ಫೇಸ್‌ಬುಕ್ ಮೂಲಕ ಅಪಮಾನ: ಡಿಜಿಪಿಗೆ ದೂರಿತ್ತ ಕೇರಳ ಶಾಸಕ

ತಿರುವನಂತಪುರಂ,ನ. 2: ಫೇಸ್‌ಬುಕ್ ಮೂಲಕ ತನ್ನನ್ನು ಅಪಮಾನಿಸಲು ಪ್ರಯತ್ನಿಸುವವರ ವಿರುದ್ಧ ತನಿಖೆ ನಡೆಸಬೇಕೆಂದುಆಗ್ರಹಿಸಿ ವರ್ಕಲ ಶಾಸಕ ಎಡ್ವೊಕೇಟ್ ವಿ. ಜೋಯ್ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾರಿಗೆ ದೂರು ನೀಡಿದ್ದಾರೆಂದು ವರದಿಯಾಗಿದೆ. ಫೇಸ್‌ಬುಕ್ ಮೂಲಕ ಕೆಲವರು ಅಪಮಾನಿಸುತ್ತಿದ್ದಾರೆ ಎಂದು ನೊಂದ ಶಾಸಕರು ದೂರಿನಲ್ಲಿ ತಿಳಿಸಿದ್ದಾರೆ. Advt v joy MLA ಎಂಬ ಅಧಿಕೃತ ಫೇಸ್ ಬುಕ್ ಪೇಜ್‌ಗೆ ಬದಲಾಗಿ ನಕಲಿ ಖಾತೆ ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಕಲಿ ಖಾತೆಗಳ ಮೂಲಕ ಅಶ್ಲೀಲ ಕಮೆಂಟ್‌ಗಳು ಮತ್ತು ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದು ತನ್ನ ಹೆಸರಿಗೆ ಮತ್ತು ಚಟುವಟಿಕೆಗಳಿಗೆ ಕಳಂಕವುಂಟುಮಾಡುತ್ತಿದೆ ಎಂದು ಜೋಯ್ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ಹೈಟೆಕ್ ಸೆಲ್‌ಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮುಖ್ಯಸ್ಥರ ಕಚೇರಿ ತಿಳಿಸಿದೆ.
Next Story





