ರೈ ಎಸ್ಟೇಟ್ ಟ್ರಸ್ಟ್‌ನಿಂದ ಉಚಿತ ವಸ್ತ್ರ ವಿತರಣೆ

ಪುತ್ತೂರು,ಅ.31: ಕೋಡಿಂಬಾಡಿಯ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ದೀಪಾವಳಿ ಪ್ರಯುಕ್ತ ಉಚಿತ ವಸ್ತ್ರ ವಿತರಣಾ ಕಾರ್ಯಕ್ರಮ ರೈ ಎಸ್ಟೇಟ್ ಮಾಲಕ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ವಸ್ತ್ರ ವಿತರಿಸಲಾಯಿತು, ಮಹಿಳೆಯರಿಗೆ ಸೀರೆ, ಪುರುಷರಿಗೆ ಧೋತಿ ಹಾಗೂ ಮಕ್ಕಳಿಗೆ ಬಟ್ಟೆ ವಿತರಣೆ ಮಾಡಲಾಯಿತು.
ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕಿ ಗಿರಿಜಾ ಎಸ್. ರೈ, ಅವರ ಪುತ್ರರಾದ ಅಶೋಕ್ ರೈ, ರಾಜಕುಮಾರ್ ರೈ, ಪುತ್ರಿಯರಾದ ವಿಶಾಲಾಕ್ಷಿ ಶೆಟ್ಟಿ, ನಳಿನಿ ಶೆಟ್ಟಿ, ಅಶೋಕ್ ರೈ ಅವರ ಪತ್ನಿ ಸುಮಾ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವಸ್ತ್ರ ವಿತರಣೆ ಮಾಡಿದರು.
Next Story





