ಪ್ರಚಾರಕ್ಕಾಗಿ ಬ್ಲಾಕ್‌ಮೇಲ್ ತಂತ್ರ: ಎಚ್.ಕೆ.ಪಾಟೀಲ್ ಆಕ್ರೋಶ

ಬೆಂಗಳೂರು/ಗದಗ, ನ.1: ರಾಜಕೀಯ ಕ್ಷುಲ್ಲಕತನ ಹಾಗೂ ಪ್ರಚಾರಕ್ಕಾಗಿ ಕೆಲವು ವ್ಯಕ್ತಿಗಳು ರಾಜ್ಯೋತ್ಸವದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ರಾಜ್ಯದ ಗಡಿ ಸಮಸ್ಯೆಗಳ ಇತ್ಯರ್ಥ ಸಮಿತಿಯ ಉಸ್ತುವಾರಿ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ಎಂಇಎಸ್‌ನವರು ಕರಾಳ ದಿನವನ್ನು ಆಚರಣೆ ಮಾಡಿದ್ದು ಸರಿಯಲ್ಲ ಎಂದು ಕಿಡಿಗಾರಿದರು.ನರ ಮನಸ್ಸಿಗೆ ಘಾಸಿ ಮಾಡಿ, ಸುಖ ಪಡುವವರಿಗೆ ಜನರಿಂದಲೆ ತಕ್ಕ ಪಾಠವಾಗುತ್ತದೆ. ಬೆಳಗಾವಿಯ ಮೇಯರ್ ಹಾಗೂ ಉಪಮೇಯರ್, ಈ ಕರಾಳ ದಿನದಲ್ಲಿ ಭಾಗಿಯಾಗುವ ಮೂಲಕ ಸಣ್ಣತನವನ್ನು ಪ್ರದರ್ಶನ ಮಾಡಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
Next Story





