ಮೂರನೆ ಟೆಸ್ಟ್: ಪಾಕ್‌ಗೆ ವಿಂಡೀಸ್ ತಿರುಗೇಟು

ಶಾರ್ಜಾ, ಅ.31: ಇಲ್ಲಿ ನಡೆಯುತ್ತಿರುವ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಪಾಕಿಸ್ತಾನಕ್ಕೆ ವೆಸ್ಟ್‌ಇಂಡೀಸ್ ತಂಡ ತಿರುಗೇಟು ನೀಡಿದ್ದು, ಎರಡನೆ ದಿನದಾಟದಂತ್ಯಕ್ಕೆ 78 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 244 ರನ್ ಗಳಿಸಿದೆ.
95 ರನ್ ಗಳಿಸಿರುವ ಆರಂಭಿಕ ದಾಂಡಿಗ ಕೆ.ಸಿ.ಬ್ರಾಥ್‌ವೈಟ್ ಮತ್ತು 6 ರನ್ ಗಳಿಸಿರುವ ನಾಯಕ ಜೇಸನ್ ಹೋಲ್ಡರ್ ಔಟಾಗದೆ ಕ್ರೀಸ್‌ನಲ್ಲಿದ್ಧಾರೆ.
ಮೊದಲ ದಿನದಾಟದಂತ್ಯಕ್ಕೆ 83 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 255 ರನ್ ಗಳಿಸಿದ್ದ ಪಾಕಿಸ್ತಾನ ತಂಡ ಈ ಮೊತ್ತಕ್ಕೆ 26 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು.
ಯಾಸೀರ್ ಶಾ(12) ಮತ್ತು ಮುಹಮ್ಮದ್ ಆಮಿರ್(20) ಅವರನ್ನು ಜೋಸೆಫ್ ಪೆವಿಲಿಯನ್‌ಗೆ ಅಟ್ಟುವ ಮೂಲಕ ಪಾಕಿಸ್ತಾನದ ಮೊದಲ ಇನಿಂಗ್ಸ್ ಮುಗಿಸಿದರು.
ಬಿಶೂ 77ಕ್ಕೆ 4, ಗ್ಯಾಬ್ರೆಯೆಲ್ 67ಕ್ಕೆ 3, ಜೋಸೆಫ್ 57ಕ್ಕೆ 2ಮತ್ತು ಚೇಸ್ 47ಕ್ಕೆ 1 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್ ಆರಂಭಿಸಿದ ವಿಂಡೀಸ್ 6 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗ ಜಾನ್ಸನ್(1) ಅವರನ್ನು ವಹಾಬ್ ರಿಯಾಝ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಮುಹಮ್ಮದ್ ಆಮಿರ್(44ಕ್ಕೆ 2), ವಹಾಬ್ ರಿಯಾಝ್(65ಕ್ಕೆ 2), ಯಾಸೀರ್ ಶಾ(56ಕ್ಕೆ 1) ಮತ್ತು ಝುಲ್ಪೀಕರ್ ಬಾಬರ್(45ಕ್ಕೆ 1) ದಾಳಿಗೆ ಸಿಲುಕಿ 23 ಓವರ್‌ಗಳಲ್ಲಿ 68 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಐದನೆ ವಿಕೆಟ್‌ಗೆ ಬ್ರಾಥ್‌ವೈಟ್ ಮತ್ತು ಚೇಸ್ 83 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 48.3 ಓವರ್‌ಗಳಲ್ಲಿ 151ಕ್ಕೆ ಏರಿಸಿದರು. ಚೇಸ್ 50 ರನ್ ಗಳಿಸಿ ಔಟಾದರು. ಆರನೆ ವಿಕೆಟ್‌ಗೆ ಬ್ರಾಥ್‌ವೈಟ್ ಮತ್ತು ಡೌರಿಚ್ ಮತ್ತೆ 83 ರನ್‌ಗಳ ಜೊತೆಯಾಟ ನೀಡಿದರು. ಡೌರಿಚ್ 47 ರನ್ ಗಳಿಸಿ ರಿಯಾಝ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬ್ರಾಥ್‌ವೈಟ್ 95 ರನ್(206ಎ, 10) ಗಳಿಸಿ ಬ್ಯಾಟಿಂಗ್‌ನ್ನು ಮಂಗಳವಾರಕ್ಕೆ ಕಾಯ್ದಿರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ ಪಾಕಿಸ್ತಾನ ಮೊದಲ ಇನಿಂಗ್ಸ್ 90.5 ಓವರ್‌ಗಳಲ್ಲಿ ಆಲೌಟ್ 281( ಅಸ್ಲಮ್ 74, ಯೂನಿಸ್ ಖಾನ್ 51, ಮಿಸ್ಬಾವುಲ್ ಹಕ್ 53, ಸರ್ಫರಾಝ್ ಅಹ್ಮದ್ 51; ಬಿಶೂ 77ಕ್ಕೆ 4, ಗ್ಯಾಬ್ರೆಯೆಲ್ 67ಕ್ಕೆ 3, ಜೋಸೆಫ್ 57ಕ್ಕೆ 2)
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 78 ಓವರ್‌ಗಳಲ್ಲಿ 244/6( ಬ್ರಾಥ್‌ವೈಟ್ ಔಟಾಗದೆ 95, ಚೇಸ್ 50, ಡೌರಿಚ್ 47; ಆಮಿರ್ 44ಕ್ಕೆ 2, ರಿಯಾಝ್ 65ಕ್ಕೆ 2).





