ಸತ್ಯನಾರಾಯಣರಾವ್‌ಗೆ ‘ಕನ್ನಡ ಅರವಿಂದ’ ಪ್ರಶಸ್ತಿ
ಬೆಂಗಳೂರು, ಅ.31: ಕನ್ನಡ ಹೋರಾಟಗಾರ ಅರವಿಂದರಾಯ ಜೋಶಿ ಅವರ ಹೆಸರಿನಲ್ಲಿ ಕೊಡುವ 2016ನೆ ಸಾಲಿನ ‘ಕನ್ನಡ ಅರವಿಂದ’ ಪ್ರಶಸ್ತಿಯನ್ನು ಹಿರಿಯ ಲೇಖಕ, ಪತ್ರಕರ್ತ ಮತ್ತು ಅನುವಾದಕ ಹೊ.ರಾ. ಸತ್ಯನಾರಾಯಣರಾವ್ ಅವರಿಗೆ ಘೋಷಿಸಲಾಗಿದೆ. ಜತೆಗೆ, ಮತ್ತೊಬ್ಬ ಕನ್ನಡ ಹೋರಾಟಗಾರ ಆಳ್ವ ಚಿರಂಜೀವಿ ಅವರ ನೆನಪಿನಲ್ಲಿ ಕೊಡುವ ‘ಕನ್ನಡ ಚಿರಂಜೀವಿ’ ಪ್ರಶಸ್ತಿಗೆ ಇತಿಹಾಸ ಲೇಖಕ ಮತ್ತು ಕೆಎಸ್ಸಾರ್ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಉಪಾಧ್ಯಕ್ಷರಾದ ಮಲಯಾಳಿ ಭಾಷಿಕ ಕೆ. ಧನಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳನ್ನು ನ.8ರಂದು ಕಸಾಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಬಳಗದ ಅಧ್ಯಕ್ಷ ರಾ.ನಂ.ಚಂದ್ರಶೇಖರ ತಿಳಿಸಿದ್ದಾರೆ.
Next Story





