವ ಭೂಮಿ ಟಿಪ್ಪು ಸುಲ್ತಾನ್ ನೀಡಿರುವುದು ಎನ್ನುವುದಕ್ಕೆ ದಾಖಲೆಗಳಿವೆ. ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ಆತ ಅನುಸರಿಸಿದ್ದ ಆರ್ಥಿಕ ನೀತಿಯೂ ಪ್ರಜಾಸತ್ತಾತ್ಮಕ ನೆಲೆಯಲ್ಲಿದೆ. ಕನ್ನಂಬಾಡಿ ಅಣೆಕಟ್ಟಿನ ಕನಸು ಟಿಪ್ಪುವಿನದ್ದು ಎನ್ನುವುದಕ್ಕೆ ಈಗಲೂ ಕನ್ನಂಬಾಡಿ ದ್ವಾರದ ಬಳಿ ಸಾಕ್ಷಿಯಿದೆ. ರಾಕೆಟ್ ತಂತ್ರಜ್ಞಾನವನ್ನು ಕಂಡುಕೊಂಡಿದ್ದ ಟಿಪ್ಪು ರಾಜತಾಂತ್ರಿಕತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ್ದ. ಫ್ರೆಂಚರೂ ಸೇರಿದಂತೆ ಇರಾನ್, ಇರಾಕ್ ಕಡೆಗೂ ಪತ್ರವ್ಯವಹಾರವನ್ನು ಇಟ್ಟುಕೊಂಡಿದ್ದ. ಮೈಸೂರು ರಾಜ್ಯ ಇವನ ಆಡಳಿತದಲ್ಲಿ ದುಪ್ಪಟ್ಟು ವಿಸ್ತಾರವನ್ನು ಪಡೆಯಿತು. ಒಡೆಯರ್ ಕೈಯಲ್ಲಿ ನಾಯಿನರಿಗಳ ಪಾಲಾಗುತ್ತಿದ್ದ ಮೈಸೂರನ್ನು ಉಳಿಸಿ ಬೆಳೆಸಿದವರು ಹೈದರಾಲಿ ಮತ್ತು ಟಿಪ್ಪು. ಆದ್ದರಿಂದಲೇ ಟಿಪ್ಪು ಕನ್ನಡ ಅಸ್ಮಿತೆಯ ಒಂದು ಭಾಗವಾಗಿದ್ದಾನೆ. ಬ್ರಿಟಿಷರ ವಿರುದ್ಧದ ಟಿಪ್ಪು ಹೋರಾಟ ಸಕಲ ಕನ್ನಡಿಗರ ಹೋರಾಟವಾಗುವುದೂ ಇದೇ ಕಾರಣಕ್ಕೆ. ಟಿಪ್ಪುವಿನ ಪತನ ಈ ನೆಲದ ಜನರ ಪತನವೂ ಹೌದು ಎನ್ನುವುದು ಭವಿಷ್ಯದಲ್ಲಿ ಸಾಬೀತಾಯಿತು. ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರು ತನ್ನ ಆಡಳಿತದಲ್ಲಿ ಟಿಪ್ಪುವಿನ ಬಹಳಷ್ಟು ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಿದರು ಎನ್ನುವುದನ್ನೂ ನಾವು ಕಾಣುತ್ತೇವೆ. ಅದರಲ್ಲಿ ಅವರು ನಿರ್ಮಾಣ ಮಾಡಿದ ಕನ್ನಂಬಾಡಿ ಅಣೆಕಟ್ಟೂ ಒಂದು. ನಾವಿಂದು ಟಿಪ್ಪುವನ್ನು ಗೌರವಿಸುವುದೆಂದರೆ ಆತನ ಅರಸೊತ್ತಿಗೆಯನ್ನು ಗೌರವಿಸುವುದಲ್ಲ. ಅರಸೊತ್ತಿಗೆಯ ಆರಾಧನೆಯೂ ಅಲ್ಲ. ಒಬ್ಬ ರಾಜನಾಗಿಯೂ ತನ್ನ ಆಡಳಿತದಲ್ಲಿ ಪ್ರಜಾಸತ್ತಾತ್ಮಕವಾದ ಅಂಶಗಳನ್ನು ಅಳವಡಿಸಿಕೊಂಡಿದ್ದ ಎಂಬ ಕಾರಣಕ್ಕ್ಕೆ ಟಿಪ್ಪುವನ್ನು ಗೌರವಿಸಬೇಕಾಗಿದೆ. ಟಿಪ್ಪು ಜಯಂತಿ ಆಚರಣೆಯೆಂದರೆ ದಲಿತರ ಭೂಮಿಯ ಹಕ್ಕಿನ ಆಚರಣೆ. ಜಮೀನ್ದಾರರ ಸರ್ವಾಧಿಕಾರಕ್ಕೆ ಕಡಿವಾಣ ಹಾಕಿದ ಕ್ರಮದ ಆಚರಣೆ. ಶೃಂಗೇರಿ, ಕೊಲ್ಲೂರು ಮೊದಲಾದೆಡೆ ಟಿಪ್ಪು ಮೆರೆದ ಸೌಹಾರ್ದದ ಆಚರಣೆ. ಅಸ್ಪಶ್ಯತೆಯ ವಿರುದ್ಧ ಟಿಪ್ಪು ನೀಡಿದ್ದ ಆದೇಶಗಳ ಆಚರಣೆ. ಇಂದು ನಿಜಕ್ಕೂ ರಾಜರ ಆಡಳಿತ ವೈಭವೀಕರಣಗೊಳ್ಳುತ್ತಿರುವುದು ದಸರಾ ಮೂಲಕವಾಗಿದೆ. ವೈದಿಕ ಶಾಹಿ ಮತ್ತು ರಾಜಪ್ರಭುತ್ವ ಎರಡರ ವೈಭವೀಕರಣ ಮೈಸೂರು ದಸರಾದಲ್ಲಿ ನಡೆಯುತ್ತಿದೆ. ಬ್ರಿಟಿಷರು ಮತ್ತು ವೈದಿಕಶಾಹಿಯ ಕೈಗೊಂಬೆಗಳಾಗಿದ್ದ ಒಡೆಯರ್ ಆಡಳಿತದ ವೈಭವೀಕರಣ ಪ್ರಜಾಸತ್ತೆಗೆ ಮಾಡುವ ಅವಮಾನ. ಆದರೆ ಟಿಪ್ಪು ಆಡಳಿತ ಈ ನೆಲದ ಜನರನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸುವುದರಿಂದ ಟಿಪ್ಪು ಜಯಂತಿಯೇ ಕನ್ನಡನಾಡಿನ ನಿಜವಾದ ದಸರಾವಾಗಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X