ಪಟಾಕಿ ಬೆಂಕಿ ತಗುಲಿ ಬಾಲಕ ಸಾವು
ಹುಬ್ಬಳ್ಳಿ, ಅ.31: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ದ ಮಗುವೊಂದು ತಾನಿದ್ದ ಕೊಠಡಿಯಲ್ಲಿ ಪಟಾಕಿ ಸುಡುವ ವೇಳೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ ಹುಬ್ಬಳ್ಳಿ-ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ಸಮೀಪದ ಸಾಧು ನಗರ ಎಸ್ಟೇಟ್‌ನಲ್ಲಿ ಸೋಮವಾರ ಸಂಭವಿಸಿದೆ.
ಮೃತಪಟ್ಟ ಬಾಲಕನನ್ನು ಸಾಧು ಎಸ್ಟೇಟ್ ನಿವಾಸಿ ಮಾರುತಿ ಬೆಳಕುರ್ಕಿ ಎಂಬವರ ಪುತ್ರ ಹೇಮಂತ್ (7) ಎಂದು ಗುರುತಿಸಲಾಗಿದೆ. ಬಾಲಕ ಸಂಜೆ 4 ಗಂಟೆಯ ಸುಮಾರಿಗೆ ಮನೆಯ ಕೊಠಡಿಯ ಬಾಗಿಲ ಚಿಲಕ ಹಾಕಿಕೊಂಡು ಸುರುಸುರು ಬತ್ತಿ ಹಚ್ಚುವ ವೇಳೆ ಆಕಸ್ಮಿಕ ಬೆಂಕಿ ತಗುಲಿ ಒಮ್ಮೆಲೇ ಎಲ್ಲ ಪಟಾಕಿಗಳು ಸಿಡಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.ದರಿಂದಾಗಿ ಮನೆಯಲ್ಲಿದ್ದ ಬಟ್ಟೆ, ಹಾಸಿಗೆಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೆ ಇಡೀ ಮನೆಗೆ ಬೆಂಕಿ ವ್ಯಾಪಿಸಿದೆ. ತೀವ್ರ ಸುಟ್ಟಗಾಯಗಳಿಂದ ಬಾಲಕ ಗಂಭೀರವಾಗಿ ಗಾಯ ಗೊಂಡಿದ್ದು, ಹೊಗೆಯಿಂದಾಗಿ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಸಂದರ್ಭದಲ್ಲಿ ಮನೆಯವರು ಬಾಗಿಲು ಒಡೆಯಲು ಪ್ರಯತ್ನಿಸಿದರೂ, ಅದು ಸಾಧ್ಯವಾಗಿಲ್ಲ. ಆ ವೇಳೆಗಾಗಲೇ ಬಾಲಕ ಸಾವನ್ನಪ್ಪಿದ್ದ. ಈ ಸಂಬಂಧ ಹುಬ್ಬಳ್ಳಿ- ಧಾರವಾಡ ನವ ನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





