9ನೆ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಓರ್ವನ ಬಂಧನ

ರಾಜಪುರಂ, ನ. 2: ಒಂಬತ್ತನೆ ತರಗತಿ ವಿದ್ಯಾರ್ಥಿನಿ ಹದಿನೈದು ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳನೀಡಿದ ಇಬ್ಬರ ವಿರುದ್ಧ ರಾಜಪುರಂ ಪೊಲೀಸರು ಕೇಸುದಾಖಲಿಸಿದ್ದಾರೆಂದು ವರದಿಯಾಗಿದೆ. ದುಷ್ಕರ್ಮಿಯಲ್ಲೊಬ್ಬ ಐದುವರ್ಷ ಮೊದಲು ಬಾಲಕಿಗೆ ಕಿರುಕುಳ ನೀಡಿದ್ದ. ಈತ ಬೆದರಿಕೆಯೊಡ್ಡಿದ್ದರಿಂದ ತಾನು ಇದನ್ನು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ ಎಂದು ಸಂತ್ರಸ್ತ ಬಾಲಕಿ ತಿಳಿಸಿದ್ದಾಳೆ.
ಈ ನಡುವೆ ನಿಕಟ ಸಂಬಂಧಿಕಯೊಬ್ಬ ಬಾಲಕಿಗೆ ಲೈಂಗಿಕ ಕಿರುಕು ನೀಡಿದ್ದ. ನಂತರ ಅವಳು ಅಸ್ವಸ್ಥಗೊಂಡಿದ್ದಳು. ಇದನ್ನು ಗಮನಿಸಿದ ಮನೆಯವರು ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಅವಳು ಲೈಂಗಿ ಕಕಿರುಕುಳಕ್ಕೊಳಗಾಗಿರುವುದು ಗೊತ್ತಾಗಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳಲ್ಲಿ ಒಬ್ಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ.
ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story





