ಟರ್ಕಿ: 10 ಸಾವಿರ ಸರಕಾರಿ ನೌಕರರ ವಜಾ
ಇಸ್ತಾಂಬುಲ್,ಅ.30: ಜುಲೈನಲ್ಲಿ ಟರ್ಕಿಯಲ್ಲಿ ನಡೆದ ವಿಫಲ ಸೇನಾಕ್ರಾಂತಿಗೆ ಸಂಬಂಧಿಸಿ ಆಡಳಿತ ವಿರೋಧಿಗಳನ್ನು ಬಗ್ಗುಬಡಿಯುವ ಕಾರ್ಯಾಚರಣೆಯನ್ನು ಮುಂದುವರಿಸಿರುವ ಟರ್ಕಿ ಸರಕಾರವು 10 ಸಾವಿರಕ್ಕೂ ಅಧಿಕ ಸರಕಾರಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಮುಖ್ಯವಾಗಿ ಶಿಕ್ಷಣ,ನ್ಯಾಯಾಂಗ ಹಾಗೂ ಆರೋಗ್ಯ ಸಚಿವಾಲಯಗಳು ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 10,131 ಸರಕಾರಿ ಉದ್ಯೋಗಿಗಳನ್ನು ವಜಾಗೊಳಿಸ ಲಾಗಿದೆಯೆಂದು ಅಧಿಕೃತ ಗೆಜೆಟ್ ವರದಿಯೊಂದು ರವಿವಾರ ತಿಳಿಸಿದೆ. ಇದೇ ವೇಳೆ ಕುರ್ದಿಷ್ ಬಂಡುಕೋರರ ಬಗ್ಗೆ ಸಹಾನುಭೂತಿ ಹೊಂದಿರುವ 15 ಮಾಧ್ಯಮಗಳನ್ನು ಕೂಡಾ ಮುಚ್ಚುಗಡೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ವಿಶ್ವವಿದ್ಯಾನಿಲಯದ ಮುಖ್ಯಸ್ಥರ ಚುನಾವಣೆಗಳನ್ನು ಕೂಡಾ ಟರ್ಕಿ ಸರಕಾರವು ಅಮಾನತಿನಲ್ಲಿರಿಸಿದೆ.ಶಿಕ್ಷಣ ಪ್ರಾಧಿಕಾರವು ಆಯ್ಕೆ ಮಾಡಿದ ಅಭ್ಯರ್ಥಿಗಳ ಸಮೂಹದಿಂದ ವಿಜಯಗಳನ್ನು ಆಯ್ಕೆ ಮಾಡಲು ಅಧ್ಯಕ್ಷ ಎರ್ದೊಗಾನ್ ಸಮಿತಿಯೊಂದನ್ನು ರಚಿಸಿದ್ದಾರೆ.
Next Story





