ಯಮನ್: ಜೈಲುಗಳ ಮೇಲೆ ವಾಯುದಾಳಿ; ಕನಿಷ್ಠ 40 ಸಾವು
ಞಸಾನಾ, ಅ.30: ಭೀಕರ ಅಂತರ್ಯುದ್ಧದಿಂದ ತತ್ತರಿಸಿರುವ ಯಮನ್‌ನ ಬಂದರು ನಗರವೊಂದರ ಭದ್ರತಾ ಕಾರ್ಯಾಲಯದಲ್ಲಿರುವ ಎರಡು ಕಾರಾಗೃಹಗಳ ಮೇಲೆ ಸೌದಿ ನೇತೃತ್ವದ ಪಡೆಗಳು ಶನಿವಾರ ನಡೆಸಿದ ವಾಯುದಾಳಿಗಳಲ್ಲಿ 40ಕ್ಕೂ ಅಧಿಕ ಕೈದಿಗಳು ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆಂದು ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪು ಸಮುದ್ರದ ಬಂದರುನಗರ ಹೊದೈಡಾದಲ್ಲಿರುವ ಬಿಗಿ ಭದ್ರತೆಯ ಅಲ್‌ಝೆದಿಯಾ ಭದ್ರತಾ ಕಾರ್ಯಾಲಯದಲ್ಲಿ ಈ ವಾಯುದಾಳಿಗಳು ನಡೆದಿವೆ. ಹೊದೈಡಾ ನಗರವು ಯೆಮನ್‌ನ ಹುದಿ ಬಂಡುಕೋರರ ನಿಯಂತ್ರಣದಲ್ಲಿದೆ. ವಾಯುದಾಳಿಯಲ್ಲಿ 43 ಮಂದಿ ಮೃತಪಟ್ಟಿದ್ದಾರೆಂದು ಹೌದಿ ಬಂಡುಕೋರರ ಟಿವಿವಾಹಿನಿ ಅಲ್-ಮಸೀರಾ ವರದಿ ಮಾಡಿದೆಯಾದರೂ, ಅದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ.
Next Story





