ಶಾರ್ಜಾ: ಶೈಖ ಝವಾಹಿರ್ ರ ಕೋಟು 4,40,000 ದಿರ್ಹಂಗೆ ಏಲಂ

ಶಾರ್ಜಾ,ನ.2: ಯುಎಇ ಸುಪ್ರೀಂ ಕೌನ್ಸಿಲ್ ಸದಸ್ಯರು ಮತ್ತು ಶಾರ್ಜಾ ಆಡಳಿತಗಾರ ಡಾ. ಶೇಕ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಕಾಸ್ಮಿಯವರ ಪತ್ನಿ ಮತ್ತು ಫ್ಯಾಮಿಲಿ ಅಫೇರ್ಸ್ ಸುಪ್ರೀಂ ಕೌನ್ಸಿಲ್ ಇದರ ಚೇರ್‌ಪರ್ಸನ್ ಶೈಖ ಜವಾಹಿರ್ ಬಿನ್ತ್ ಮುಹಮ್ಮದ್ ಅಲ್ ಕಾಸಿಮಿ ಅವರ ಕೋಟು 4,40,000 ದಿರ್ಹಂಗೆ ಹರಾಜಾಗಿದೆ. ಲಂಡನ್‌ನ ಸಾಚ್ಚಿ ಗ್ಯಾಲರಿಯಲ್ಲಿ ಪ್ರದರ್ಶಿಸಿದ ಕೋಟ್‌ನ್ನು ಆನ್‌ಲೈನ್ ಮೂಲಕ ಹರಾಜು ನಡೆಸಲಾಗಿದೆ. ಶಾರ್ಜಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಈ ಕೋಟನ್ನು ಏಲಂನಲ್ಲಿ ಖರೀದಿಸಿದೆ ಎಂದು ವರದಿಯಾಗಿದೆ.
ಜಗತ್ತಿನಾದ್ಯಂತ ಇರುವ ನಿರಾಶ್ರಿತರ ಕಲ್ಯಾಣಕ್ಕಾಗಿ ಕೆಲಸ ಮಾಡುವ ವಿಶ್ವಸಂಸ್ಥೆಯ ಸಂಘಟನೆಯಲ್ಲಿ ಶೈಖಜವಾಹಿರ್ ಉನ್ನತ ಸ್ಥಾನವನ್ನು ಹೊಂದಿದ್ದಾರೆ. ಜಗತ್ತಿನ ಮನಸಾಕ್ಷಿಗೆ ನಿರಾಶ್ರಿತರ ಕಷ್ಟಗಳನ್ನು ಸರಿಯಾಗಿ ಮನವರಿಕೆ ಮಾಡಿಕೊಡಲು ಅವರು ನಿರಂತರ ಪ್ರಯತ್ನಿಸುತ್ತಿದ್ದಾರೆ. ತನ್ನ ಕೋಟು ದಾನದ ಮೂಲಕ ಶೈಖ ಮಹತ್ತಾದ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಅವರ ಕೋಟಲ್ಲದೆ ಜಗತ್ತಿನ ವಿವಿಧ ಕಡೆಗಳಲ್ಲಿ ಪ್ರಮುಖರು ನೀಡಿದ 100ಜೀನ್ಸ್‌ಗಳನ್ನು ಏಲಂಗಿರಿಸಲಾಗಿದೆ. ಜೀನ್ಸ್ ಫಾರ್ ರೆಫ್ಯುಜೀಸ್ ಸ್ಥಾಪಕ ಮತ್ತು ಪ್ರಮುಖ ಫ್ಯಾಶನ್ ಡಿಸೈನರ್ ಜೋನಿ ದರ್ ಶೈಖರ ಕೋಟಿನ ವಿನ್ಯಾಸ ಮಾಡಿದ್ದರು ಎಂದು ವರದಿ ತಿಳಿಸಿದೆ.







