ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಉಡುಪಿ, ಅ.31: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 201ನೇ ಸಾಲಿನ ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅಕಾಡೆಮಿಯು 2016ನೇ ಸಾಲಿನ ಕೊಂಕಣಿ ಸಾಹಿತ್ಯ, ಕೊಂಕಣಿ ಕಲೆ ಹಾಗೂ ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು 50,000ರೂ. ಗೌರವಧನ, ಶಾಲು, ಸ್ಮರಣಿಕೆ, ಪ್ರಮಾಣಪತ್ರಗಳನ್ನು ಒಳಗೊಂಡಿದೆ. ಆಸಕ್ತರು ನೇರವಾಗಿ ಅಕಾಡೆಮಿಗೆ ಅರ್ಜಿ ಸಲ್ಲಿಸಬಹುದು. ಸಂಘ ಸಂಸ್ಥೆಗಳು, ಸಾರ್ವಜನಿಕರು ಅರ್ಹರ ಹೆಸರುಗಳನ್ನು ಸೂಚಿಸಿ ಅರ್ಜಿ ಸಲ್ಲಿಸಬಹುದು.
ಕೊಂಕಣಿ ಪುಸ್ತಕ ಬಹುಮಾನ: ಅಕಾಡೆಮಿಯು 2016ನೇ ಸಾಲಿನಲ್ಲಿ ಪ್ರಕಟವಾದ ಕೊಂಕಣಿ ಕವನ, ಕೊಂಕಣಿ ಲೇಖನ, ವಿಮರ್ಶೆ, ಕೊಂಕಣಿ ಸಣ್ಣಕತೆ ಹಾಗೂ ಕಾದಂಬರಿ, ಅಧ್ಯಯನ ಕೃತಿ, ಕೊಂಕಣಿಗೆ ಅನುವಾದಿತ ಕೃತಿಗಳ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸಕ್ತ ಬಹುಮಾನಕ್ಕಾಗಿ ಕೃತಿಗಳನ್ನು ಆಹ್ವಾನಿಸಿದೆ.
ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಕಳುಹಿಸಬಹುದಾಗಿದೆ. ಪುಸ್ತಕ ಬಹುಮಾನವು 25,000ರೂ. ಗೌರವಧನ, ಶಾಲು, ಸ್ಮರಣಿಕೆ, ಪ್ರಮಾಣಪತ್ರ ಗಳನ್ನು ಒಳಗೊಂಡಿರುತ್ತದೆ.
ಗೌರವ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ನ.30 ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ 2017ರ ಜ.1ಆಗಿರುತ್ತದೆ. ಭರ್ತಿ ಮಾಡಿದ ಅಜಿ ಹಾಗೂ ಪುಸ್ತಕಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕಿ ಕಟ್ಟಡ, ಲಾಲ್‌ಭಾಗ್, ಮಂಗಳೂರು-3 ಇವರಿಗೆ ಕಳುಹಿಸಬಹುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.







