ಪೈವಳಿಕೆ: ಇಂದಿರಾಗಾಂಧಿ ಸಂಸ್ಮರಣೆ
ಮಂಜೇಶ್ವರ, ಅ.31: ದೇಶದ ಪ್ರಮುಖ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದು ಭಾರತದ ಪ್ರಧಾನಿಯಾಗಿ ದೇಶಕ್ಕೆ ಇಂದಿರಾಗಾಂಧಿ ನೀಡಿದ ಕೊಡುಗೆ ಸ್ಮರಣೀಯ ಎಂದು ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕೇಶವ ಪ್ರಸಾದ್ ನಾಣಿತ್ತಿಲು ಹೇಳಿದರು.
ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪೈವಳಿಕೆ ಶಾಲೆಯಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಮರಣಾ ಕಾರ್ಯಕ್ರಮವನ್ನು ಅಶ್ರಪ್ ಅಲಿ ಷಾ ಉದ್ಘಾಟಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಆಮಿರ್ ಕೋಡಿಯಡ್ಕ, ಸೋಮಶೇಖರ, ಜಿಪಂ ಸ್ಥಾಯಿ ಸಮಿತಿ ಸದಸ್ಯ ಹರ್ಷಾದ್ ವರ್ಕಾಡಿ, ಮಂಜೇಶ್ವರ ಯುವ ಕಾಂಗ್ರೆಸ್‌ನ ನಾಸಿರ್, ಪೈವಳಿಕೆ ಪಂ.ಸದಸ್ಯೆ ವಸಂತಿ ಯಾದವ್, ಮೋನಪ್ಪ ಶೆಟ್ಟಿ, ಥೋಮಸ್ ಮಾಸ್ತರ್, ರಾಮ್ ಭಟ್, ಶಫೀಕ್ ಅಹ್ಮದ್, ರಾಘವೇಂದ್ರ ಭಟ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





