ಓವಲ್ ಕಚೇರಿಯಲ್ಲಿ ದೀಪಾವಳಿ ಆಚರಿಸಿದ ಒಬಾಮ

ವಾಶಿಂಗ್ಟನ್, ಅ. 31: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಶ್ವೇತಭವನದ ಓವಲ್ ಕಚೇರಿಯಲ್ಲಿ ದೀಪ ಬೆಳಗಿಸುವ ಮೂಲಕ ಮೊದಲ ಬಾರಿಗೆ ದೀಪಾವಳಿ ಆಚರಿಸಿದರು ಹಾಗೂ ತನ್ನ ಉತ್ತರಾಧಿಕಾರಿಗಳು ಈ ಸಂಪ್ರದಾಯವನ್ನು ಮುಂದುವರಿಸುವರು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಒಬಾಮ 2009ರಲ್ಲಿ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದರು.
ತನ್ನ ಆಡಳಿತದಲ್ಲಿ ಕೆಲಸ ಮಾಡುವ ಕೆಲವು ಭಾರತೀಯ ಅಮೆರಿಕನ್ನರೊಂದಿಗೆ ತನ್ನ ಕಚೇರಿಯಲ್ಲಿ ದೀಪವೊಂದನ್ನು ಬೆಳಗಿಸಿದ ಬಳಿಕ ಶೀಘ್ರವೇ ಫೇಸ್‌ಬುಕ್‌ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡರು.
‘‘2009ರಲ್ಲಿ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕದ ಮೊದಲ ಅಧ್ಯಕ್ಷನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ದೀಪಾವಳಿಯಂದು ಮುಂಬೈಯಲ್ಲಿ ಭಾರತದ ಜನರು ತೆರೆದ ಬಾಹುಗಳು ಮತ್ತು ಹೃದಯಗಳೊಂದಿಗೆ ನಮ್ಮನ್ನು ಸ್ವಾಗತಿಸಿರುವುದನ್ನು ಹಾಗೂ ನಮ್ಮಾಂದಿಗೆ ನೃತ್ಯ ಮಾಡಿರುವುದನ್ನು ನಾನು ಮತ್ತು ಮಿಶೆಲ್ ಎಂದೂ ಮರೆಯಲಾರೆವು’’ ಎಂದು ಒಬಾಮ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.
Next Story





