ಏಷ್ಯನ್ ಜೂನಿಯರ್ ಬಾಸ್ಕೆಟ್‌ಬಾಲ್ ಭಾರತ ತಂಡದ ನಾಯಕಿಯಾಗಿ ಆಳ್ವಾಸ್‌ನ ಬಾಂಧವ್ಯ

ಮೂಡುಬಿದಿರೆ, ನ.2: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಂಧವ್ಯ ಎಚ್.ಎಂ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನವೆಂಬರ್ 11ರಿಂದ ಆರಂಭವಾಗಲಿರುವ 23ನೇ ಫಿಬಾ ಏಷ್ಯನ್ ಜೂನಿಯರ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ನಾಯಕಿಯಾಗಿ ಭಾಗವಹಿಸಲಿದ್ದಾರೆ.
2013ರಲ್ಲಿ ಕೊಲಂಬೊದಲ್ಲಿ ಜರುಗಿದ ಏಷಿಯನ್ ಯೂತ್ ಬಾಸ್ಕೆಟ್‌ಬಾಲ್, 2014ರಲ್ಲಿ ಜೋರ್ಡಾನ್‌ನಲ್ಲಿ ನಡೆದ ಜೂನಿಯರ್ ಏಷ್ಯನ್ ಬಾಸ್ಕೆಟ್‌ಬಾಲ್ ಹಾಗೂ 2015ರಲ್ಲಿ ಚೀನಾದಲ್ಲಿ ಜರುಗಿದ ಸೀನಿಯರ್ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ಗಳಲ್ಲಿ ಬಾಂಧವ್ಯ ಅವರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.
ಪ್ರಸ್ತುತ ಆಳ್ವಾಸ್ ಕಾಲೇಜಿನ ಪ್ರಥಮ ಬಿ.ಕಾಂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಂಧವ್ಯ 4ನೆ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು, ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
Next Story





