ಕನ್ನಡ ಬಾವುಟ ಕಡ್ಡಾಯ ವಿಚಾರ
ನ.19ಕ್ಕೆ ವಿಚಾರಣೆ
ಬೆಂಗಳೂರು, ಅ.31: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡದ ಭಾವುಟವನ್ನು ಸರಕಾರಿ ಶಾಲಾ, ಕಾಲೇಜುಗಳ ಮೇಲೆ ಕಡ್ಡಾಯವಾಗಿ ಹಾರಿಸಬೇಕೆಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಸೂಚನೆ ನೀಡಿದ್ದರು. ಆದರೆ, ಈ ಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕನ್ನಡ ಭಾವುಟವನ್ನು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲಿ ಹಾರಿಸಲಾಗಿರಲಿಲ್ಲ. ಆದರೆ, ಈ ಬಾರಿಯಾದರೂ ನವೆಂಬರ್ 1ರಂದು ಸರಕಾರಿ ಶಾಲಾ, ಕಾಲೇಜುಗಳ ಮೇಲೆ ಕಡ್ಡಾಯವಾಗಿ ಕನ್ನಡ ಭಾವುಟವನ್ನು ಹಾರಿಸುತ್ತಾರ ಎಂಬ ಪ್ರಶ್ನೆ ಉದ್ಭವಿಸಿದೆ.ಹಿಂದೆ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿಕ್ರಮ್‌ಜೀತ್ ಸೇನ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸರಕಾರಿ ಶಾಲಾ, ಕಾಲೇಜುಗಳ ಮೇಲೆ ಕನ್ನಡದ ಭಾವುಟವನ್ನು ಹಾರಿಸಲು ಕಡ್ಡಾಯಗೊಳಿಸಲು ಆದೇಶಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ದೇಶದ ಭಾವುಟ ಹಾಗೂ ರಾಜ್ಯದ ಭಾವುಟದ ಮಧ್ಯೆ ಹಲವು ಕಾನೂನು ತೊಡಕುಗಳಿವೆ ಎಂದು ನ್ಯಾಯಪೀಠವು ಅಭಿಪ್ರಾಯಿಸಿತ್ತು.ದರೆ, ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಮತ್ತಿತರರ ಅರ್ಜಿದಾರರು ಕನ್ನಡ ಭಾವುಟವನ್ನು ಶಾಲಾ, ಕಾಲೇಜುಗಳ ಮೇಲೆ ಕಡ್ಡಾಯವಾಗಿ ಹಾರಿಸಿದರೆ ಕನ್ನಡದ ಸಂಸ್ಕೃತಿ, ಭಾಷೆ, ನೆಲ, ಜಲದ ಬಗ್ಗೆ ಅವರಲ್ಲಿ ಗೌರವ ಬರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದರ ಮಧ್ಯೆಯೇ ಸರಕಾರಿ ಪರ ವಕೀಲರು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಸರಕಾರಿ ಶಾಲಾ, ಕಾಲೇಜುಗಳ ಮೇಲೆ ಕಡ್ಡಾಯವಾಗಿ ಕನ್ನಡದ ಭಾವುಟವನ್ನು ಹಾರಿಸಬೇಕೆಂದು ಸೂಚಿಸಿರುವ ಬಗ್ಗೆ ಮಾಹಿತಿ ಪಡೆದು ಹೈಕೋರ್ಟ್‌ಗೆ ನೀಡಲಾಗುವುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ನ.19ಕ್ಕೆ ಮುಂದೂಡಿದೆ.





