ಟಿಪ್ಪುಜಯಂತಿಯ ಸರಳ ಆಚರಣೆ: ಸಚಿವ ಸೀತಾರಾಮ್
ಟಿಪ್ಪುಜಯಂತಿ

ಮಡಿಕೇರಿ, ನ.1: ಟಿಪ್ಪುಜಯಂತಿಯನ್ನು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಸರಳ ರೀತಿಂುಲ್ಲಿ ಆಚರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಸರಕಾರ ಈಗಾಗಲೇ ಎಲ್ಲ ಇಲಾಖೆೆಗಳಿಗೂ ಸಂದೇಶವನ್ನು ಕಳುಹಿಸುವ ಮೂಲಕ ಟಿಪ್ಪುಜಯಂತಿಯನ್ನು ಸರಳವಾಗಿ ಆಚರಿಸಲು ಸೂಚನೆಯನ್ನು ನೀಡಿದೆ. ಅದರಂತೆ ಸರಳ ರೀತಿಯಲ್ಲಿ, ಶಾಂತಿಯುತ ವಾಗಿ ಟಿಪ್ಪು ಜಯಂತಿ ಆಚರಣೆ ನಡೆಯಲಿದೆ ಎಂದರು.
ಮಡಿಕೇರಿ ದಸರಾ ಜನೋತ್ಸವಕ್ಕೆ ಕಡಿಮೆ ಅನುದಾನ ಒದಗಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಸರಾ ಉತ್ಸವಕ್ಕೆ ಕಳೆದ ಞ
ಬಾರಿಯ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಒದಗಿಸುವುದಾಗಿ ತಿಳಿಸಲಾಗಿತ್ತೇ ಹೊರತು, ನಾನಾಗಲಿ, ಜಿಲ್ಲಾಡಳಿತವಾಗಲಿ 75 ಲಕ್ಷ ರೂ. ಎಂದು ನಿರ್ದಿಷ್ಟವಾದ ಮೊತ್ತವನ್ನು ಘೋಷಿಸಿರಲಿಲ್ಲ. ಇದೀಗ ಹಿಂದೆ ಸೂಚಿಸಿದಂತೆ ಕಳೆದ ಬಾರಿಗಿಂತ ಹೆಚ್ಚಿನ ಅನುದಾನವಾಗಿ 60 ಲಕ್ಷ ರೂ. ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು ತಾನು ಉಸ್ತುವಾರಿ ಸಚಿವನಾಗಿ ನಿಯುಕ್ತಿಗೊಂಡ ಆರಂಭಿಕ ದಿನಗಳಲ್ಲಿ ಹೆಚ್ಚಿನ ಸಮಸ್ಯೆಗಳು ಇದ್ದ ಕಾರಣ ಮಾಸಿಕ ನಾಲ್ಕೈದು ಬಾರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದೆ. ಈಗಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







