ಕುಕ್ಕರ್ ಸಿಡಿದು ಇಬ್ಬರಿಗೆ ಗಾಯ
ಬೆಳ್ತಂಗಡಿ,ಅ.31 ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಕಳಿಯ ಗ್ರಾಮದ ಬಟ್ಟೆಮಾರು ಎಂಬಲ್ಲಿ ಕುಕ್ಕರ್ ಸಿಡಿದು ಇಬ್ಬರು ಮಕ್ಕಳು ಗಾಯಗೊಂಡ ಘಟನೆ ನಡೆದಿದೆ.
ಬಟ್ಟೆಮಾರು ನಿವಾಸಿ ಶೇಖಬ್ಬ ಎಂಬವರ ಪುತ್ರರಾದ ನಿಝಾಮುದ್ದೀನ್(13) ಹಾಗೂ ನವಾರ್(10) ಎಂಬವರೇ ಗಾಯಗೊಂಡವರು. ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭ ಕುಕ್ಕರ್ ಸಿಡಿದಿದೆ. ಅಲ್ಲೆ ಇದ್ದ ನಿಝಾಮುದ್ದೀನ್ ಹಾಗೂ ನವಾರ್ ಅವರಿಗೆ ಗಾಯವಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಗ್ರಾಪಂ ಸದಸ್ಯ ಅಬ್ದುಲ್ ಕರೀಂ, ಖಾದರ್ ಹಾಜಿ ಭೇಟಿ ನೀಡಿದರು.
Next Story





