ದಲಿತ ರೈತರ ರಕ್ಷಣೆಗೆ ಸರಕಾರ ಮುಂದಾಗಲಿ
ಮುನಿಸ್ವಾಮಿ ನೇತೃತ್ವದಲ್ಲಿದಿನ್ನೂರು ಗ್ರಾಮಸ್ಥರ ಧರಣಿ

ಬೆಂಗಳೂರು, ಅ.31: ಅಹಿಂದ ಪರ ಎಂದು ಬಿಂಬಿಸಿಕೊಳ್ಳುವ ರಾಜ್ಯ ಸರಕಾರವು, ಕಾಡುಗುಡಿ ಪ್ಲಾಂಟೇಷನ್‌ನಲ್ಲಿ ಉಳುಮೆ ಮಾಡುತ್ತಿರುವ ದಲಿತ ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಕಾಡುಗುಡಿ ಬಳಿಯಿರುವ ದಿನ್ನೂರು ಗ್ರಾಮದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಮಾರು 70 ವರ್ಷದಿಂದ ದಲಿತ ರೈತರು ಕಾಡುಗುಡಿ ಪ್ಲಾಂಟೇಷನ್‌ನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.ಂಪ್ಯೂಟರ್ ಆಧಾರಿತ ಪಹಣಿ ಪತ್ರಗಳನ್ನು ಬಿಟ್ಟು, ಉಳಿದ ಎಲ್ಲ ರೀತಿಯ ದಾಖಲೆಗಳು ಈ ರೈತರ ಬಳಿಯಿದೆ. ಈ ಹಿಂದೆ ಕೆಐಎಡಿಬಿಯವರು ಕಂಟೇನರ್ ಹಾಗೂ ಗೂಡ್ಸ್ ಶೆಡ್ ಘಟಕಕ್ಕೆ ಭೂಮಿ ಸ್ವಾಧೀನಪಡಿಸಿಕೊಂಡಾಗ ಇವರಿಗೆ 30-60 ಸಾವಿರ ರೂ. ಪ್ರತಿ ಎಕರೆಗೆ ಪರಿಹಾರವನ್ನು ನೀಡಿರುವ ದಾಖಲೆಗಳು ಇವೆ ಎಂದು ಅವರು ಹೇಳಿದರು.
ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಖಾಸಗಿಯವರಿಗೆ ಈ ಭೂಮಿಯನ್ನು ನೀಡಲು ರಾಜ್ಯ ಸರಕಾರವು, ಜಿಲ್ಲಾಧಿಕಾರಿ ಶಂಕರ್ ಮೂಲಕ ಇಲ್ಲಿನ ಕೋಟ್ಯಂತರ ರೂ.ಬೆಲೆ ಬಾಳುವ ಜಮೀನಿಗೆ ತಂತಿ ಬೇಲಿ ಹಾಕುತ್ತಿದ್ದಾರೆ. ಜಿಲ್ಲಾಡಳಿತವು ತೆರವು ಕಾರ್ಯಾಚರಣೆ ವೇಳೆ ಅತ್ಯಂತ ಅಮಾನವೀಯವಾಗಿ ವರ್ತಿಸಿದೆ ಎಂದು ಮುನಿಸ್ವಾಮಿ ಕಿಡಿಗಾರಿದರು.
ದಲಿತ ರೈತರನ್ನು ಭೂಗಳ್ಳರಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಇಲ್ಲಿನ ರೈತರು ಭೂಗಳ್ಳರಲ್ಲ. ಯಾವುದೆ ನಕಲಿ ದಾಖಲೆಗಳನ್ನು ಸೃಷ್ಟಿಸಿಲ್ಲ. 1949-50ರಲ್ಲಿ ಅಂದಿನ ಜಿಲ್ಲಾಧಿಕಾರಿ ದಲಿತರಿಗೆ ಭೂಮಿ ಹಂಚಿಕೆ ಮಾಡಿದ ಪರಿಣಾಮ ಈ ಗ್ರಾಮ ಅಸ್ತಿತ್ವಕ್ಕೆ ಬಂದಿದೆ ಎಂದು ಅವರು ಹೇಳಿದರು.ಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಸರಕಾರ ಮುಂದಾದರೆ, ಗ್ರಾಮಸ್ಥರೊಂದಿಗೆ ಸೇರಿ ಜೈಲು ಭರೋ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ಭೂಮಿಯನ್ನು ವಶಪಡಿಸಿಕೊಂಡರೆ, ನಾವು ವಿಷ ಸೇವಿಸಿ ಸಾಯಲು ಸಿದ್ಧ ಎಂಬ ಭಾವನೆ ರೈತರಲ್ಲಿ ಮೂಡಿದೆ ಎಂದು ಮುನಿಸ್ವಾಮಿ ತಿಳಿಸಿದರು.ಾಡುಗುಡಿ ಪ್ಲಾಂಟೇಷನ್ ಹೋರಾಟ ಸಮಿತಿಯ ಸಂಚಾಲಕ ಮುನಿರಾಜು ಮಾತನಾಡಿ, ಕಳೆದ ಮಾ.11ರಂದು ಹಿಂದಿನ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ನಮ್ಮಾಂದಿಗೆ ಚರ್ಚೆ ಮಾಡಿ, ದಲಿತರು ವಾಸ ಮಾಡುತ್ತಿರುವ ಹಾಗೂ ಉಳುಮೆ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವ ಆಶ್ವಾಸನೆ ನೀಡಿದ್ದರು ಎಂದರು.ದರೆ, ಈಗ ನಮ್ಮ ಭೂಮಿಗೆ ತಂತಿ ಬೇಲಿ ಹಾಕುವ ಕೆಲಸ ನಡೆಯುತ್ತಿದೆ. ನಮ್ಮನ್ನು ಭೂಗಳ್ಳರು ಎಂದು ಬಿಂಬಿಸುತ್ತಿರುವುದು ಖಂಡನೀಯ. ನಮ್ಮ ಪ್ರಾಣ ಹೋದರು ಚಿಂತೆಯಿಲ್ಲ. ಭೂಮಿ ಮಾತ್ರ ಬಿಡುವುದಿಲ್ಲ. ಸರಕಾರ ಹಾಗೂ ಆಡಳಿತ ಯಂತ್ರದ ಮೇಲೆ ನಮಗೆ ನಂಬಿಕೆಯಿಲ್ಲದಂತಾಗಿದೆ ಎಂದು ಅವರು ಹೇಳಿದರು.ಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಗೌರಮ್ಮ, ಸಿಪಿಎಂ ಮುಖಂಡರಾದ ಗೋಪಾಲಗೌಡ, ಚನ್ನಸಂದ್ರ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







