ಪಂತಡ್ಕ ಕ್ರಿಕೆಟ್ : ಕಲ್ಲಡ್ಕ ಝಮಾನ್ ತಂಡಕ್ಕೆ ಪ್ರಶಸ್ತಿ

ವಿಟ್ಲ, ನ.2: ಕೊಡಾಜೆ-ಪಂತಡ್ಕದ ಚಾಯ್ಸ ಕ್ರಿಕೆಟರ್ಸ್ ಇದರ ಆಶ್ರಯದಲ್ಲಿ ಕೊಡಾಜೆ-ಪಂತಡ್ಕ ಮೈದಾನದಲ್ಲಿ ನಡೆದ 7 ಜನರ ಮುಕ್ತ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಕಲ್ಲಡ್ಕದ ಝಮಾನ್ ಬಾಯ್ಸ್ ತಂಡವು ಪ್ರಥಮ ಹಾಗೂ ಮಾಣಿಯ ಕ್ವಾಲಿಟಿ ಫ್ರೆಂಡ್ಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಆಝಾದ್ ಪುಣಚ ತಂಡವು ಉತ್ತಮ ಶಿಸ್ತಿನ ತಂಡ ಪ್ರಶಸ್ತಿ ಪಡೆದುಕೊಂಡರೆ, ಝಮಾನ್ ಕಲ್ಲಡ್ಕ ತಂಡದ ಮುಸ್ತಫಾ ಆಲ್‌ರೌಂಡರ್, ಆಸಿಫ್ ಉತ್ತಮ ಎಸೆತಗಾರ ಹಾಗೂ ಕ್ವಾಲಿಟಿ ತಂಡದ ಸಿದ್ದೀಕ್ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪಂದ್ಯಾಟವನ್ನು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕುಶಲ ಎಂ. ಪೆರಾಜೆ ಉದ್ಘಾಟಿಸಿದರು.
ಪತ್ರಕರ್ತ ಲತೀಫ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮಾಣಿ ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಸಿ.ಎ. ಬ್ಯಾಂಕ್ ಮಾಣಿ ಶಾಖಾ ಮ್ಯಾನೇಜರ್ ಸಂಜೀವ ಪೂಜಾರಿ ಇಡೆಮುಂಡೇವು, ನಾರಾಯಣ ಸಾಲ್ಯಾನ್ ಅನಂತಾಡಿ, ಉದ್ಯಮಿಗಳಾದ ಹರೀಶ್ ಬಾಕಿಲ, ಚಂದ್ರಶೇಖರ ಪೂಜಾರಿ, ಮುಸ್ತಫ ಪಲ್ಲಮಜಲು, ಫಾರೂಕ್ ಪಂತಡ್ಕ, ಆಸಿಫ್ ಆರಂಗಳ, ಎಸ್.ಎಸ್. ಶರೀಫ್ ಕೊಡಾಜೆ, ಚಾಯ್ಸಾ ಕ್ರಿಕೆಟರ್ಸ್ ಮಾಜಿ ಅಧ್ಯಕ್ಷ ರಫೀಕ್ ಪಂತಡ್ಕ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಾಯ್ಸ್ ಕ್ರಿಕೆಟರ್ಸ್ ಅಧ್ಯಕ್ಷ ಆದಂ ಎಸ್.ಎಂ.ಎಸ್. ಸ್ವಾಗತಿಸಿ, ಕಾರ್ಯದರ್ಶಿ ಮನ್ಸೂರ್ ಪಂತಡ್ಕ ವಂದಿಸಿದರು. ಕೋಶಾಧಿಕಾರಿ ಫಾರೂಕ್ ಆರಂಗಳ ಕಾರ್ಯಕ್ರಮ ನಿರೂಪಿಸಿದರು.







