Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೊಸ ಚಿಕಿತ್ಸಾ ವಿಧಾನ: ಕ್ಯಾನ್ಸರ್...

ಹೊಸ ಚಿಕಿತ್ಸಾ ವಿಧಾನ: ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣ

ಜಾಕ್ವೆಲಿನ್ ಹೊವಾರ್ಡ್ಜಾಕ್ವೆಲಿನ್ ಹೊವಾರ್ಡ್30 Oct 2016 11:48 PM IST
share
ಹೊಸ ಚಿಕಿತ್ಸಾ ವಿಧಾನ: ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇಮ್ಯುನೊಥೆರಪಿ(ದೇಹದ ಪ್ರತಿರಕ್ಷಣಾ ಸಾಮರ್ಥ್ಯ ಉದ್ದೀಪಿಸುವ ಚಿಕಿತ್ಸಾ ವಿಧಾನ) ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವ ಕೀಟ್ರೂಡಾ ಎಂಬ ಔಷಧದ ಬಳಕೆಗೆ ಒಪ್ಪಿಗೆ ನೀಡಿದೆ. ಈ ವಿಧಾನವನ್ನು ಶ್ವಾಸಕೋಶ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿ ಬಳಸಬಹುದಾಗಿದೆ.

ಅಂದರೆ ಮೊಟ್ಟಮೊದಲ ಬಾರಿಗೆ ಕ್ಯಾನ್ಸರ್ ರೋಗಿಯೊಬ್ಬರು ಕಿಮೋಥೆರಪಿ ಬದಲಾಗಿ ಇಮ್ಯುನೊಥೆರಪಿ ಚಿಕಿತ್ಸೆ ಪಡೆಯಲಿದ್ದಾರೆ. ಅಂದರೆ ಭವಿಷ್ಯದಲ್ಲಿ ಕಾನ್ಸರ್ ಚಿಕಿತ್ಸೆ ನಮ್ಮ ದೇಹದ ಪ್ರತಿರೋಧಕ ಶಕ್ತಿಯನ್ನೇ ಅವಲಂಬಿಸಿರುತ್ತದೆ. ಆದರೆ ಇದು ವಾಸ್ತವವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ. ಇದರ ಗುಣಾವಗುಣಗಳು ಏನು?
ಖಂಡಿತವಾಗಿಯೂ ಇದು ಕ್ಯಾನ್ಸರ್ ಚಿಕಿತ್ಸೆಗೆ ನೂತನ ಸ್ವತಂತ್ರ ವಿಧಾನವಾಗಲಿದೆ ಎಂಬ ವಿಶ್ವಾಸವನ್ನು ಸಿಯಾಟೆಲ್‌ನಲ್ಲಿರುವ ಫ್ರೆಡ್ ಹಚಿನ್‌ಸರ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ಪ್ರತಿರಕ್ಷಣಾ ವಿಭಾಗ ಮುಖ್ಯಸ್ಥ ಡಾ.ಫಿಲಿಪ್ ಗ್ರೀನ್‌ಬರ್ಗ್ ವ್ಯಕ್ತಪಡಿಸುತ್ತಾರೆ. ನ್ಯೂಯಾರ್ಕ್‌ನಲ್ಲಿ ಕಳೆದ ತಿಂಗಳು ನಡೆದ ಅಂತಾರಾಷ್ಟ್ರೀಯ ಕ್ಯಾನ್ಸರ್ ಇಮ್ಯುನೊಥೆರಪಿ ಸಮ್ಮೇಳನದ ಸಂವಾದದ ವೇಳೆ ಗ್ರೀನ್‌ಬರ್ಗ್ ಈ ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ನಾವು ಕ್ಯಾನ್ಸರ್ ಚಿಕಿತ್ಸೆಯ ಮೂರು ಸ್ತಂಭಗಳ ಬಗ್ಗೆ ಮಾತನಾಡುತ್ತೇವೆ. ಅವುಗಳೆಂದರೆ ವಿಕಿರಣ ಚಿಕಿತ್ಸೆ, ಕಿಮೋಥೆರಪಿ ಹಾಗೂ ಶಸ್ತ್ರಚಿಕಿತ್ಸೆ. ಇದೀಗ ಇಮ್ಯುನೊಥೆರಪಿ ಎಂಬ ನಾಲ್ಕನೆ ಸ್ತಂಭವೂ ಸ್ಪಷ್ಟವಾಗಿ ಗೋಚರವಾಗಿದೆ ಎನ್ನುವುದು ಅವರ ಅಭಿಮತ.
ಭವಿಷ್ಯದಲ್ಲಿ ಈ ಚಿಕಿತ್ಸಾ ವಿಧಾನವನ್ನೇ ಅವಲಂಬಿಸಬಹುದು ಅಥವಾ ಇತರ ಚಿಕಿತ್ಸಾ ವಿಧಾನಗಳ ಜತೆಗೆ ಪೂರಕವಾಗಿ ಇದನ್ನೂ ಬಳಸಬಹುದು. ಆದರೆ ಭವಿಷ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಧಾನದಲ್ಲಿ ಮಾತ್ರ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಇಮ್ಯುನೊಥೆರಪಿಯ ಭೂತ, ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಅವಲೋಕಿಸೋಣ.

ಬೆಸ್ಸೀ ಹಂತದಿಂದ ಆರಂಭ

1890ರ ಬೇಸಿಗೆಯಲ್ಲಿ, ಬೆಸ್ಸಿ ಎಂದು ಕರೆಯಲ್ಪಡುತ್ತಿದ್ದ 17 ವರ್ಷದ ಎಲಿಝಬೆತ್ ದಶೀಲ್ ಎಂಬಾಕೆಯ ಕೈ ಪ್ಯಾಸೆಂಜರ್ ರೈಲಿನ ಎರಡು ಸೀಟುಗಳ ಮಧ್ಯೆ ಸಿಕ್ಕಿಹಾಕಿಕೊಂಡಿತು. ಹೀಗೆ ಸಿಕ್ಕಿಹಾಕಿಕೊಂಡ ಕೈಭಾಗದಲ್ಲಿ ತೀವ್ರ ನೋವಿನ ಗಂಟು ಕಾಣಿಸಿಕೊಂಡಿತು. ಆಗ ಆಕೆ 28 ವರ್ಷದ ಡಾ.ವಿಲಿಯಂ ಕೋಲೆ ಎಂಬ ವೈದ್ಯನನ್ನು ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡಿ, ಗಾಯಕ್ಕೆ ಚಿಕಿತ್ಸೆ ಪಡೆಯಲು ಮುಂದಾಗುತ್ತಾಳೆ. ಕೈಯಲ್ಲಿ ಕಾಣಿಸಿಕೊಂಡ ಗಂಟಿನಲ್ಲಿ ಸೋಂಕಿನ ಕಾರಣದಿಂದ ಕೀವು ಇರಬಹುದು ಎಂಬ ಸಂಶಯದಿಂದ ಆ ವೈದ್ಯ ಬಯಾಪ್ಸಿ ನಡೆಸುತ್ತಾರೆ. ಆದರೆ ಆಘಾತಕಾರಿ ಅಂಶ ಪತ್ತೆಯಾಗುತ್ತದೆ. ಎಲುಬಿನ ಮೇಲೆ ಸಣ್ಣ ಬೂದುಬಣ್ಣದ ಬೆಳವಣಿಗೆ ಕಂಡುಬರುತ್ತದೆ. ಇದು ಸರ್ಕೋಮಾ ಎಂದು ಕರೆಯಲ್ಪಡುವ ಒಂದು ಬಗೆಯ ಕ್ಯಾನ್ಸರ್.
ಈ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಸಲುವಾಗಿ ಆಕೆಯ ಕೈ ಕತ್ತರಿಸಬೇಕಾಯಿತು. ಆದರೆ ಆ ರೋಗ ಆಕೆಯ ಇತರ ಅಂಗಗಳಿಗೂ ಕ್ಷಿಪ್ರವಾಗಿ ಹಬ್ಬಿತು. 1891ರ ಜನವರಿಯಲ್ಲಿ ಆಕೆ ಮೃತಪಟ್ಟಳು. ಈ ಘಟನೆಯಿಂದ ವಿಚಲಿತರಾದ ಕೋಲೆ ತಮ್ಮ ಇಡೀ ಜೀವನವನ್ನು ಕ್ಯಾನ್ಸರ್ ಸಂಶೋಧನೆಗೆ ಮುಡಿಪಾಗಿಟ್ಟರು.
ಮೆಮೋರಿಯಲ್ ಸ್ಲೋವನ್ ಕೆಟ್ಟೆರಿಂಗ್ ಕ್ಯಾನ್ಸರ್ ಕೇಂದ್ರದ ಪ್ರಕಾರ, ಕೋಲೆ ಅವರನ್ನು ಕ್ಯಾನ್ಸರ್ ಇಮ್ಯುನೊಥೆರಪಿಯ ಜನಕ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ರೋಗಿಗಳಲ್ಲಿ ಸೋಂಕು, ವಾಸಿಯಾಗುವ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಅವರು ತಮ್ಮ ವೃತ್ತಿಜೀವನದಲ್ಲಿ ಕಂಡುಕೊಂಡರು. ಕೃತಕವಾಗಿ ಒಂದು ಸೋಂಕನ್ನು ರೋಗಿಗಳಲ್ಲಿ ಸೃಷ್ಟಿಸುವುದರಿಂದ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಬಹುದು ಎಂಬ ನಿರ್ಧಾರಕ್ಕೆ ಅವರು ಬಂದರು.

ಈ ಯೋಚನೆಯನ್ನು ಪರೀಕ್ಷಿಸಲು, ಕೋಲೆ ಅವರು ಬ್ಯಾಕ್ಟೀರಿಯಾಗಳ ಸಮ್ಮಿಶ್ರಣವನ್ನು ಸೃಷ್ಟಿಸಿ, ಕ್ಯಾನ್ಸರ್ ರೋಗಿಗಳಲ್ಲಿ ಸೋಂಕು ಉಂಟಾಗುವಂತೆ ಮಾಡಲು 1893ರಲ್ಲಿ ಇದನ್ನು ಬಳಸಿದರು. ಕೆಲವೊಮ್ಮೆ ಈ ಬ್ಯಾಕ್ಟೀರಿಯಾ, ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ, ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುವುದು ಮಾತ್ರವಲ್ಲದೇ, ಟ್ಯೂಮರ್ ಸೇರಿದಂತೆ ದೇಹದಲ್ಲಿರುವ ಯಾವುದೇ ಇತರ ಅಸಹಜ ಅಂಶಗಳನ್ನು ಹೊರಹಾಕುವಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕೋಲೆ ಪ್ರತಿಪಾದಿಸಿದರು. ಒಂದು ಪ್ರಕರಣದಲ್ಲಿ, ಕೋಲೆ ಕ್ಯಾನ್ಸರ್ ರೋಗಿಗೆ ಸ್ಟ್ರೆಪ್ಟೊಕೊಕ್ಕಲ್ ಬ್ಯಾಕ್ಟೀರಿಯಾವನ್ನು ಚುಚ್ಚುಮದ್ದಿನ ಮೂಲಕ ನೀಡಿದರು. ಇದು ಚರ್ಮದಲ್ಲಿ ಎರಿಸ್ಪೈಲಸ್ ಎಂಬ ಸೋಂಕಿಗೆ ಕಾರಣವಾಗುತ್ತದೆ. ಇದರ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆ ಹೋರಾಡುತ್ತದೆ ಎನ್ನುವುದು ಅವರ ನಂಬಿಕೆಯಾಗಿತ್ತು.
ಕೋಲೆ ಅವರ ಈ ಯೋಚನೆ ಬಗ್ಗೆ ಅಪರೂಪಕ್ಕೊಮ್ಮೆ ಅಧ್ಯಯನಗಳು ನಡೆದವು. ಆದರೆ 1900ರ ಬಳಿಕ ಸಂಶೋಧನೆಗಳು ನಡೆದರೂ, ಇತ್ತೀಚಿನವರೆಗೂ ಇದನ್ನು ಕ್ಯಾನ್ಸರ್ ಚಿಕಿತ್ಸಾ ವಿಧಾನವಾಗಿ ಗಂಭೀರವಾಗಿ ಪರಿಗಣಿಸಲಿಲ್ಲ.
ಇಮ್ಯುನೊಥೆರಪಿ ಕಳೆದ ಒಂದು ದಶಕದಲ್ಲಿ ಕ್ರಾಂತಿಕಾರಕ ಪ್ರಗತಿ ಸಾಧಿಸಿತು. ಅಂದರೆ ಈ ಅವಧಿಯಲ್ಲಿ ದೊಡ್ಡ ಮಟ್ಟದ ಪ್ರಯೋಗಗಳು ನಡೆದವು. ಆದರೆ ಇಂದಿಗೆ ಕೂಡಾ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದು ಯಾವ ಪಾತ್ರ ವಹಿಸಬಲ್ಲದು ಎಂಬ ಬಗ್ಗೆ ಪ್ರಶ್ನೆಗಳು ಉಳಿದುಕೊಂಡಿದ್ದವು. ಆದರೆ ಇದೀಗ ಇದು ಸ್ಪಷ್ಟವಾಗಿ ಪರಿಣಾಮಕಾರಿ ವಿಧಾನ ಎಂದು ದೃಢಪಟ್ಟಿದೆ ಎಂದು ಗ್ರೀನ್‌ಬರ್ಗ್ ಹೇಳುತ್ತಾರೆ.
 1908ರಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಗೆದ್ದ ಜರ್ಮನಿಯ ವೈದ್ಯ ಡಾ.ಪಾಲ್ ಎರ್ಲಿಚ್ ಅವರು, ಟ್ಯೂಮರ್ ರೂಪುಗೊಳ್ಳುವುದನ್ನು ತಡೆಯಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಸುವ ಪ್ರಸ್ತಾವವನ್ನು ಮುಂದಿಟ್ಟರು. ಕೋಲೆ ಅವರ ಮಾದರಿಯಲ್ಲಿ ಪ್ರತಿರಕ್ಷಣಾ ಸರ್ವೇಕ್ಷಣೆ ಸಿದ್ಧಾಂತವನ್ನು ಇವರು ಪ್ರತಿಪಾದಿಸಿದರು. ಇಷ್ಟಾಗಿಯೂ 2000ನೇ ಇಸ್ವಿಯವರೆಗೂ, ಈ ಸಿದ್ಧಾಂತವನ್ನು ಸಾರ್ವತ್ರಿಕವಾಗಿ ಸ್ವೀಕರಿಸಿರಲಿಲ್ಲ ಎಂದು ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹೇಳಿದೆ. 2002ರಲ್ಲಿ ನೇಚರ್ ಇಮ್ಯುನಾಲಜಿ ನಿಯತಕಾಲಿಕದಲ್ಲಿ ಪ್ರಕಟವಾದ ಪ್ರಬಂಧದಲ್ಲಿ ಇಮ್ಯುನೊ ಸರ್ವೇಕ್ಷಣೆ ಸಿದ್ಧಾಂತವನ್ನು ಬೆಂಬಲಿಸಲಾಯಿತು.
ಕ್ಯಾನ್ಸರ್ ಇಮ್ಯುನೊಥೆರಪಿ ಎನ್ನುವುದು ನಮ್ಮದೇ ಪ್ರತಿರಕ್ಷಣಾ ವ್ಯವಸ್ಥೆಯನ್ನು ಚಿಕಿತ್ಸಾ ವಿಧಾನವಾಗಿ ಬಳಸಿ, ರೋಗ ಗುರುತಿಸುವ, ನಿಯಂತ್ರಿಸುವ ಹಾಗೂ ಅಂತಿಮವಾಗಿ ಕ್ಯಾನ್ಸರ್ ಗುಣಪಡಿಸುವ ವಿಧಾನ ಎಂದು ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಸಿಇ ಜಿಲ್ ಒಡೆನೆಲ್ ಟೋರ್ಮೆ ಸ್ಪಷ್ಟಪಡಿಸಿದ್ದಾರೆ.
ಹಲವು ಮಂದಿ ಹಲವು ವರ್ಷಗಳ ಕಾಲ, ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ, ಕ್ಯಾನ್ಸರ್ ಚಿಕಿತ್ಸಾ ವಿಧಾನವಾಗಬಹುದು ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲ. ಅದರೆ ಇದೀಗ ಇಡೀ ವೈದ್ಯಕೀಯ ಸಮುದಾಯ ಹಾಗೂ ಕ್ಯಾನ್ಸರ್ ತಜ್ಞರು ಇದೀಗ ಇಮ್ಯುನೊಥೆರಪಿ ಉಳಿದುಕೊಳ್ಳುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ ಎನ್ನುವುದು ಅವರ ಅಭಿಪ್ರಾಯ.

ಒಂದು ಬಗೆಯ ಇಮ್ಯುನೊಥೆರಪಿ ಪಡೆದ ಖ್ಯಾತನಾಮರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಸೇರಿದ್ದಾರೆ. ಇವರು ಮೆಲೋನೋಮ ಎಂಬ ಚರ್ಮದ ಕ್ಯಾನ್ಸರ್ ಹೊಂದಿದ್ದರು. ಕಳೆದ ವರ್ಷ ಶಸ್ತ್ರಚಿಕಿತ್ಸೆ, ರೇಡಿಯೇಷನ್ ಹಾಗೂ ಇಮ್ಯುನೊಥೆರಪಿ ಚಿಕಿತ್ಸಾ ವಿಧಾನದ ಮೂಲಕ ತಾವು ಕ್ಯಾನ್ಸರ್ ಮುಕ್ತರಾಗಿರುವುದಾಗಿ ಅವರು ಘೋಷಿಸಿದ್ದರು. ಕಾರ್ಟರ್ ಅವರು ಕಿಟ್ರೂಡಾ ಸೇವಿಸುತ್ತಿದ್ದರು. ಮೆಲೊನೊಮಾ ಹಾಗೂ ಶ್ವಾಸಕೋಶದ ಕ್ಯಾನ್ಸರ್, ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್ ಚಿಕಿತ್ಸೆಗೆ ಇದನ್ನು ಬಳಸಲು ಅನುಮೋದನೆ ನೀಡಲಾಗಿದೆ. ಆದರೆ ಇದು ಇಮ್ಯುನೊಥೆರಪಿ ಚಿಕಿತ್ಸೆಗೆ ಮಾನ್ಯತೆ ಪಡೆದ ಏಕೈಕ ಔಷಧಿಯಲ್ಲ
ಪ್ರತಿರಕ್ಷಣಾ ವ್ಯವಸ್ಥೆಯನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ವಿಧಾನದಲ್ಲಿ ಸುಧಾರಣೆ ಹಾಗೂ ಪಲಿತಾಂಶವನ್ನು ಕಳೆದ ಐದು ವರ್ಷಗಳಿಂದ ವೌಲ್ಯಮಾಪನ ಮಾಡಲಾಗುತ್ತಿದೆ. ಆದ್ದರಿಂದ ಕ್ಯಾನ್ಸರ್ ಚಿಕಿತ್ಸಾ ವಿಧಾನದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದೇವೆ ಎಂದು ಸ್ಟನ್‌ಫೋರ್ಡ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಮೆಡಿಸಿನ್ ತಜ್ಞ ಡಾ.ಕ್ರಿಸ್ಟಲ್ ಮ್ಯಾಕೆಲ್ ಹೇಳಿದ್ದಾರೆ.
ಇದರ ಅತಿರಂಜನೆ ಬೇಕಾಗಿಲ್ಲ. ಇಮ್ಯುನೊಥೆರಪಿ ತಜ್ಞನಾಗಿ ನಾನು ಅದನ್ನು ಪಕ್ಷಪಾತ ಧೋರಣೆಯಿಂದ ನೋಡಿರಬಹುದು. ಆದರೆ ಇತರ ಸಹೋದ್ಯೋಗಿಗಳು ಇದನ್ನು ಕ್ರಾಂತಿಕಾರಕ ಎನ್ನುತ್ತಿದ್ದಾರೆ. ಈ ಬಣ್ಣನೆಗಳನ್ನು ಕೇಳಿದಾಗ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಾಧನೆ ಆಗುತ್ತಿದೆ ಎಂಬ ಸಂತೋಷ ಹುಟ್ಟುತ್ತದೆ ಎಂದು ಆಕೆ ಹೇಳುತ್ತಾರೆ.
ಹಲವು ಬಗೆಯ ಇಮ್ಯುನೊಥೆರಪಿಗೆ ಅವಕಾಶವಿದೆ. ಚಿಕಿತ್ಸಾ ಲಸಿಕೆಗಳು, ಆ್ಯಂಟಿಭಾಗ ಥೆರಪಿ ಹಾಗೂ ಗುಳಿಗೆಗಳ ಮೂಲಕವೂ ಈ ಚಿಕಿತ್ಸೆ ಸಾಧ್ಯವಿದೆ. ಚುಚ್ಚುಮದ್ದು, ಗುಳಿಗೆ ಅಥವಾ ಕ್ಯಾಪ್ಸೂಲ್ ರೂಪದಲ್ಲಿ ಮತ್ತು ಮುಲಾಮು ರೂಪದಲ್ಲೂ ಬಳಸಲು ಅವಕಾಶವಿದೆ.
ಎಫ್‌ಡಿಎ ಈಗಾಗಲೇ ಸಿಪ್ಯುಲೇಸಿಲ್-ಟಿ ಅಥವಾ ಪ್ರೊವೆಂಜ್ ಎಂಬ ಮೊಟ್ಟಮೊದಲ ಕ್ಯಾನ್ಸರ್ ಚಿಕಿತ್ಸಾ ಲಸಿಕೆಗೆ ಅನುಮತಿ ನೀಡಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉದ್ದೀಪಿಸುತ್ತದೆ. ಆ ಮೂಲಕ ಕ್ಯಾನ್ಸರ್ ಕಣಗಳನ್ನು ನಾಶಪಡಿಸುತ್ತದೆ. ಇದರಿಂದ ವೃಷಣ ಕ್ಯಾನ್ಸರ್‌ಪೀಡಿತ ವ್ಯಕ್ತಿಗಳು ಬದುಕಿ ಉಳಿಯುವ ಸಾಧ್ಯತೆ ಅಧಿಕ ಎನ್ನುವುದು ವೈದ್ಯಕೀಯ ಪ್ರಯೋಗಗಳಿಂದ ದೃಢಪಟ್ಟಿದೆ.
ಟಿ-ವೆಕ್ ಅಥವಾ ಇಮ್ಲಿಜಿಕ್ ಎಂಬ ಇನ್ನೊಂದು ಚಿಕಿತ್ಸಾ ಲಸಿಕೆಗೂ ಎಫ್‌ಡಿಎ 2015ರಲ್ಲಿ ಅನುಮತಿ ನೀಡಿದೆ. ಇದು ಚರ್ಮರೋಗದ ಕ್ಯಾನ್ಸರ್ ಚಿಕಿತ್ಸೆಗೆ ಬಳಕೆಯಾಗುತ್ತದೆ.
ಕೆಲ ಆ್ಯಂಟಿಭಾಗ ಥೆರಪಿಗಳಿಗೂ ಅನುಮೋದನೆ ನೀಡಲಾಗಿದೆ. ಆ್ಯಂಟಿಭಾಗ ಎಂಬ ರಕ್ತದ ಪ್ರೊಟೀನ್, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆ ರೂಪಿಸುವ ಸಲುವಾಗಿ ಇದನ್ನು ಪ್ರಯೋಗಾಲಯದಲ್ಲಿ ಉತ್ಪಾದಿಸಲೂ ಅವಕಾಶವಿದೆ.
ಎಫ್‌ಡಿಎ ಹಲವು ಆ್ಯಂಟಿಭಾಗ-ಔಷಧ ಸಮ್ಮಿಶ್ರಣಗಳಿಗೂ ಅನುಮೋದನೆ ನೀಡಿದೆ. ಇದರಲ್ಲಿ ಕಡ್ಸಿಲಾ ಎನ್ನುವ ಒಂದು ಔಷಧ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ. ಅಂತೆಯೇ ಎಡ್‌ಸೆಟ್ರೀಸ್ ಹಾಗೂ ಜೆವಲಿನ್ ಎಂಬ ಇಂಥ ಔಷಧಗಳು ಕೂಡಾ ವಿವಿಧ ಬಗೆಯ ಕ್ಯಾನ್ಸರ್ ಚಿಕಿತ್ಸೆಗೆ ಸಹಕಾರಿಯಾಗಿದೆ.
  ಇಮ್ಯೂನ್ ಚೆಕ್‌ಪಾಯಿಂಟ್ ಇನ್‌ಹಿಬಿಟರ್ಸ್‌ ಎಂಬ ಇಮ್ಯುನೊಥೆರಪಿ ಔಷಧಕ್ಕೂ ಎಫ್‌ಡಿಎ ಆಂಗೀಕಾರ ನೀಡಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕ್ಯಾನ್ಸರ್ ಕಣಗಳ ಗುಣವನ್ನು ತಡೆಯಬಲ್ಲದು. ಕಾರ್ಟರ್ ಸೇವಿಸುತ್ತಿದ್ದ ಕೀಟ್ರೂಡಾ ಗುಳಿಗೆಯು ಈ ಮಾದರಿಯ ಔಷಧ. ಇಂಥದ್ದೇ ರೀತಿಯ ಒಪ್ಡಿವೊ, ಕಿಡ್ನಿ ಕ್ಯಾನ್ಸರ್ ಚಿಕಿತ್ಸೆಗೆ ಬಳಕೆಯಾಗುತ್ತದೆ ಹಾಗೂ ಶ್ವಾಸಕೋಶ ಕ್ಯಾನ್ಸರ್‌ಗೂ ಇದು ಪ್ರಯೋಜನಕಾರಿ. ಅಂತೆಯೇ ಟೆಸೆಂಟ್ರಿಕ್ ಹಾಗೂ ವೆರ್‌ವ್ೋ ಔಷಧಗಳೂ ಅನುಮೋದನೆ ಪಡೆದಿವೆ.
ಹೆಚ್ಚುವರಿಯಾಗಿ ಸಿಎಆರ್ ಟಿ-ಕೋಶ ಥೆರಪಿ ಸೇರಿದಂತೆ ಹಲವು ಇಮ್ಯುನೊಥೆರಪಿ ವಿಧಾನಗಳು ವೈದ್ಯಕೀಯ ಪರೀಕ್ಷೆ ಹಂತದಲ್ಲಿವೆ. ಈ ವಿಧಾನದಲ್ಲಿ ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯಿಂದ ಟಿ-ಕೋಶಗಳನ್ನು ತೆಗೆದು, ಪ್ರಯೋಗಾಲಯಗಳಲ್ಲಿ ಇದನ್ನು ಮಾರ್ಪಡಿಸಿ, ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವಂತೆ ಮಾಡಲಾಗುತ್ತದೆ. ಇಂಥ ಕಣಗಳನ್ನು ಮತ್ತೆ ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ. ಇದನ್ನು ಲ್ಯುಕೇಮಿಯಾ ಹಾಗೂ ಲಿಂಪೋಮಾ ಚಿಕಿತ್ಸೆಗೆ ಪ್ರಯೋಗ ನಡೆಸಲಾಗುತ್ತಿದೆ.
ಇನ್ನೂ ಆಸಕ್ತಿದಾಯಕ ಅಂಶವೆಂದರೆ, ಸೆಲ್ಯುಲರ್ ಥೆರಪಿ. ಟಿ-ಕೋಶ ಚಿಕಿತ್ಸಾ ವಿಧಾನದಲ್ಲಿ, ಕೃತಕ ಜೀವಶಾಸ್ತ್ರ ಎನಿಸಿದ ಬೆಳವಣಿಗೆ ದೇಹದಲ್ಲಿ ಗೋಚರವಾಗುತ್ತದೆ. ಅಂದರೆ ವಂಶವಾಹಿಗಳನ್ನು ಕೋಶಗಳಿಗೆ ಸೇರಿಸಿ, ಅವುಗಳ ಕಾರ್ಯ ಹಾಗೂ ಗುರುತಿಸುವಿಕೆ ಅಂಶವನ್ನು ಬದಲಿಸಲು ಕೂಡಾ ಅವಕಾಶವಿದೆ ಎನ್ನುವುದು ಗ್ರೀನ್‌ಬರ್ಗ್ ಅವರ ವಿವರಣೆ. ಇಂಥ ಕೆಲ ವಿಧಾನಗಳು 2017ರ ಆರಂಭದಲ್ಲಿ ಆಂಗೀಕಾರ ಪಡೆಯುವ ಸಾಧ್ಯತೆ ಇದೆ.
ಇಂಥ ಇಮ್ಯುನೊಥೆರಪಿ ಔಷಧಗಳ ಬೆಲೆ ಅಧಿಕವಾಗಿರುವುದು ಕೂಡಾ ವೈದ್ಯಕೀಯ ಕ್ಷೇತ್ರದ ಗಮನ ಸೆಳೆದಿದೆ ಎಂದು ಹಚಿಸನ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹೇಳಿದೆ. ಉದಾಹರಣೆಗೆ, ಒಂದು ಅಂದಾಜಿನ ಪ್ರಕಾರ, ಚೆಕ್‌ಪಾಯಿಂಟ್ ಇನ್‌ಹಿಬಿಟರ್ ಚಿಕಿತ್ಸೆಗೆ ಒಬ್ಬ ರೋಗಿಗೆ 10 ಲಕ್ಷ ಡಾಲರ್ ವೆಚ್ಚವಾಗಲಿದೆ. ಇಂಥ ಅನುಮೋದನೆಗಳ ನಡುವೆಯೇ ಕೆಲ ವಿಜ್ಞಾನಿಗಳು, ಇದರ ಅಡ್ಡ ಪರಿಣಾಮಗಳ ಬಗ್ಗೆಯೂ ಗಮನ ಹರಿಸುವಂತೆ ವೈದ್ಯರು ಹಾಗೂ ರೋಗಿಗಳಿಗೆ ಸಲಹೆ ನೀಡಿದ್ದಾರೆ.
ಇಂಥ ಪ್ರತಿರಕ್ಷಣಾ ವ್ಯವಸ್ಥೆ ಉದ್ದೀಪಿಸುವ ಕ್ರಮವು ಚರ್ಮದ ಮೇಲೆ ಪ್ರತಿಕ್ರಿಯಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಜತೆಗೆ ಫ್ಲೂ ಲಕ್ಷಣಗಳು, ಹೃದಯ ಸಂಬಂಧಿ ವ್ಯತ್ಯಯಗಳು, ಅತಿಸಾರ ಹಾಗೂ ಸೋಂಕಿನ ಅಪಾಯವೂ ಇದೆ. ಕೆಲ ರೋಗಿಗಳಲ್ಲಿ ಇದು ಮೂಳೆಸವೆತದಂಥ ಸಮಸ್ಯೆಗೂ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ಇಮ್ಯುನೊಥೆರಪಿ ಚಿಕಿತ್ಸೆಯ ಪರೀಕ್ಷಾರ್ಥ ಪ್ರಯೋಗದ ಬಗ್ಗೆ ಜುನೊ ಥೆರಪಿಟಿಕ್ಸ್ ನಡೆಸಿದ ಪ್ರಯೋಗದ ವೇಳೆ ಮೂವರು ರೋಗಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಆ ಪ್ರಯೋಗವನ್ನು ಕೈಬಿಡಲಾಗಿದೆ. ಈ ಪ್ರಕರಣಗಳಲ್ಲಿ ರೋಗಿಗಳು ಮೆದುಳು ಊತ ಸಮಸ್ಯೆಗೆ ಒಳಗಾಗಿದ್ದರು. ಗ್ರೀನ್‌ಬರ್ಗ್ ಅವರು ಜುನೊ ಥೆರಪಿಟಿಕ್ಸ್‌ನ ಸಹ ಸಂಸ್ಥಾಪಕರು.
ಅದಾಗ್ಯೂ ಇಮ್ಯುನೊಥೆರಪಿಯ ಭವಿಷ್ಯದ ಬಗೆಗಿನ ಆಶಾದಾಯಕ ಅಂಶವೆಂದರೆ, ಅದು ಕ್ಯಾನ್ಸರ್ ಕಣಗಳನ್ನು ನಾಶಪಡಿಸುವ ಹಾಗೂ ಸಾಮಾನ್ಯ ಕೋಶಗಳನ್ನು ಉಳಿಸುವ ಗುಣ. ಆದ್ದರಿಂದ ಇತರ ಚಿಕಿತ್ಸಾ ವಿಧಾನಗಳಿಗೆ ಹೋಲಿಸಿದರೆ, ಇದು ಕಡಿಮೆ ವಿಷಕಾರಕ. ಚೆಕ್‌ಪಾಯಿಂಟ್ ಇನ್ಹಿಬಿಟರ್ಸ್‌ ಚಿಕಿತ್ಸಾ ವಿಧಾನದಲ್ಲಿ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಯಾವ ಅಡ್ಡ ಪರಿಣಾಮವೂ ಕಂಡುಬಂದಿಲ್ಲ ಎಂದು ಮೆಕ್ಕೆಲ್ ಹೇಳುತ್ತಾರೆ. ಆದರೆ ಯಾವುದೂ ಪರಿಪೂರ್ಣವಲ್ಲ. ಕೆಲ ಮಟ್ಟಿಗೆ ಅಡ್ಡಪರಿಣಾಮಗಳು ಕಂಡುಬರಬಹುದು. ಆದರೆ ಅಂಥ ಗಂಭೀರ ಪರಿಣಾಮಗಳ ಸಾಧ್ಯತೆ ಇಲ್ಲ ಎನ್ನುವುದು ಅವರ ಅನಿಸಿಕೆ. ಇಮ್ಯುನೊಥೆರಪಿ ವಿಧಾನವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಮಾರ್ಗವನ್ನು ತೋರಿಸಿಕೊಟ್ಟಿದ್ದು, ಇದರಲ್ಲಿ ಎದುರಾಗುವ ಸವಾಲುಗಳ ಬಗ್ಗೆ ತಜ್ಞರು ಹೆಚ್ಚು ವಾಸ್ತವಿಕವಾಗಿರಬೇಕಾಗುತ್ತದೆ.

ಇಮ್ಯುನೊಥೆರಪಿ ಸವಾಲುಗಳು

ಈ ಚಿಕಿತ್ಸಾ ವಿಧಾನಕ್ಕೆ ಬೇರೆ ಬೇರೆ ರೋಗಿಗಳ ಸ್ಪಂದನೆ ವಿಭಿನ್ನವಾಗಿರಲು ಕಾರಣವೇನು ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸಮಸ್ಯೆಯೆಂದರೆ, ರೋಗಿಗಳಲ್ಲಿ ಇಮ್ಯುನೊಥೆರಪಿ ಕೆಲಸ ಮಾಡುವಂತೆ ಕಾಣುತ್ತದೆ. ಆದರೆ ಬಳಿಕ ಅದು ಸ್ಥಗಿತವಾಗುತ್ತದೆ. ಕೆಲ ಸಮಯದ ಬಳಿಕ ಇದು ಮರುಕಳಿಸುವ ಹಾಗೂ ಹೆಚ್ಚುವ ಸಾಧ್ಯತೆ ಇದೆ. ಇದು ಏಕೆ ಎನ್ನುವುದು ಪ್ರಶ್ನೆ. ಇದನ್ನು ಹೇಗೆ ಬದಲಿಸಲು ಸಾಧ್ಯ ಎಂಬ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಗ್ರೀನ್‌ಬರ್ಗ್ ಹೇಳುತ್ತಾರೆ.
ಇಲ್ಲಿ ವಿಜ್ಞಾನ ಮಹತ್ವದ ಪಾತ್ರ ವಹಿಸಬೇಕು. ಪ್ರತಿರಕ್ಷಣಾ ವ್ಯವಸ್ಥೆ ಟ್ಯೂಮರ್ ಬೆಳೆಯದಂತೆ ಮಾಡುತ್ತದೆ ಎಂದಾದರೆ, ಯಾವ ವಿಧಾನದ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರತಿಕ್ರಿಯಾತ್ಮಕವಾಗಿ ಮಾಡಲು ಸಾಧ್ಯ ಎನ್ನುವುದನ್ನೂ ಪರಿಶೀಲಿಸಬೇಕು ಎಂದು ಅಭಿಪ್ರಾಯಪಡುತ್ತಾರೆ.
ಆದ್ದರಿಂದ ಸಂಶೋಧಕರು ಕೇವಲ ಪ್ರತಿರಕ್ಷಣಾ ವ್ಯವಸ್ಥೆಯ ನಡವಳಿಕೆಯನ್ನು ಅಧ್ಯಯನ ಮಾಡುವುದು ಮಾತ್ರವಲ್ಲದೇ ಕ್ಯಾನ್ಸರ್‌ಕಾರಕ ಟ್ಯೂಮರ್‌ಗಳ ಬಗ್ಗೆಯೂ ಅಧ್ಯಯನ ನಡೆಸುವುದು ಅಗತ್ಯ, ಇದು ಸರಳ ಸವಾಲು ಅಲ್ಲ. ಇದು ಸುಲಭ ಕೆಲಸ ಎನಿಸಿದರೆ ಅದು ದೊಡ್ಡ ತಪ್ಪು. ಪ್ರತಿರಕ್ಷಣಾ ಸ್ಪಂದನೆಯನ್ನು ಬದಲಿಸಲು ಹೇಗೆ ಸಾಧ್ಯ ಎಂಬ ಬಗ್ಗೆ ಪ್ರಯೋಗಾಲಯ ದಶಕಗಳ ಕಾಲ ಸಂಶೋಧನೆ ನಡೆಸಿದೆ ಎಂದು ಗ್ರೀನ್‌ಬರ್ಗ್ ವಿವರಿಸುತ್ತಾರೆ.
ಕೆಲವರು ರಾತ್ರೋರಾತ್ರಿ ಇಂಥ ಬದಲಾವಣೆ ಆಗಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ಅದಕ್ಕೆ ಸಮಯಾವಕಾಶ ಬೇಕಾಗುತ್ತದೆ. ಇಷ್ಟಾಗಿಯೂ ಇಮ್ಯುನೊಥೆರಪಿ ಅತ್ಯಂತ ಪ್ರಯೋಜನಕಾರಿಯಾಗುತ್ತದೆ ಎಂದು ಖಚಿತವಾಗಿ ಹೇಳಬಹುದು. ಈಗ ಮಾತ್ರ ಏನು ಮಾಡಬಹುದು ಎನ್ನುವುದಕ್ಕಷ್ಟೇ ನಮ್ಮ ಸಂಶೋಧನೆ ಸೀಮಿತವಾಗಿದೆ.

ಕ್ಯಾನ್ಸರ್ ಇಮ್ಯುನೊಥೆರಪಿ ಎನ್ನುವುದು ನಮ್ಮದೇ ಪ್ರತಿರಕ್ಷಣಾ ವ್ಯವಸ್ಥೆಯನ್ನು ಚಿಕಿತ್ಸಾ ವಿಧಾನವಾಗಿ ಬಳಸಿ, ರೋಗ ಗುರುತಿಸುವ, ನಿಯಂತ್ರಿಸುವ ಹಾಗೂ ಅಂತಿಮವಾಗಿ ಕ್ಯಾನ್ಸರ್ ಗುಣಪಡಿಸುವ ವಿಧಾನ ಎಂದು ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಸಿಇಒ ಜಿಲ್ ಒಡೆನೆಲ್ ಟೋರ್ಮೆ ಸ್ಪಷ್ಟಪಡಿಸಿದ್ದಾರೆ.

share
ಜಾಕ್ವೆಲಿನ್ ಹೊವಾರ್ಡ್
ಜಾಕ್ವೆಲಿನ್ ಹೊವಾರ್ಡ್
Next Story
X