ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯತಿಥಿ ಆಚರಣೆ

ಮಂಗಳೂರು, ಅ.31: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 32ನೆ ಪುಣ್ಯತಿಥಿಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಇಂದಿರಾ ಗಾಂಧಿ ದೇಶದ ಆಸ್ತಿಯಾಗಿದ್ದರು. ಪ್ರಧಾನಿಯಾಗಿದ್ದಾಗ ಅನೇಕ ಸಂದರ್ಭಗಳಲ್ಲಿ ದಿಟ್ಟತನವನ್ನು ಪ್ರದರ್ಶಿಸಿ, ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದ್ದರು. ಅದೇ ಕಾರಣದಿಂದಲೇ ಅವರನ್ನು ‘ದೇಶದ ಉಕ್ಕಿನ ಮಹಿಳೆ’ಯೆಂದೇ ಕರೆಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಸರಕಾರದ ಮುಖ್ಯ ಸಚೇ ತಕ ಐವನ್ ಡಿಸೋಜ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಮಾತನಾಡಿದರು.
ಪಕ್ಷದ ಪ್ರಮುಖರಾದ ಪದ್ಮನಾಭ ನರಿಂಗಾನ, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ, ಟಿ.ಕೆ.ಸುಧೀರ್, ಅಶ್ರಫ್, ಕವಿತಾ ಸನಿಲ್, ಶುಭೋದಯ ಆಳ್ವ, ಬಾಲಕೃಷ್ಣ ಶೆಟ್ಟಿ, ಅಪ್ಪಿ, ಅಬ್ದುರ್ರವೂಫ್, ನವೀನ್ ಡಿಸೋಜ, ಅಶೋಕ ಡಿ.ಕೆ., ಶೈಲಜಾ, ಅಖಿಲಾ ಆಳ್ವ, ಆಶಾ ಡಿಸಿಲ್ವ, ಗಣೇಶ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.





