ಶಸ್ತ್ರಚಿಕಿತ್ಸಾ ಕೊಠಡಿಗೆ ಬೆಂಕಿ ಬಿತ್ತು : ಯಾವುದರಿಂದ ಎಂದು ನೀವು ನಂಬಲಸಾಧ್ಯ !

ಹೂಸು ಕೂಡ ಬೆಂಕಿಗೆ ಕಾರಣವಾಗಬಹುದು ಎಂದು ನಿಮಗೆ ಗೊತ್ತೆ? ಹೌದು. ಜಪಾನಿನ ಟೋಕಿಯೋ ವೈದ್ಯಕೀಯ ಆಸ್ಪತ್ರೆಯೇ ಇದಕ್ಕೆ ದೊಡ್ಡ ಸಾಕ್ಷ್ಷಿ. ಸರ್ಜರಿ ಕೋಣೆಯಲ್ಲಿ 30ರ ವಯಸ್ಸಿನ ಮಹಿಳೆಯೊಬ್ಬರ ಗರ್ಭಕಂಠದ (ಸರ್ವಿಕ್ಸ್) ಮೇಲೆ ಲೇಸರ್ ಹಚ್ಚಲಾಗಿತ್ತು. ಆದರೆ ಆಕೆ ಅದೇ ಸಮಯದಲ್ಲಿ ಹೂಸು ಬಿಟ್ಟ ಕಾರಣ ಬೆಂಕಿ ತಗಲಿ ಮಹಿಳೆಯ ತೊಡೆ ಮತ್ತು ಕಾಲುಗಳಲ್ಲಿ ಗಂಭೀರ ಸುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲ, ಬೆಂಕಿ ಇಡೀ ಶಸ್ತ್ರಚಿಕಿತ್ಸೆ ಕೊಠಡಿಗೇ ಹರಡಿಬಿಟ್ಟಿತ್ತು.
ಶಸ್ತ್ರಚಿಕಿತ್ಸೆ ಕಳೆದ ಏಪ್ರಿಲ್‌ನಲ್ಲಿ ನಡೆದಿತ್ತು. ಈ ಬೆಂಕಿ ಪ್ರಕರಣವನ್ನು ಮಾನವ ದೋಷ ಎಂದು ತಿಳಿದ ನಂತರ ತಂಡವೊಂದು ಆ ಬಗ್ಗೆ ತನಿಖೆ ನಡೆಸಿತ್ತು. ಅಧಿಕೃತ ವರದಿಯನ್ನು ಆಸ್ಪತ್ರೆ ಅಕ್ಟೋಬರ್ 28ಕ್ಕೆ ಸಲ್ಲಿಸಿದೆ. ಈ ವರದಿಯ ಪ್ರಕಾರ ಕೋಣೆಯಲ್ಲಿ ಯಾವುದೇ ತಜ್ಞರಿಂದ ದೋಷವಾಗಿಲ್ಲ ಮತ್ತು ಉರಿ ತಗಲುವಂತಹ ವಸ್ತುಗಳೂ ಇರಲಿಲ್ಲ. ಮಹಿಳೆಯ ಸರ್ವಿಕ್ಸ್‌ಗೆ ಹಚ್ಚಿದ ಲೇಸರ್ ಸಾಮಾನ್ಯ ಕಾರ್ಯಸ್ಥಿತಿಯಲ್ಲಿ ಉರಿಬರುವಂತಹದಾಗಿರಲಿಲ್ಲ. ಹೀಗಾಗಿ ಬೆಂಕಿ ತಗಲಲು ಕೇವಲ ಒಂದೇ ಕಾರಣ ಸರ್ಜರಿ ಸಮಯದಲ್ಲಿ ಉರಿ ತಗಲಬಹುದಾದ ಹೂಸು ಬಂದಿರುವುದೇ ಆಗಿರುತ್ತದೆ. ರೋಗಿಯ ಹೊಟ್ಟೆಯೊಳಗಿನ ಅನಿಲ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಹರಡಿದಾಗ ಅದು ಲೇಸರ್ ಜೊತೆಗೆ ಪರಿಣಾಮ ಹೊಂದಿ ಬೆಂಕಿ ತಗಲುವಂತೆ ಮಾಡಿದೆ. ಅದೇ ನಂತರ ರೋಗಿಯ ವಸ್ತ್ರ ಮತ್ತು ಇತರ ಕಡೆಗೆ ಬೆಂಕಿ ಹರಡುವಂತೆ ಮಾಡಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿರುವುದನ್ನು ಅಸಾಹಿ ಶಿಂಬನ್ ಹೇಳಿದ್ದಾರೆ.
ಹಾಗಿದ್ದರೆ ಬೆಂಕಿ ತಗಲುವಂತೆ ಮಾಡಬಹುದಾದ ಮಾನವನ ಹೂಸುವಿನಲ್ಲಿರುವ ರಾಸಾಯನಿಕ ಸಂಯೋಜನೆ ಏನು? ರಾಸಾಯನಿಕ ಹೂಸು ಸಂಯೋಜನೆ ಈ ಕೆಳಗಿನಂತಿದೆ:
ನೈಟ್ರೋಜನ್: 20-80%
ಹೈಡ್ರೋಜನ್: 10-50% (ಉರಿ ಹತ್ತಿಕೊಳ್ಳಬಲ್ಲದು)
ಕಾರ್ಬನ್ ಡೈ ಆಕ್ಸೈಡ್: 0-30%
ಆಮ್ಲಜನಕ: 0-10%
ಮೀಥೇನ್: 0-10% (ಉರಿ ಹತ್ತಿಕೊಳ್ಳಬಲ್ಲದು)
ಸಲ್ಫರ್ ಸಂಯುಕ್ತ: 1% ಸುಮಾರು
ಕೃಪೆ: blogs.timesofindia.indiatimes.com







