ನೀವು ಅಥವಾ ನಿಮ್ಮ ಗೆಳೆಯ ಸುಂದರವಾಗಿದ್ದೀರಾ?
ಹಾಗಾದರೆ ಇದನ್ನು ತಪ್ಪದೇ ಓದಿ

ಸುಂದರ ತರುಣರು ಬಹುತೇಕ ಸ್ವಾರ್ಥಿಗಳಾಗಿರುತ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ! ಈ ಅಧ್ಯಯನವನ್ನು ಲಂಡನ್‌ನ ಬ್ರೂನೆಲ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಸಂಶೋಧಕರು ನಡೆಸಿದ್ದಾರೆ. ಅವರು 125 ಪುರುಷ ಮತ್ತು ಮಹಿಳೆಯರು ಭಾಗವಹಿಸಿದ ಪರೀಕ್ಷೆಯನ್ನು ಜೀವವಿಕಾಸದ ಸಿದ್ಧಾಂತದ ಆಧಾರದಲ್ಲಿ ನಡೆಸಿದ್ದಾರೆ. ಹೆಚ್ಚು ಆಕರ್ಷಕವಾಗಿರುವವರು ಸಾಮಾಜಿಕ ಅಸಮಾನತೆಯ ಲಾಭ ಪಡೆದುಕೊಳ್ಳುತ್ತಾರೆ ಮತ್ತು ಸಮಾಜ ಹೀಗೇಕಿದೆ ಎಂದು ತಿಳಿಯುವ ಪರೀಕ್ಷೆ ಇದಾಗಿತ್ತು.
ಸಂಶೋಧಕರು ಕಂಡುಕೊಂಡಿರುವ ಪ್ರಕಾರ ಆಕರ್ಷಕ ವ್ಯಕ್ತಿಗಳು ಹೆಚ್ಚಾಗಿ ಉದಾರಿಗಳಾಗಿರುವುದಿಲ್ಲ. ಆದರೆ ಆಕರ್ಷಕ ಮಹಿಳೆಯರು ಅಸಮಾನತೆಯಲ್ಲಿ ಇದೇ ಅಭ್ಯಾಸವನ್ನು ಪ್ರದರ್ಶಿಸಿಲ್ಲ. ಅಧ್ಯಯನದ ಮುಖ್ಯ ಹಿರಿಯ ಉಪನ್ಯಾಸಕರಾಗಿರುವ ಡಾ ಮೈಖಲ್ ಪ್ರೈಸ್ ಪ್ರಕಾರ, ಉತ್ತಮವಾಗಿ ಕಾಣುವ ವ್ಯಕ್ತಿಗಳು ಹೆಚ್ಚು ಸ್ವಾರ್ಥಿಗಳು ಮತ್ತು ಕಡಿಮೆ ಸಮಾನತಾವಾದಿಯಾಗುವ ಸಾಧ್ಯತೆಯಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳ ದೇಹವನ್ನು 3ಡಿ ಸ್ಕಾನರ್‌ನಲ್ಲಿ ಅಂದಾಜಿಸಲಾಗಿದೆ. ಪಾರಂಪರಿಕ ದೈಹಿಕ ಆಕರ್ಷಣೆಯ ಅಂದಾಜಿನಲ್ಲಿ ಅಂದರೆ ಸಣಕಲು, ಪುರುಷರಿಗೆ ಸೊಂಟದಿಂದ ಎದೆಯಳತೆ, ಮಹಿಳೆಯರಿಗೆ ಸೊಂಟದಿಂದ ನಿತಂಬದ ಅಳತೆ ಹೀಗೆ ಲೆಕ್ಕ ಮಾಡಿದ ಮೇಲೆ ಎರಡು ಪ್ರತ್ಯೇಕ ಗುಂಪುಗಳು ಇವರನ್ನು ವ್ಯಾಖ್ಯಾನಿಸಿವೆ. ಮೊದಲ ಗುಂಪು 125 ಮಂದಿಯನ್ನು ಆಕರ್ಷಣೆಗಾಗಿ ಕ್ರಮಾಂಕ ನೀಡಿದರೆ, ಎರಡನೇ ಗುಂಪು ಅವರ ಪರೋಪಕಾರಿ ಗುಣ ಮತ್ತು ಸಮಾನತಾವಾದಗಳ ಬಗ್ಗೆ ತೀರ್ಪು ನೀಡಿದೆ.
ಇದಕ್ಕೆ ಮೊದಲು ಪ್ರತಿನಿಧಿಗಳಿಗೆ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಹೇಳಲಾಗಿದೆ. ಆ ಮೂಲಕ ಅವರ ನಡವಳಿಕೆ ಸ್ವಾರ್ಥಪರತೆ, ಅಸಮಾನತೆ ಮೊದಲಾದವನ್ನು ತಿಳಿದುಕೊಳ್ಳಲಾಗಿದೆ. ಅವರಿಗೆ ಹಣವನ್ನು ಕೊಟ್ಟು ನಂತರ ಅದನ್ನು ಬೇರೆಯವರಿಗೆ ಕೊಡಲು ಹೇಳುವುದು ಮೊದಲಾದ ಸಾಮಾಜಿಕ ಪ್ರಯೋಗಗಳನ್ನೂ ಅವರ ಮೇಲೆ ನಡೆಸಲಾಗಿದೆ.
“ಕ್ರಮಾಂಕ ನೀಡುವವರು ಕಂಡುಕೊಂಡಿರುವ ಪ್ರಕಾರ ಆಕರ್ಷಕ ಪುರುಷರು ಮತ್ತು ಮಹಿಳೆಯರು ಹೆಚ್ಚು ಪರೋಪಕಾರಿಯಾಗಿರಲಿಲ್ಲ ಮತ್ತು ಸಮಾನತಾವಾದಿಗಳಾಗಿಲ್ಲ” ಎಂದು ಡಾ ಪ್ರೈಸ್ ಹೇಳಿದ್ದಾರೆ. ಸಾಮಾಜಿಕ ಪ್ರಯೋಗಕ್ಕೆ ಬಳಸಿದ ಪ್ರಶ್ನಾವಳಿಯೂ ಸುಂದರವಾಗಿರುವವರು ತಮ್ಮ ಗುರಿಸಾಧನೆಗೆ ಸ್ವಾರ್ಥಿಗಳಾಗುತ್ತಾರೆ ಎನ್ನುವ ಇದೇ ಅಭಿಪ್ರಾಯವನ್ನು ಸಮರ್ಥಿಸಿದೆ. ಆದರೆ ಈ ಅಧ್ಯಯನವನ್ನೇ ಪರಿಪೂರ್ಣ ಎಂದು ಹೇಳಲಾಗದು, ಜಗತ್ತಿನಲ್ಲಿ ಉದಾರವಾದಿಗಳಾಗಿರುವ ಬಹಳಷ್ಟು ಆಕರ್ಷಕ ತರುಣರೂ ಇರಬಹುದು ಎಂದು ಪ್ರೈಸ್ ಹೇಳಿದ್ದಾರೆ.
ಕೃಪೆ:timesofindia.indiatimes.com







