ರೋಟರಿ ಶಾಲೆಯಲ್ಲಿ ದೀಪಾವಳಿ ಸಂಭ್ರಮ

ಮೂಡುಬಿದಿರೆ, ನ.1: ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು.
ಅನುಪಮಾ ಶೆಣೈ ದೀಪ ಬೆಳಗಿಸಿ ದೀಪಾವಳಿಗೆ ಚಾಲನೆ ನೀಡಿ, ವಿದ್ಯಾರ್ಥಿಗಳಲ್ಲಿ ದೇಶದ ಪ್ರಮುಖ ಹಬ್ಬವಾದ ದೀಪಾವಳಿಯ ಮಹತ್ವವನ್ನು ತಿಳಿಸುವುದು ಉತ್ತಮ ಕೆಲಸ ಎಂದರು.
ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ತ ಮಾತನಾಡಿ, ಪ್ರತಿ ಬಾರಿ ದೀಪಾವಳಿ, ಬಕ್ರೀದ್ ಕ್ರಿಸ್‌ಮಸ್ ಹಬ್ಬವನ್ನು ಶಾಲೆಯಲ್ಲಿ ಆಚರಿಸುತ್ತಿದ್ದು, ಸರ್ವಧರ್ಮದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಿದ್ದೇವೆ. ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ಮಾಡಿಲ್ಲ ಎಂದರು.
ಶಾಲೆಯ ಆಡಳಿತಾಧಿಕಾರಿ ಶುಭಕರ್ ಅಂಚನ್, ಭಾರತಿ ಎಸ್.ನಾಯಕ್ ಶಾಲಾ ಸಿಬ್ಬಂದಿ ವರ್ಗ ಮತ್ತಿತರರು.ಉಪಸ್ಥಿತರಿದ್ದರು.
ಶಾಲೆಯ ಆವರಣದಲ್ಲಿ ಮಕ್ಕಳು ತಯಾರಿಸಿದ ಗೂಡು ದೀಪವನ್ನು ಪ್ರದರ್ಶಿಸಲಾಯಿತು.
Next Story





