ಮೈಕ್ರೋವೇವ್ ಓವನ್ ಇಲ್ಲದಿದ್ದರೆ ಆಗುವುದೇ ಇಲ್ಲವೆ?
ಹಾಗಾದರೆ ಇದನ್ನೊಮ್ಮೆ ಓದಲೇಬೇಕು

ಹಿತವಾದ ಆಹಾರ ಸೇವಿಸುವ ತಲೆಮಾರಿನಲ್ಲಿ ಮೈಕ್ರೋವೇವ್ ಎಲ್ಲರಿಗೂ ಬೇಕಾಗಿರುವ ವಸ್ತುವಾಗಿ ಬದಲಾಗಿದೆ. ನೀವು ಕೂಡ ಮೈಕ್ರೋವೇವ್‌ಗೆ ಹಣ ಹೂಡುವ ಸಾಧ್ಯತೆಯಿದೆ. ಆದರೆ ಅದಕ್ಕೆ ಮೊದಲು ಒಮ್ಮೆ ಯೋಚಿಸಿ.
ವಿಟಮಿನ್ ನಷ್ಟ
ತಾಯಂದಿರು ಮೈಕ್ರೋವೇವ್ ಆಹಾರ ಸೇವಿಸಬಾರದು ಎಂದು ಹೇಳಲು ಮುಖ್ಯ ಕಾರಣವೆಂದರೆ ಅದರಲ್ಲಿ ತಯಾರಾದ ಆಹಾರವು ಸ್ತನದ ಹಾಲಿನಲ್ಲಿ ಮಗುವಿನ ರಕ್ಷಣೆಗಾಗಿ ಇರುವ ರೋಗನಿರೋಧಕ ಏಜೆಂಟ್‌ಗಳನ್ನು ನಷ್ಟ ಮಾಡುತ್ತದೆ. ವಿಟಮಿನ್ ಬಿ-12 ನಷ್ಟದಿಂದ ಹೀಗಾಗುತ್ತದೆ.
ರಾಸಾಯನಿಕ ಹೊರೆ ಹೆಚ್ಚಾಗುತ್ತದೆ
ಹಲವಾರು ತಜ್ಞರು ಹೇಳುವಂತೆ ಮೈಕ್ರೋವೇವ್ ಆಹಾರದಲ್ಲಿ ರಾಸಾಯನಿಕ ಹೊರೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಮೈಕ್ರೋವೇವಿಂಗ್ ಪ್ರಕ್ರಿಯೆಯಲ್ಲಿ ಉತ್ಪನ್ನವಾಗುವ ರಾಸಾಯನಿಕ ಕಿರಣಗಳು ಆಹಾರದ ಡಿಎನ್‌ಎ ಜೊತೆಗೂಡುತ್ತದೆ.
ಹೆಚ್ಚು ವಿದ್ಯುತ್ ಬಳಕೆ
ಮೈಕ್ರೋವೇವ್ ಸಾಮಾನ್ಯವಾಗಿ ಇಂಡಕ್ಷನ್ ಯಂತ್ರಕ್ಕಿಂತಲೂ 2 ಪಟ್ಟು ಹೆಚ್ಚು ವಿದ್ಯುತ್ ಬಳಸುತ್ತದೆ.
ಮಕ್ಕಳಿಗೆ ಉತ್ತಮವಲ್ಲ
ಮೈಕ್ರೋವೇವ್ ಆಹಾರದಲ್ಲಿರುವ ಅಣುಗಳನ್ನು ವಿರೂಪಗೊಳಿಸುವ ಕಾರಣ ಮಕ್ಕಳಿಗೆ ಉತ್ತಮವಲ್ಲ. ಇದರಿಂದ ನೆನಪು ಶಕ್ತಿ ಕಡಿಮೆಯಾಗುವುದು ಮತ್ತು ಸಾಮರ್ಥ್ಯವೂ ಮಕ್ಕಳಲ್ಲಿ ಕಡಿಮೆಯಾಗಲಿದೆ.
ಕ್ಯಾನ್ಸರ್‌ಜನಕ ಕೋಶಗಳು
ಕೆಲವು ಸಂಶೋಧಕರು ಹೇಳಿರುವ ಪ್ರಕಾರ ಮೈಕ್ರೋವೇವ್‌ನ ನಾನ್ ಅಯಾನೀಕರಣದ ವಿಕಿರಣಗಳು ಮಾನವನ ರಕ್ತದಲ್ಲಿ ಕ್ಯಾನ್ಸರ್ ಕೋಶಗಳನ್ನು ಹುಟ್ಟು ಹಾಕಬಹುದು. ಈವರೆಗೆ ಈ ಬಗ್ಗೆ ಏನೂ ದೃಢ ಮಾಹಿತಿ ಸಿಕ್ಕಿಲ್ಲವಾದರೂ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಪ್ರೊಟೀನ್ ನಷ್ಟ
ಆಸ್ಟ್ರೇಲಿಯದ ಅಧ್ಯಯನವೊಂದು ಹೇಳಿರುವ ಪ್ರಕಾರ ಮೈಕ್ರೋವೇವ್ ಅತಿಯಾಗಿ ಪ್ರೊಟೀನ್ ನಷ್ಟ ಮಾಡುತ್ತದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ.
ಹೃದಯ ಬಡಿತಕ್ಕೆ ಸಮಸ್ಯೆ
ಮೈಕ್ರೋವೇವ್ 2.4 ಗಿಗಾ ಹರ್ಟ್ಸ್ ವಿಕಿರಣ ಹೊರಸೂಸುವ ಕಾರಣ ಹೃದಯಕ್ಕೆ ಸಮಸ್ಯೆಯಾಗಲಿದೆ. ಇದು ಎಲ್ಲಾ ವಯಸ್ಸಿನವರಲ್ಲೂ ರಕ್ತದೊತ್ತಡದ ಸಮಸ್ಯೆ ತರಲಿದೆ.
ಗರ್ಭಕ್ಕೆ ಉತ್ತಮವಲ್ಲ
ಗರ್ಭಿಣಿಯರು ಮೈಕ್ರೊವೇವ್‌ನಿಂದ ದೂರವೇ ಇರಬೇಕು. ಅವರ ಗರ್ಭಕ್ಕೆ ಇದರಲ್ಲಿ ತಯಾರಾದ ಆಹಾರ ಹಾನಿಕರ.
ಮೈಕ್ರೋವೇವ್ ಬದಲಾಗಿ ಒಟಿಜಿ
ಮೈಕ್ರೋವೇವ್ ಅನ್ನು ಬೇಕಿಂಗ್ ಉದ್ದೇಶದಿಂದ ಖರೀದಿಸುವವರು ಮರಳಿ ಯೋಚಿಸಬೇಕು. ಒಟಿಜಿ ಬೇಕಿಂಗ್‌ಗೆ ಉತ್ತಮ ಹಾದಿ.
ಆಹಾರದ ತೇವ ಒಣಗುತ್ತದೆ
ಪರಿಪೂರ್ಣ ನಾನ್, ಪಿಜಾ, ನಾನಖಾತೀ ಮತ್ತು ತಂದೂರಿಗಳನ್ನು ಮಾಡಲು ಇಲೆಕ್ಟ್ರಿಕ್ ತಂದೂರ್ ಬಳಸಿ. ಮೈಕ್ರೋವೇವ್ ಆಹಾರದಲ್ಲಿರುವ ತೇವಾಂಶವನ್ನು ತೆಗೆದು ರಬ್ಬರ್‌ನಂತೆ ಮಾಡುತ್ತದೆ.
ಕೃಪೆ: timesofindia.indiatimes.com







