ಠಾಣೆಯಲ್ಲಿ ಪೊಲೀಸರ ಟೋಪಿ ಧರಿಸಿ ಸೆಲ್ಫಿ ತೆಗೆದ ಅರೋಪಿಗಳು !

ಕೊಲ್ಲಂ,ಅ. 31: ಪೊಲೀಸ್‌ಠಾಣೆಯಲ್ಲಿ ಪೊಲೀಸಪ್ಪನ ಟೋಪಿಧರಿಸಿ ಸೆಲ್ಫಿತೆಗೆದು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿ'ಫೀಲಿಂಗ್ ಹ್ಯಾಪಿಫ್ರಂ ಕಾವನಾಡ್ ಪೊಲೀಸ್ ಸ್ಟೇಶನ್' ಎಂದು ಬರೆದು ಆರೋಪಿಗಳು ಸಂಭ್ರಮ ಆಚರಿಸಿಕೊಂಡ ಘಟನೆ ವರದಿಯಾಗಿದೆ. ಬಹಿರಂಗವಾಗಿ ಮದ್ಯಪಾನ ಮಾಡಿದ್ದಾರೆಂಬ ಆರೋಪದಲ್ಲಿ ಹೀಗೆ ಮಾಡಿದ ಆರೋಪಿಗಳನ್ನು ಕಾವನಾಡ್ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು,.
ಸಾಜ ಅಲೋಶಿಯಸ್ ಎಂಬಯುವಕ ಟೋನಿ ಫ್ರಾನ್ಸಿಸ್, ಬಿಜೊ ಬೆನ್ ಎಂಬ ಇನ್ನಿಬ್ಬರ ಜೊತೆ ಠಾಣೆಯಲ್ಲಿ ಸೆಲ್ಫಿತೆಗೆದು ಫೇಸ್‌ಬುಕ್‌ಗೆ ಹಾಕಿದ್ದಾನೆ. ಊರವರು ದೂರು ನೀಡಿದಹಿನ್ನೆಲೆಯಲ್ಲಿ ಇವರನ್ನು ಕಾವನಾಡ್ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಈ ಘಟನೆಯ ಕುರಿತು ಪೊಲೀಸರು ತಮಗೇನೂ ಗೊತ್ತಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
Next Story





