ಅರ್ನಬ್ ರಾಜೀನಾಮೆಯಿಂದ ಕೆಲಸ ಕಳೆದುಕೊಳ್ಳಲಿರುವ ನಾಲ್ವರು !

ಮುಂಬೈ, ನ.2: ಯುಗವೊಂದು ಅಂತ್ಯವಾಗಿದೆ ಹಾಗೂ ಪಾಕಿಸ್ತಾನ ನಿರಾಳವಾಗಿದೆಯೆಂದರೂ ತಪ್ಪಾಗಲಾರದು. ಟೈಮ್ಸ್ ನೌ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ರಾಜೀನಾಮೆ ನೀಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಆತ ರುಪರ್ಟ್ ಮುರ್ಡೊಚ್ ಹಾಗೂ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರೊಡಗೂಡಿ ತಮ್ಮದೇ ಹೊಸ ಚಾನೆಲ್ ಆರಂಭಿಸುತ್ತಾರೆನ್ನುವುದು ಹೊಸ ಸುದ್ದಿ. ಅದು ಮುಂದಿನ ವಿಚಾರವಾದರೂ ಸದ್ಯ ಅರ್ನಬ್ ರಾಜೀನಾಮೆಯಿಂದ ಕೆಲವರ ಹುದ್ದೆಗಳಿಗೆ ಕಂಟಕ ಎದುರಾಗಿದೆ.
1. ಸನ್ನಿ ಡಿಯೋಲ್
ಇದೀಗ ಟೈಮ್ಸ್ ನೌ ಚಾನೆಲ್ ನಿಂದ ಅರ್ನಬ್ ಮುಕ್ತಿ ಪಡೆದಿರುವರಾದುದರಿಂದ ಅವರುಅವರಿಗಿಷ್ಟವಾದ ಕಾರ್ಯ-ಪಾಕಿಸ್ತಾನವನ್ನು ಗುರಿಯಾಗಿಸುವುದನ್ನುಸುಲಭವಾಗಿ ಮಾಡಬಹುದು. ಆದರೆ ಇದರಿಂದಅವರಂತೆಯೇ ತಮ್ಮ ಚಿತ್ರಗಳಲ್ಲಿ ಪಾಕಿಸ್ತಾನವನ್ನು ಟಾರ್ಗೆಟ್ ಮಾಡುವ ನಟ ಸನ್ನಿ ಡಿಯೋಲ್ ಉದ್ಯೋಗಕ್ಕೆ ಹೊಡೆತ ಬೀಳಲಿದೆ.

ಭಾರತ-ಪಾಕ್ ಯುದ್ಧ ಸ್ಪೆಷಲಿಸ್ಟ್ ಜೆ.ಪಿ. ದತ್ತಾ ಅವರು 2006ರಲ್ಲಿ ಟೈಮ್ಸ್ ನೌ ಆರಂಭವಾದಂದಿನಿಂದ ಒಂದೇ ಒಂದು ಚಿತ್ರ ನಿರ್ಮಿಸಿಲ್ಲ.
2. ಅಜಿತ್ ದೋವಲ್
ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೋವಲ್ ಬಲಪಂಥೀಯ ಟ್ರೋಲ್ ಗಳಿಗೆ ಅಚ್ಚುಮೆಚ್ಚು. ಅವರ ಸಂವಹನ ಕೌಶಲ್ಯಗಳು ಅದೆಷ್ಟು ಉತ್ತಮವಾಗಿವೆಯೆಂದರೆ ಪಠಾಣ್ ಕೋಟ್ ವಾಯು ನೆಲೆಗೆ ಎಷ್ಟು ಮಂದಿ ಉಗ್ರರು ದಾಳಿ ನಡೆಸಿದ್ದಾರೆಂಬುದು ಅವರಿಗೆ ತಿಳಿದಿಲ್ಲ. ಅವರ ಹುದ್ದೆಯನ್ನು ಹೊಂದಲು ಅರ್ನಬ್ ಅತ್ಯುತ್ತಮ ವ್ಯಕ್ತಿ. ಟಿವಿ ಸ್ಟುಡಿಯೋದಲ್ಲಿಯೇ ಕುಳಿತುಕೊಂಡು ಪಾಕ್ ವಿರುದ್ಧ ಯುದ್ಧ ಮಾಡುವಷ್ಟು ಸಮರ್ಥನೀತ.

3. ಬಿಜೆಪಿ ವಕ್ತಾರರು
‘‘ಯಾರು ಕೂಡ ಪ್ರಧಾನಿ ಮೋದಿಯನ್ನು ಪ್ರಶ್ನಿಸಬಾರದು’’ ಎಂದು ಸೆಪ್ಟೆಂಬರ್ ತಿಂಗಳಲ್ಲಿ ಟಿವಿ ಸ್ಟುಡಿಯೋದಲ್ಲಿ ಯಾರೋ ಗುಡುಗಿದ್ದರು. ಅವರು ಬಿಜೆಪಿ ವಕ್ತಾರರಾಗಿರಲಿಲ್ಲ, ಬದಲಾಗಿ ಅರ್ನಬ್ ಆಗಿದ್ದರು. ಬಿಜೆಪಿ ವಕ್ತಾರರಿಗಿಂತಲೂ ಉತ್ತಮವಾಗಿ ಅವರು ಬಿಜೆಪಿ ನಿಲುವನ್ನು ಪ್ರಸ್ತುತ ಪಡಿಸುವಲ್ಲಿ ನಿಸ್ಸೀಮರಾಗಿದ್ದಾರೆ. ಇದೀಗ ಅರ್ನಬ್ ಅವರು ಟೈಮ್ಸ್ ನೌ ಹುದ್ದೆಯಿಂದ ಕೆಳಗಿಳಿದಿರುವುದರಿಂದ ಅವರಿಗೆ ಯಾವುದೇ ಅಡತಡೆಯಿರುವುದಿಲ್ಲ ವಾದುದರಿಂದ ಬಿಜೆಪಿ ವಕ್ತಾರರಾದ ಸ್ಯಾಂಬಿಟ್ ಪತ್ರಾ, ನಳಿನ್ ಕೊಹ್ಲಿ ಹಾಗೂ ಜಿ.ವಿ.ಎಲ್. ನರಸಿಂಹ ರಾವ್ ಅವರಂಥವರು ಕೆಲಸ ಕಳೆದುಕೊಳ್ಳಬೇಕಾಗಬಹುದು.

4. ಪಾಕಿಸ್ತಾನಿ ಪ್ಯಾನೆಲಿಸ್ಟ್ ಗಳು
: ಅರ್ನಬ್ ತಮ್ಮ ಹುದ್ದೆ ತೊರೆಯುವ ಮೂಲಕ ಪಾಕಿಸ್ತಾನದಿಂದ ಅವರ ಕಾರ್ಯಕ್ರಮಗಳಿಗೆ ಪ್ಯಾನೆಲಿಸ್ಟ್ ಗಳಾಗಿ ಬರುತ್ತಿದ್ದವರು ಈಗ ಕೆಲಸ ಕಳೆದುಕೊಳ್ಳುವಂತಾಗುವುದು. ಅವರಿಗೆ ಈಗ ಪ್ಯಾನಲಿಸ್ಟ್ ಗಳಾಗಿ ಮುಂದುವರಿಯಬಹುದಾದರೂ ಅರ್ನಬ್ ಅವರಂತೆ ಅವರ ವಾಕ್ಯಗಳನ್ನು ಅರ್ಧದಲ್ಲಿಯೇ ತುಂಡರಿಸುವವರು ಯಾರೂ ಇಲ್ಲವಾಗುತ್ತಾರೆ. ಅವರು ಅವರ ವಾಕ್ಯವನ್ನು ಪೂರ್ಣಗೊಳಿಸಲೇ ಬೇಕಾಗುತ್ತದೆ.
ಕೃಪೆ: catchnews.com







