ಪ್ರತಿಭಟನೆಯಿಂದ ಮದ್ಯದಂಗಡಿ ಮುಚ್ಚಿದರೆ ಅಧಿಕಾರಿಗಳು ನಷ್ಟಭರಿಸಬೇಕು: ಕೇರಳ ಬೆವ್‌ಕೊ ಆದೇಶ

ಕೋಝಿಕ್ಕೋಡ್,ಅ. 31: ಸಾರ್ವಜನಿಕಪ್ರತಿಭಟನೆಯಿಂದ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದ್ದರೆ ಅದನ್ನು ಕೂಡಲೇ ತೆರೆಯದಿದ್ದರೆ ಅದರಿಂದಾಗಿ ಆಗುವ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳು ಭರಿಸಬೇಕೆಂದು ಬಿವರೇಜಸ್ ಕಾರ್ಪೊರೇಶನ್(ಬೆವ್‌ಕೊ) ಹೇಳಿದೆ. ಕೋಝಿಕ್ಕೋಡ್ ಸಿವಿಲ್ ಠಾಣೆ ಸಮೀಪ ಆರಂಭಿಸಿದ್ದ ಮದ್ಯದಂಗಡಿಯನ್ನು ಜನತಾ ಹೋರಾಟದಿಂದಾಗಿ ಮೂರು ವಾರಗಳಿಂದ ಮುಚ್ಚಿಡಲಾಗಿದೆ.
ಇದರಿಂದಾಗಿ ಕಾರ್ಪೊರೇಶನ್‌ಗೆ ದಿನವಹಿ ಭಾರೀ ನಷ್ಟ ಆಗುತ್ತಿದೆ ಎಂಬುದನ್ನು ಬೆಟ್ಟು ಮಾಡಿ ಬೆವ್‌ಕೊ ಕೋಝಿಕ್ಕೋಡ್ ರೀಜನಲ್ ಮ್ಯಾನೇಜರ್ ಮತ್ತು ವೇರ್‌ಹೌಸ್ ಮ್ಯಾನೇಜರ್‌ರಿಂದ ಬೆವ್‌ಕೊ ವಿವರಣೆ ಕೇಳಿದೆ. ಕೇರಳದಾದ್ಯಂತ 270 ವಿದೇಶಿ ಮದ್ಯದಂಗಡಿಗಳನ್ನು ಬೆವರೇಜ್ ಕಾರ್ಪೊರೇಶನ್ ನಡೆಸುತ್ತಿದೆ. ಇವುಗಳಲ್ಲಿ ಪ್ರತಿದಿನ 11.28 ಲಕ್ಷರೂಪಾಯಿ ಮಾರಾಟ ನಡೆಯುತ್ತಿದೆ. 9.48ಲಕ್ಷ ರೂಪಾಯಿ ಸರಕಾರಕ್ಕೆ ಹೋಗುತ್ತದೆ. ವಾರಗಳವರೆಗೆ ಒಂದು ಮದ್ಯದಂಗಡಿ ಮುಚ್ಚುವ ಸ್ಥಿತಿಯಾದರೆ ಸರಕಾರಕ್ಕೆ ಬಹುದೊಡ್ಡ ಆರ್ಥಿಕ ನಷ್ಟ ಆಗುತ್ತದೆ ಎಂದು ಬೆವರೇಜ್ ಕಾರ್ಪೊರೇಷನ್ ಹೇಳಿದೆ.
ಮುಚ್ಚಲಾದ ಮದ್ಯಮಾರಾಟದಂಗಡಿಗಳನ್ನು ತುರ್ತಾಗಿ ತೆರೆಯಲು ಕಾರ್ಪೊರೇಶನ್ ಮ್ಯಾನೆಜಿಂಗ್ ಡೈರೆಕ್ಟರ್ ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಕೋರ್ಟು ಆದೇಶ, ಸಾರ್ವಜನಿಕರ ಪ್ರತಿಭಟನೆಮೂಲಕ ಮುಚ್ಚಲಾಗಿದ್ದರೆ ಗರಿಷ್ಠ ಹದಿನೈದು ದಿವಸಗಳೊಳಗೆ ಅಂಗಡಿಗಳಲ್ಲಿ ಮದ್ಯಮಾರಾಟವನ್ನು ಪುನರಾರಂಭಿಸಬೇಕು. ಕಟ್ಟಡಕ್ಕೆ ದೊಡ್ಡ ಮೊತ್ತದ ಬಾಡಿಗೆ ನೀಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳಿಗೆಸಾಧ್ಯವಾಗದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಲಾಗುವುದು ಅಲ್ಲದೆ ನಷ್ಟ ಭರ್ತಿ ಮಾಡಬೇಕಾಗಬಹುದು ಎಂದು ಬೆವರೇಜ್‌ನ ಆದೇಶದಲ್ಲಿ ತಿಳಿಸಲಾಗಿದೆ.
ಮ್ಯಾನೇಜಿಂಗ್ ಡೈರೆಕ್ಟರ್‌ರ ಆದೇಶ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಕೋಝಿಕ್ಕೋಡ್ ಸಿವಿಲ್‌ಠಾಣೆ ಪಕ್ಕದಲ್ಲಿಮತ್ತು ಕಾಸರಗೋಡು ಅನಂಗೂರಿನಲ್ಲಿ ಮದ್ಯದಂಗಡಿಗಳು ವಾರಗಳಿಂದ ಮುಚ್ಚಿಡಲಾಗಿದೆ.ಇದರಿಂದಾಗುವ ನಷ್ಟವನ್ನು ಅಧಿಕಾರಿಗಳ ಮೇಲೆ ಹೇರಲು ಯತ್ನಿಸುವುದು ಸರಿಯಲ್ಲ ಎಂದು ಉದ್ಯೋಗಿಗಳು ಹೇಳುತ್ತಾರೆ. ಸಿವಿಲ್ ಸ್ಟೇಶನ್ ಪಕ್ಕದ ಜನವಾಸ ಪ್ರದೇಶದಲ್ಲಿ ಮದ್ಯಮಾರುವ ಅಂಗಡಿ ಆರಂಭಿಸಿದ್ದು ಕೋಝಿಕ್ಕೋಡ್‌ನ ಜನರು ಪ್ರತಿಭಟಿಸಲು ಕಾರಣವಾಗಿದೆ. ನಂತರ ಸಿಟಿ ಕಾಪೊರೇಶನ್ ಲೈಸನ್ಸ್ ರದ್ದುಪಡಿಸಿತು. ಈಗ ಇನ್ನೊಂದು ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ನಿರ್ಧರಿಸಲಾಗಿದೆ. ಜನರ ವಿರೋಧ ಇಲ್ಲದ ಸ್ಥಳಗಳಲ್ಲಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮಾತ್ರವೇ ಮದ್ಯಮಾರಾಟ ಕೇಂದ್ರವನ್ನುಪ್ರಾರಂಭಿಸಬೇಕಿದೆ ಎಂದು ಬೆವರೇಜ್ ಕಾರ್ಪೊರೇಷನ್ ನೌಕರರು ಅಭಿಪ್ರಾಯಪಟ್ಟಿದ್ದಾರೆಂದುವರದಿ ತಿಳಿಸಿದೆ.







