ರೈತನನ್ನು ಕೊಂದು ಶವವನ್ನು ಸುಟ್ಟರು
ಬಂಡಾ(ಉ.ಪ್ರ),ಅ.31: ಬಂಡಾ ಜಿಲ್ಲೆಯ ಜಾಸ್ಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಕೆಲವು ದುಷ್ಕರ್ಮಿಗಳು ರೈತನೋರ್ವನನ್ನು ಕೊಂದು ಬಳಿಕ ಶವವನ್ನು ಸುಟ್ಟು ಹಾಕಿದ್ದಾರೆ. ಹಳೆಯ ದ್ವೇಷ ಘಟನೆಗೆ ಕಾರಣವಾಗಿದ್ದು, ಒಂದೇ ಕುಟುಂಬದ ಐವರು ಸೇರಿಕೊಂಡು ಕಮಲೇಶ ಶರ್ಮಾ(52)ನ ಮೇಲೆ ಹಲ್ಲೆ ನಡೆಸಿ, ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕಿದ್ದಾರೆ ಎಂದು ಎಸ್‌ಪಿ ಶ್ರೀಪತಿ ಮಿಶ್ರಾ ತಿಳಿಸಿದರು. ಮೂವರು ಸೋದರರು ಸೇರಿದಂತೆ ಎಲ್ಲ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ಘಟನೆಯಿಂದಾಗಿ ಗ್ರಾಮದಲ್ಲಿ ಉದ್ವಿಗ್ನತೆ ನೆಲೆಸಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿದೆ.
Next Story





