ಅಫ್ಘಾನ್ ದಾಳಿಯಲ್ಲಿ 19 ಲಷ್ಕರೆ ಉಗ್ರರು ಹತ
ಕಾಬೂಲ್, ಅ. 31: ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಅಫ್ಘಾನಿಸ್ತಾನದ ಕುನಾರ್ ಪ್ರಾಂತದ ಡಂಗಮ್ ಜಿಲ್ಲೆಯ ಮೇಲೆ ನಡೆದ ವಾಯು ದಾಳಿಯಲ್ಲಿ ಕನಿಷ್ಠ 19 ಲಷ್ಕರೆ ತಯ್ಯಿಬ ಭಯೋತ್ಪಾದಕರು ಮೃತಪಟ್ಟಿದ್ದಾರೆ ಹಾಗೂ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸರಕಾರ ಇಂದು ಹೇಳಿದೆ.
ದಾಳಿಯ ವೇಳೆ, ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಭಯೋತ್ಪಾದಕ ಗುಂಪಿಗೆ ಸೇರಿದ ಒಂದು ಬಿಎಮ್-1 ರಾಕೆಟ್ ಲಾಂಚರ್ ಮತ್ತು ಒಂದು ಮಶೀನ್ ಗನ್ ನಾಶಪಡಿಸಲಾಯಿತು ಎಂದು ಹೇಳಿಕೆಯೊಂದರಲ್ಲಿ ಅಫ್ಘಾನ್ ಆಂತರಿಕ ಸಚಿವಾಲಯ ತಿಳಿಸಿದೆ.
Next Story





