ಸಾಲಬಾಧೆಗೆ ಒಂದೇ ಕುಟುಂಬದ ನಾಲ್ವರು ಬಲಿ
ಚಾಮರಾಜನಗರ, ನ.1: ಕುಟುಂಬ ನಿರ್ವಹಣೆಗಾಗಿ ಮಾಡಿದ ಸಾಲ ತೀರಿಸಲಾಗದೆ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಚಿಕ್ಕಲ್ಲುತ್ತೂರು ಗ್ರಾಮದಲ್ಲಿ ರವಿವಾರ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಚಿಕ್ಕಲ್ಲುತ್ತೂರು ಗ್ರಾಮದಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ದಂಪತಿ ಸಾಲಬಾಧೆ ತಾಲಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.್ಕಲ್ಲುತ್ತೂರು ಗ್ರಾಮದ ಆನಂದ್(35) ಆತನ ಪತ್ನಿ ಶೋಭಾ(25) ಮಕ್ಕಳಾದ ಮಂಟೇಸ್ವಾಮಿ(4) ಹಾಗೂ ಮಂಟೇಲಿಂಗ(2) ಆತ್ಮಹತ್ಯೆಗೆ ಶರಣಾದವರು. ಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಆನಂದ್, ಜೀವನೋಪಾಯಕ್ಕಾಗಿ ಸ್ಥಳೀಯರಿಂದ ಸಾಕಷ್ಟು ಸಾಲ ಮಾಡಿದ್ದನೆಂದು ತಿಳಿದುಬಂದಿದೆ. ಸಾಲಗಾರರ ಕಿರುಕುಳದಿಂದ ಬೇಸತ್ತಿದ್ದ ಆನಂದ್, ರವಿವಾರ ರಾತ್ರಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಉಣಿಸಿದ್ದಾನೆ. ಪತ್ನಿ ಹಾಗೂ ಮಕ್ಕಳು ಮೃತಪಟ್ಟ ನಂತರ ತಾನೂ ವಿಷ ಸೇವಿಸಿ ಮನೆಯಿಂದ ಹೊರ ಬಂದಿದ್ದಾನೆ. ವೇಳೆ ನೆರೆಯವರು ಈತನ ನರಳಾಟ ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಕರೆ ತರುವಾಗ ಮಾರ್ಗ ಮಧ್ಯೆ ಆನಂದ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.





