ಎನ್‌ಕೌಂಟರ್ ನಿಗೂಢ ದಿಗ್ವಿಜಯ್ ಸಿಂಗ್
ಭೋಪಾಲ್,ಅ.31: ಭೋಪಾಲ್ ಜೈಲಿನಿಂದ ತಪ್ಪಿಸಿಕೊಂಡು ಹೋದ ಸಿಮಿ ಕಾರ್ಯಕರ್ತರನ್ನು ಕೊಂದು ಹಾಕಿದ ಘಟನೆಯಲ್ಲಿ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಶಂಕೆ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಭೋಪಾಲ್ ಸೆಂಟ್ರಲ್ ಜೈಲ್‌ನಿಂದ ತಪ್ಪಿಸಿದ ಎಂಟು ಆರೋಪಿಗಳನ್ನು ಕೊಲ್ಲಲಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ ಬೆನ್ನಲ್ಲೇ ಇದರ ಬಗ್ಗೆ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಶಂಕೆ ವ್ಯಕ್ತಪಡಿಸಿವೆ.
ಜೈಲ್‌ನಿಂದ ತಪ್ಪಿಸಿಕೊಂಡ ಎಲ್ಲರೂ ಒಂದೇ ಸ್ಥಳದಲ್ಲಿ ಕೊಲ್ಲಲ್ಪಟ್ಟಿದ್ದು ಹೇಗೆ ಎಂದು ಆಪ್‌ನ ಶಾಸಕಿ ಅಲಕಾ ಲಾಂಬ ಪ್ರಶ್ನಿಸಿದ್ದಾರೆ.ಕೈದಿಗಳು ಜೈಲ್‌ನಿಂದ ಪರಾರಿಯಾಗಿದ್ದು ಹೇಗೆ ಎಂದು ತನಿಖೆ ನಡೆಯಲಿ ಎಂದು ಕಾಂಗ್ರೆಸ್ ನಾಯಕ ಕಮಲನಾಥ್ ಆಗ್ರಹಿಸಿದ್ದಾರೆ.
Next Story





