ಬೆಳ್ತಂಗಡಿ: ನ.6ರಂದು ಹಗ್ಗಜಗ್ಗಾಟ ಪಂದ್ಯ
ಬೆಳ್ತಂಗಡಿ, ಅ.31: ರಜತ ಫ್ರೆಂಡ್ಸ್, ಪಣಕಜೆ ಇದರ ವತಿಯಿಂದ ಜಿಲ್ಲಾಮಟ್ಟದ ಪುರುಷರ 550 ಕೆ.ಜಿ. ವಿಭಾಗದ ಗ್ರಿಪ್ ಹಗ್ಗಜಗ್ಗಾಟ ಪಂದ್ಯವು ನ.6ರಂದು ನಡೆಯಲಿದೆ ಎಂದು ಫ್ರೆಂಡ್ಸ್ ಅಧ್ಯಕ್ಷ ಹರೀಶ್ ನಾಯಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪಣಕಜೆ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ನಡೆಯುವ ಕಾರ್ಯಕ್ರಮವನ್ನು ಪಾರೆಂಕಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ರಾವ್ ಉದ್ಘಾಟಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫ್ರೆಂಡ್ಸ್‌ನ ಪ್ರ.ಕಾರ್ಯದರ್ಶಿ ಸತೀಶ್ ಆಚಾರ್ಯ, ಗೌರವಾಧ್ಯಕ್ಷ ಸೀತಾರಾಮ ಸಾಲ್ಯಾನ್, ರಮೇಶ್ ಮೂಲ್ಯ, ಲಿಯೊ ರೊಡ್ರಿಗಸ್ ಉಪಸ್ಥಿತರಿದ್ದರು.
Next Story





