ಟಿಪ್ಪು ಜಯಂತಿ ಆಚರಣೆ : ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ನ.2: ರಾಜ್ಯ ಸರಕಾರದ ವತಿಯಿಂದ ನಡೆಸಲಾಗುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸಿ ಮಂಜುನಾಥ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ(ಗುರುವಾರ) ಮುಂದೂಡಿದೆ.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾನೂನು ಬಾಹಿರ. ಇಂತಹ ಜಯಂತಿ ನಡೆಸದಂತೆ ತಡೆ ಹೇರಬೇಕು ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಟಿಪ್ಪು ಜಯಂತಿಯ ಆಚರಣೆಯ ಉದ್ದೇಶವೇನು? ಈ ಆಚರಣೆಯಿಂದ ಏನು ಪ್ರಯೋಜನ? ಇದರಿಂದ ರಾಜ್ಯ ಸರಕಾರಕ್ಕೆ ತಲೆನೋವು ಜಾಸ್ತಿಯಾಗಿದೆ. ಟಿಪ್ಪು ಸುಲ್ತಾನ್ ಶಾಂತಿಯಿಂದ ವಿರಮಿಸಲಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಕೆ ಮುಖರ್ಜಿ ಅಭಿಪ್ರಾಯಪಟ್ಟರು.
Next Story





