ಶ್ರೀ ಮಹಾವೀರ ಕಾಲೇಜಿನ ಇಬ್ಬರು ಟ್ರಸ್ಟಿಗಳಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ
.jpg)
ಮೂಡುಬಿದಿರೆ,ಅ.31 : ದ.ಕ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಶ್ರೀ ಮಹಾವೀರ ಕಾಲೇಜಿನ ಟ್ರಸ್ಟಿಗಳಾದ ಕೃಷಿ ತಜ್ಞ ಎಲ್.ಸಿ ಸೋನ್ಸ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಉಡುಪಿಯ ಡಾ.ಎಚ್.ಎಸ್ ಬಲ್ಲಾಳ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿಗೆ ಆಯ್ಕೆಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆ ಸಮೀಪದ ಬನ್ನಡ್ಕದಲ್ಲಿ ದೇಶ-ವಿದೇಶದ ವಿವಿಧ ಜಾತಿಯ ಹಣ್ಣು ಹಂಪಲನ್ನು ಬೆಳೆಸಿ ಮತ್ತು ಇತರ ಕೃಷಿಗಳನ್ನು ಮಾಡುತ್ತಾ ಸಾಧಕರಾಗಿ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ.ಎಲ್.ಸಿ ಸೋನ್ಸ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಉಡುಪಿಯ ಡಾ.ಎಚ್.ಎಸ್. ಬಲ್ಲಾಳ್ ಇವರಿಬ್ಬರೂ ಪ್ರಶಸ್ತಿಗೆ ಭಾಜನವಾಗಿರುವ ಬಗ್ಗೆ ಶ್ರೀಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಶಾಸಕ ಕೆ. ಅಭಯಚಂದ್ರ ಜೈನ್ ಅವರು ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.
Next Story





