Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಾಧನೆಗೆ ಸಂದ ಪ್ರಶಸ್ತಿ

ಸಾಧನೆಗೆ ಸಂದ ಪ್ರಶಸ್ತಿ

ವಾರ್ತಾಭಾರತಿವಾರ್ತಾಭಾರತಿ31 Oct 2016 11:46 PM IST
share
ಸಾಧನೆಗೆ ಸಂದ ಪ್ರಶಸ್ತಿ

ಪ್ರಶಸ್ತಿಯಿಂದ ಸಾಧಕನ ಘನತೆ ಹೇಗೆ ಹೆಚ್ಚುತ್ತದೆಯೋ ಹಾಗೆಯೇ ಅರ್ಹ ಸಾಧಕನಿಗೆ ಸಲ್ಲುವ ಮೂಲಕ ಪ್ರಶಸ್ತಿಯೂ ಘನತೆಯನ್ನು ಪಡೆದುಕೊಳ್ಳುತ್ತದೆ. ಪ್ರಶಸ್ತಿ ಎಷ್ಟು ಹಿರಿದಾದುದೇ ಇರಲಿ, ಅದರ ನಗದು ಬಹುಮಾನ ಎಷ್ಟೇ ದೊಡ್ಡದಿರಲಿ, ಅದು ಅರ್ಹ ಲೇಖಕನಿಗೆ ಸಲ್ಲುತ್ತಾ ಬಂದಾಗಷ್ಟೇ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುತ್ತದೆ. ಒಂದು ಘನ ಪ್ರಶಸ್ತಿ ಬೇರೆ ಬೇರೆ ರಾಜಕೀಯ ದಾರಿಗಳ ಮೂಲಕ ಅನರ್ಹರಿಗೆ ಸಲ್ಲುತ್ತಾ ಹೋದರೆ, ಮುಂದೊಂದು ದಿನ ಆ ಪ್ರಶಸ್ತಿಯನ್ನು ಪಡೆಯಲು ಅರ್ಹರು ಹಿಂಜರಿಯುವ ಸಂದರ್ಭ ಒದಗಬಹುದು. ರಾಜ್ಯ ಮಟ್ಟದ ಅದೆಷ್ಟೋ ಘನ ಪ್ರಶಸ್ತಿಗಳು ಅಸ್ತಿತ್ವದಲ್ಲಿವೆ. ಹಲವು ಗಣ್ಯರು ಆ ಪ್ರಶಸ್ತಿಯನ್ನು ಪಡೆಯುವ ಮೂಲಕ ಅದರ ತೂಕವನ್ನು ಹೆಚ್ಚಿಸಿದ್ದಾರೆ. ಕುವೆಂಪು ತನ್ನದಾಗಿಸಿಕೊಂಡ ಪ್ರಶಸ್ತಿ, ಜಿಎಸ್ಸೆಸ್ ಪಡೆದುಕೊಂಡಿರುವ ಪ್ರಶಸ್ತಿ ಎನ್ನುವ ಕಾರಣಕ್ಕಾಗಿ ಕೆಲವು ಗೌರವಗಳು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿವೆ. ಹಾಗೆಯೇ ಕೆಲವು ಪ್ರಶಸ್ತಿ ಯಾರಿಗೆ ಸಲ್ಲಬಾರದಿತ್ತೋ ಅವರಿಗೆ ಸಲ್ಲುವ ಮೂಲಕ ತನ್ನ ಅಸಲಿತನವನ್ನೂ ಬಹಿರಂಗಪಡಿಸುವುದಿದೆ. ಸರಸ್ವತಿ ಸಮ್ಮಾನ್ ಬೃಹತ್ ಉದ್ಯಮಿಯೊಬ್ಬರ ಕೃಪಾ ಕಟಾಕ್ಷದಿಂದ ಅಸ್ತಿತ್ವಕ್ಕೆ ಬಂದಿರುವ ದೇಶದ ಅತಿ ದೊಡ್ಡ ಪ್ರಶಸ್ತಿ. ಜ್ಞಾನಪೀಠ ಪ್ರಶಸ್ತಿಯನ್ನು ತನ್ನದಾಗಿಸಲು ಸಾಧ್ಯವಾಗದ ಬಲಪಂಥೀಯ ಒಲವುಳ್ಳ ಬರಹಗಾರರಿಗೆ ನೀಡುವುದಕ್ಕಾಗಿ ಅಸ್ತಿತ್ವಕ್ಕೆ ಬಂದ ಪ್ರಶಸ್ತಿ ಎಂಬ ಟೀಕೆಯೂ ಇದರ ಮೇಲಿದೆ. ರಾಜ್ಯದಲ್ಲಿ ಈ ಪ್ರಶಸ್ತಿಯನ್ನು ಎಸ್. ಎಲ್. ಭೈರಪ್ಪ ತನ್ನದಾಗಿಸಿಕೊಂಡಾಗ ಹಲವರು ಈ ಪ್ರಶಸ್ತಿಯನ್ನು ಕೊಂಡಾಡಿದರು. ಭೈರಪ್ಪರ ಕುರಿತಂತೆ ಪುಟಗಟ್ಟಳೆ ಬರೆದರು. ಗೃಹಭಂಗ, ಪರ್ವ, ಮತದಾನ, ವಂಶವೃಕ್ಷ ಮೊದಲಾದ ಮಹತ್ವದ ಕಾದಂಬರಿಗಳನ್ನು ನೀಡಿರುವ ಭೈರಪ್ಪ ಅತ್ಯುತ್ತಮ ಲೇಖಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಮೇಲೆ ಅದೆಷ್ಟೇ ಟೀಕೆಗಳು, ಆರೋಪಗಳಿದ್ದರೂ, ಅವರು ಕಾದಂಬರಿ ಲೋಕದಲ್ಲಿ ಮಾಡಿರುವ ಸಾಧನೆಗಳನ್ನು ನಿರಾಕರಿಸುವಂತಿಲ್ಲ. ಈ ಕಾರಣದಿಂದಲೇ ಸರಸ್ವತಿ ಸಮ್ಮಾನ್ ಭೈರಪ್ಪರಿಗೆ ಸಿಕ್ಕಿದಾಗ ಅದಕ್ಕವರು ಅರ್ಹರು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದಾದ ಬಳಿಕ ಅದೇ ಪ್ರಶಸ್ತಿ ರಾಜ್ಯದವರೇ ಆಗಿರುವ ವೀರಪ್ಪ ಮೊಯ್ಲಿಯವರಿಗೆ ಸಿಕ್ಕಿದಾಗ ಭೈರಪ್ಪ ಅಭಿಮಾನಿಗಳು ಕನಲಿದರು. ಭೈರಪ್ಪ ಮತ್ತು ಮೊಯ್ಲಿ ಇಬ್ಬರನ್ನೂ ಈ ಪ್ರಶಸ್ತಿ ಒಂದೇ ಮಾಪನವಿಟ್ಟು ತೂಗಿತು ಎನ್ನುವುದು ಅವರ ಆರೋಪ. ಒಟ್ಟಿನಲ್ಲಿ, ಪ್ರಶಸ್ತಿಯ ಕುರಿತಂತೆ ಹಿರಿಮೆ, ಗರಿಮೆಗಳೂ ಒಮ್ಮಿಂದೊಮ್ಮೆಲೆ ತಗ್ಗಿದವು. ಒಂದು ಪ್ರಶಸ್ತಿಯ ಹಿಗ್ಗುವಿಕೆ-ಕುಗ್ಗುವಿಕೆ ಅದನ್ನು ಪಡೆದವರ ವ್ಯಕ್ತಿತ್ವವನ್ನು ಆಧರಿಸಿಕೊಂಡಿರುತ್ತದೆ ಎನ್ನುವುದು ಇದೇ ಕಾರಣಕ್ಕೆ.
  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಕನ್ನಡ ನಾಡು, ನುಡಿಗಾಗಿ ಸಾಧನೆಗೈದ ಮಹನೀಯರಿಗೆ ಸಲ್ಲುವಂತಹದು. ಆ ಸಾಧಕರನ್ನು ಗೌರವಿಸುವುದು ಎಂದರೆ ಕನ್ನಡತನವನ್ನು ಗೌರವಿಸುವುದು ಎಂದೇ ಅರ್ಥ. ಕನ್ನಡದ ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸಿದ ಸಾಧಕರಿಗೆ ಈ ಪ್ರಶಸ್ತಿ ಸಲ್ಲಬೇಕು ಎನ್ನುವುದು ಮುಖ್ಯ ಉದ್ದೇಶ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೇ ಘೋಷಿಸುವ ಈ ಪ್ರಶಸ್ತಿಯ ಮೂಲಕ ಕನ್ನಡ ನಾಡಿನಲ್ಲಿ ಸಾಧಕರನ್ನು ಉತ್ತೇಜಿಸುವ ಕೆಲಸವೂ ನಡೆಯುತ್ತದೆ. ಆದರೆ ದುರದೃಷ್ಟವಶಾತ್ ಯಾವಾಗ ರಾಜಕಾರಣಿಗಳು ಈ ಪ್ರಶಸ್ತಿ ಆಯ್ಕೆಯಲ್ಲಿ ಹಸ್ತಕ್ಷೇಪ ನಡೆಸತೊಡಗಿದರೋ ಅಲ್ಲಿಂದ ಇದು ತನ್ನ ಉದ್ದೇಶವನ್ನು, ಘನತೆಯನ್ನು ಕಳೆದುಕೊಳ್ಳುತ್ತಾ ಬಂತು. ಒಂದು ದಶಕದ ಹಿಂದೆಯಂತೂ ಈ ಪ್ರಶಸ್ತಿಯ ಸ್ಥಿತಿ ಚಿಂತಾಜನಕವಾಗಿತ್ತು. ರಾಜಕಾರಣಿಗಳ ಹಸ್ತಕ್ಷೇಪಗಳಿಂದಾಗಿ ಎಂತೆಂತಹ ಕಳಪೆ ವ್ಯಕ್ತಿಗಳಿಗೆ ಈ ಪ್ರಶಸ್ತಿ ಸಂದು ಹೋಯಿತು ಎಂದರೆ, 'ಎಲ್ಲಿ ತನಗೆ ಪ್ರಶಸ್ತಿ ಕೊಟ್ಟು ಅವಮಾನಿಸಿ ಬಿಡುತ್ತಾರೋ' ಎಂದು ನಿಜವಾದ ಸಾಧಕರು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿಯ ಆಡಳಿತದಲ್ಲಿ ಅದರಲ್ಲೂ ಯಡಿಯೂರಪ್ಪ ಸಾಧಕ ಪತ್ರಕರ್ತರು ಪ್ರಶಸ್ತಿಗೆ ಅರ್ಹರಿದ್ದರೂ, ಪ್ರತಾಪ ಸಿಂಹರಂತಹ ಕಿರಿಯ ಎಳೆ ನಿಂಬೆಕಾಯಿಗಳು ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ರಾಜ್ಯೋತ್ಸವ ಪ್ರಶಸ್ತಿ ಎಂದರೆ ಸರಕಾರದ ನಿಗಮ ಮಂಡಳಿ ವಿತರಣೆಯಷ್ಟೇ ಚರ್ಚೆಗೊಳಗಾಯಿತು. ವಿವಿಧ ರಾಜಕೀಯ ನಾಯಕರು, ಶಾಸಕರು ತಮ್ಮ ತಮ್ಮ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿ ಮುಖ್ಯಮಂತ್ರಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದರು. ಅಂತಿಮವಾಗಿ ಪ್ರತಿಭೆ, ಹಿರಿತನ ಎಲ್ಲವೂ ಬದಿಗೆ ಸರಿಯಿತು. ಪ್ರಶಸ್ತಿಗಾಗಿಯೇ ವಿಧಾನಸೌಧ ಆವರಣದಲ್ಲಿ ಬ್ರೋಕರ್‌ಗಳು ಓಡಾಡತೊಡಗಿದರು. ಇಂತಹ ಸಂದರ್ಭದಲ್ಲೇ ಹಲವರು ಇದರ ವಿರುದ್ಧ ಧ್ವನಿಯೆತ್ತಿದರು. ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿಯೋ ಏನೋ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬೆನ್ನಿಗೇ ರಾಜ್ಯೋತ್ಸವ ಪ್ರಶಸ್ತಿಗಾಗಿ ಕೆಲವು ಕಠಿಣ ನಿಯಮಗಳನ್ನು ಅನುಸರಿಸಲಾಯಿತು. ಆಯ್ಕೆ ಸಮಿತಿಗೆ ಅರ್ಹರನ್ನು ತರುವ ಮೂಲಕ, ಆಯ್ಕೆಯನ್ನು ಇನ್ನಷ್ಟು ಬಿಗಿ ಮಾಡಲಾಯಿತು. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಡೆದ ಆಯ್ಕೆ ಎಲ್ಲರ ಪ್ರಶಂಸೆಯನ್ನು ಗಿಟ್ಟಿಸಿತ್ತು. ಮುಖ್ಯವಾಗಿ ಈ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ವಯಸ್ಸನ್ನೂ ಪರಿಗಣಿಸಲಾಯಿತು. ಹಿರಿಯರನ್ನು ಬದಿಗಿಟ್ಟು ಕಿರಿಯರಿಗೆ ಪ್ರಶಸ್ತಿಯನ್ನು ಕೊಡುವುದು ಯಾವ ರೀತಿಯಲ್ಲೂ ನ್ಯಾಯವಲ್ಲ. ಒಂದು ವೇಳೆ ಹಿರಿಯರಲ್ಲಿ ಅರ್ಹರಿಲ್ಲದೇ ಇದ್ದಿದ್ದರೆ ಕೊಡಬಹುದಿತ್ತೋ ಏನೋ. ಅರವತ್ತು, ಎಪ್ಪತ್ತು ದಾಟಿದ ಅರ್ಹ ಹಿರಿಯರನ್ನು ಕೈಬಿಟ್ಟು, ಇನ್ನೂ ವಿವಿಧ ಕ್ಷೇತ್ರದಲ್ಲಿ ಕಣ್ಣು ಪಿಳುಕಿಸುತ್ತಿರುವ ಎಳೆಯರನ್ನು ಆಯ್ಕೆ ಮಾಡುವುದು ಪರೋಕ್ಷವಾಗಿ ಹಿರಿಯರಿಗೆ ಮಾಡುವ ಅವಮಾನವೂ ಹೌದು. ಆದುದರಿಂದಲೇ ಕಳೆದ ವರ್ಷದ ಆಯ್ಕೆ ಎಲ್ಲರ ಗಮನವನ್ನು ಸೆಳೆದಿತ್ತು. ಈ ಬಾರಿಯೂ ಅಷ್ಟೇ, ಪ್ರಶಸ್ತಿಯ ಸಂದರ್ಭದಲ್ಲಿ ಸರಕಾರ ಯಾವ ರಾಜಿಯನ್ನು ಮಾಡಿಕೊಳ್ಳಲಿಲ್ಲ. ಆದುದರಿಂದಲೇ, ಎಲ್.ಸಿ.ಸೋನ್ಸ್, ಕೆ.ಟಿ.ಗಟ್ಟಿ, ದೈತೋಟ, ಡಾ.ಬಲ್ಲಾಳ್, ಶಿವರಾಜ್ ಪಾಟೀಲ್ ಮೊದಲಾದ ಹಿರಿಯರಿಗೆ ಸಂದಿದೆ. ತಮ್ಮ ತಮ್ಮ ಹಿಂಬಾಲಕರಿಗೆ ಪ್ರಶಸ್ತಿಯನ್ನು ಕೊಡಿಸುವ ರಾಜಕಾರಣಿಗಳ ಉತ್ಸಾಹಕ್ಕೆ ತಣ್ಣೀರು ಬಿದ್ದಿದೆ.
 ಪ್ರಶಸ್ತಿಯ ಆಯ್ಕೆಯ ಸಂದರ್ಭದಲ್ಲಿ ಹೈಕೋರ್ಟ್ ಕೂಡ ತನ್ನ ಹಸ್ತಕ್ಷೇಪ ಮಾಡಿದೆ. ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕಿಂತ, ಈ ಹಿಂದೆ ರಾಜಕಾರಣಿಗಳು ನಡೆಸುವ ಹಸ್ತಕ್ಷೇಪಕ್ಕಿಂತ ಎಷ್ಟೋ ಒಳಿತು ಎಂದು ನಾವು ಖುಷಿ ಪಡಬೇಕಾಗಿದೆ. ಮುಂದಿನ ದಿನಗಳಲ್ಲೂ ಅಷ್ಟೇ. ಆಯ್ಕೆ ಸಮಿತಿ ಒಮ್ಮೆ ಪ್ರಶಸ್ತಿಯ ಪಟ್ಟಿ ಪ್ರಕಟಿಸಿದ ಬಳಿಕ, ಅದರಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದರಿಂದ ಸರಕಾರ ದೂರವಿರಬೇಕು. ಹಾಗೆಯೇ 60 ದಾಟಿದವರಿಗಷ್ಟೇ ಪ್ರಶಸ್ತಿಯನ್ನು ನೀಡಬೇಕು. ಅದಕ್ಕಿಂತ ಕಿರಿಯರು ಬಹುದೊಡ್ಡ ಸಾಧನೆಯನ್ನು ಮಾಡಿದಾಗ, ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಾಗ ಈ ವಯಸ್ಸಿನ ನಿಯಮವನ್ನು ಮುರಿಯುವುದರಲ್ಲಿ ಅಡ್ಡಿಯಿಲ್ಲ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಮೂಲಕ, ಸಾಧನೆಗೆ ನಿಜವಾದ ಅರ್ಥದಲ್ಲಿ ಪ್ರೋತ್ಸಾಹ ನೀಡಿದಂತಾಗುತ್ತದೆ. ಇನ್ನಷ್ಟು ಹೊಸ ಪ್ರತಿಭೆಗಳು ಆ ಬೆಳಕಿನಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳುತ್ತವೆ. ಈ ಬಾರಿ ರಾಜ್ಯೋತ್ಸವ ಪಡೆದ ಎಲ್ಲ ಸಾಧಕರಿಗೂ ಅಭಿನಂದನೆಗಳು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X