ಸರ್ದಾರ್ ಪಟೇಲ್ ಜಯಂತಿಯನ್ನು ಪುಣ್ಯತಿಥಿ ಎಂದು ಬ್ಯಾನರ್ ಹಾಕಿದ ಬಿಜೆಪಿ!
ಹೊಸದಿಲ್ಲಿ,ಅ.31: ಮುಂಬೈಯಲ್ಲಿ ಬಿಜೆಪಿ ಹಾಕಿದ ಬ್ಯಾನರ್‌ನಲ್ಲಿ ವಲ್ಲಭಭಾಯಿ ಪಟೇಲ್ ಜಯಂತಿ ಬದಲು ಅವರಿಗೆ ಪುಣ್ಯತಿಥಿ ಎಂದು ಬರೆದು ವಿವಾದ ಮೈಮೇಲೆಳೆದುಕೊಂಡಿದೆ ಎಂದು ವರದಿಯಾಗಿದೆ. ಮುಂಬೈ ಪಾಲ್‌ಘರ್‌ನಲ್ಲಿ ಬಿಜೆಪಿಯ ವತಿಯಿಂದ ಸ್ಚಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರಸಚಿವೆ ಸ್ಮತಿ ಇರಾನಿ ಬರುತ್ತಾರೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಜೊತೆಗೆ ಸ್ವಚ್ಛತಾ ಅಭಿಯಾನ ವಲ್ಲಭಭಾಯಿ ಪುಣ್ಯತಿಥಿ ನಿಮಿತ್ತ ಕೈಗೊಳ್ಳಲಾಗಿದೆ ಎಂದು ಬರೆಯಲಾಗಿದೆ. ಇದು ಜನರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
Next Story





