ಭಾರತ-ಇರಾನ್ ಪಂದ್ಯ ರೋಚಕ ಡ್ರಾ
ಎಎಫ್‌ಸಿ ಅಂಡರ್-19 ಚಾಂಪಿಯನ್‌ಶಿಪ್

ಹನೊಯ್(ವಿಯೆಟ್ನಾಂ), ನ.2: ಎಎಫ್‌ಸಿ ಅಂಡರ್-19 ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಬಲಿಷ್ಠ ಇರಾನ್ ವಿರುದ್ಧ 1-1 ಗೋಲುಗಳ ಅಂತರದಿಂದ ರೋಚಕ ಡ್ರಾ ಸಾಧಿಸಿದೆ.
ಬುಧವಾರ ಇಲ್ಲಿ ನಡೆದ ಡಿ ಗುಂಪಿನ ಮೊದಲ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದವು. 59ನೆ ನಿಮಿಷದಲ್ಲಿ ಗೋಲು ಬಾರಿಸಿದ ಕಶ್ಮಿನಾ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
ಇರಾನ್ ತಂಡ ಪಂದ್ಯ ಕೊನೆಗೊಳ್ಳಲು ಕೇವಲ 9 ನಿಮಿಷ ಬಾಕಿ ಇರುವಾಗ(81ನೆ ನಿಮಿಷ) ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿತು.
ಭಾರತ ನ.4 ರಂದು ನಡೆಯಲಿರುವ ತನ್ನ ಎರಡನೆ ಪಂದ್ಯದಲ್ಲಿ ಆತಿಥೇಯ ವಿಯೆಟ್ನಾಂ ತಂಡವನ್ನು ಎದುರಿಸಲಿದೆ.
Next Story





