ತಿನ್ನಲು ಮಾತ್ರವಲ್ಲ ಈರುಳ್ಳಿಯಿಂದ 9 ಇತರ ಪ್ರಯೋಜನಗಳೂ ಇವೆ

ಈರುಳ್ಳಿ ಯಾವುದೇ ಆಹಾರಕ್ಕೆ ಬೇಕಾದರೂ ರೂಪ, ರುಚಿ ಮತ್ತು ಸವಿಯನ್ನು ಕೊಡಬಲ್ಲುದು. ಆದರೆ ಅವು ಅಡುಗೆಗೆ ಮಾತ್ರ ಬಳಕೆಯಾಗುವುದಲ್ಲ. ಗ್ರಿಲ್ ಸ್ವಚ್ಛ ಮಾಡಲು ಮತ್ತು ಇತರ ಹಲವು ವಿಧದಲ್ಲಿ ಬಳಸಬಹುದು. ಇಲ್ಲಿದೆ ವಿವರ.
ತುಕ್ಕು ಹಿಡಿದ ಚೂರಿ ಸ್ವಚ್ಛ ಮಾಡಿ.
ನಿಮ್ಮ ಚೂರಿಗೆ ತುಕ್ಕು ಹಿಡಿದು ಬಳಸಲು ಭಯವಾಗುತ್ತದೆಯೆ? ದೊಡ್ಡ ಹಸಿ ಈರುಳ್ಳಿಯನ್ನು ಕತ್ತರಿಸಿದರೆ ತಕ್ಷಣವೇ ತುಕ್ಕು ಬಿಡುತ್ತದೆ.
ಮೊಟ್ಟೆಗೆ ಬಣ್ಣ
ಈರುಳ್ಳಿಯ ಹೊರ ಪದರ ಉತ್ತಮ ಬಣ್ಣ ಕೊಡುತ್ತವೆ. ಮೊಟ್ಟೆಗಳನ್ನು ಈರುಳ್ಳಿಯ ಹೊರಪದರಲ್ಲಿ ಮುಚ್ಚಿ ಟವಲಲ್ಲಿ ಕಟ್ಟಿಟ್ಟು ಭದ್ರವಾಗಿಸಿ ಮತ್ತೆ ಬೇಯಿಸಬಹುದು. ಆಗ ಅವು ಅತ್ಯುತ್ತಮ ಕಿತ್ತಳೆ ಬಣ್ಣದಲ್ಲಿ ಬೇಯುತ್ತವೆ.
ಲೋಹಕ್ಕೆ ಹೊಳಪು
ಹಸಿ ಈರುಳ್ಳಿ ಹುಡಿ ಮಾಡಿ ಅಷ್ಟೇ ನೀರು ಬೆರೆಸಿ. ಬಟ್ಟೆಯನ್ನು ಅದಕ್ಕೆ ಮುಳುಗಿಸಿ ಲೋಹದ ಹೊರಮೈ ಮೇಲೆ ಉಜ್ಜಿ. ಹೊಳೆಯುವವರೆಗೂ ಹೀಗೆ ಮಾಡಿ.
ಪೈಂಟ್ ವಾಸನೆ ತೆಗೆಯಿರಿ
ಹೊಸ ಪೈಂಟ್ ಘಾಟಾಗಿ ಬರುತ್ತಿದೆಯೆ? ದುಬಾರಿ ರೂಮ್ ಫ್ರೆಶ್ನರ್ ಖರೀದಿಸುವ ಬದಲಾಗಿ ಒಂದು ತಾಜಾ ತುಂಡು ಮಾಡಿದ ಈರುಳ್ಳಿಯನ್ನು ನೀರಿನಲ್ಲಿ ಮುಳುಗಿಸಿಡಿ. ಹೊಸ ಪೈಂಟ್ ವಾಸನೆ ದೂರವಾಗುತ್ತದೆ. ಅನಾರೋಗ್ಯಕರ ವಾಸನೆ ವಿರುದ್ಧ ಈರುಳ್ಳಿ ಉತ್ತಮ ದಾರಿ.
ಮೊಡವೆ ನಿವಾರಕ

ಈರುಳ್ಳಿ ಮೊಡವೆ ನಿವಾರಿಸುವಲ್ಲಿ ಉತ್ತಮ ಔಷಧ. ತುಂಡರಿಸಿದ ಈರುಳ್ಳಿಯನ್ನು ನೀರಿನ ಜೊತೆಗೆ ಬೆರೆಸಿ ಆ ರಸವನ್ನು ಮೊಡವೆಗೆ ಹಚ್ಚಿ. ಈರುಳ್ಳಿಯ ಸಂಯುಕ್ತ ಕಠಿಣವಾಗಿರುವ ಕಾರಣ ಮೊಡವೆಗಳು ಬೇಗನೇ ಮಾಯವಾಗುತ್ತವೆ.
ಜೇನುಕಡಿತ ನಿವಾರಕ
ಜೇನುಹುಳದ ಕಡಿತದಿಂದ ಬೊಬ್ಬೆಗಳೆದ್ದಿದ್ದಲ್ಲಿ ಈರುಳ್ಳಿಯನ್ನು ಚರ್ಮಕ್ಕೆ ಹಚ್ಚಿ. ಇದರಿಂದ ಊತುಕೊಂಡ ಭಾಗ ಸರಿಯಾಗುತ್ತದೆ.
ಸುಟ್ಟ ಗಾಯಕ್ಕೆ ಔಷಧ
ಈರುಳ್ಳಿಯ ಬ್ಯಾಕ್ಟೀರಿಯ ನಿವಾರಕ ತತ್ವಗಳಿರುತ್ತವೆ. ಹೀಗಾಗಿ ಗಾಯಗೊಂಡಾಗ ಸೋಂಕಾಗದಂತೆ ಈರುಳ್ಳಿ ಹನಿ ಉದುರಿಸಬಹುದು. ಈರುಳ್ಳಿಯನ್ನು ಸುಟ್ಟ ಗಾಯದ ನೋವು ಕಡಿಮೆಯಾಗಲೂ ಹಚ್ಚಬಹುದು.
ಗ್ರಿಲ್ ಸ್ವಚ್ಛ ಮಾಡುವುದು
ತುಂಡು ಮಾಡಿದ ಈರುಳ್ಳಿಯಿಂದ ಗ್ರಿಲ್ ಮೇಲೆ ಉಜ್ಜಿದರೆ ಸ್ವಚ್ಛವಾಗುತ್ತದೆ.
ಸುಟ್ಟ ಅನ್ನದ ವಾಸನೆ ನಿವಾರಿಸಿ
ಕೆಲವೊಮ್ಮೆ ಅನ್ನಕ್ಕೆ ನೀರು ಕಡಿಮೆಯಾಗಿ ಸುಟ್ಟು ಹೋದಲ್ಲಿ ಮನೆಯಿಡೀ ವಾಸನೆ ಬರುತ್ತದೆ. ಆಗ ಈರುಳ್ಳಿಯನ್ನು ಅರ್ಧ ಕತ್ತರಿಸಿ ಸ್ಟವ್ ಪಕ್ಕದಲ್ಲಿ ಇಡಿ. ಅದು ವಾಸನೆ ಹೀರಿಕೊಳ್ಳುತ್ತದೆ.







