ಪಾಕ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಅಝರ್ ಆಯ್ಕೆ

ಲಾಹೋರ್, ನ.2: ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಝರ್ ಮಹಮೂದ್ ಬುಧವಾರ ಪಾಕ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಮುಂದಿನ 2 ವರ್ಷ ಅವಧಿಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಎರಡು ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಕೆಲಸ ಮಾಡಿರುವ ಅಝರ್ ನ.4 ರಂದು ನ್ಯೂಝಿಲೆಂಡ್ ಪ್ರವಾಸದ ವೇಳೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
41ರ ಪ್ರಾಯದ ಅಝರ್ 2016ರ ಫೆಬ್ರವರಿಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಮುಶ್ತಾಕ್ ಅಹ್ಮದ್ ಬದಲಿಗೆ ತಾತ್ಕಾಲಿಕವಾಗಿ ಆಯ್ಕೆಯಾಗಿದ್ದರು. ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ತನಕ ಮುಶ್ತಾಕ್‌ರೊಂದಿಗೆ ಸಹಾಯಕ ಕೋಚ್ ಆಗಿ ಮುಂದುವರಿದಿದ್ದರು ಎಂದು ಇಎಸ್‌ಪಿಎನ್ ಕ್ರಿಕ್ ಇನ್‌ಫೋ ವರದಿ ಮಾಡಿದೆ.
ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ ಸರಣಿಯ ವೇಳೆ ಮತ್ತೊಮ್ಮೆ ಪಾಕ್ ತಂಡದ ಕೋಚಿಂಗ್ ವಿಭಾಗಕ್ಕೆ ಸೇರ್ಪಡೆಯಾಗಿದ್ದರು. 2016ರ ಜುಲೈ ತನಕ ಇಂಗ್ಲೆಂಡ್‌ನ ಕೌಂಟಿ ಕ್ಲಬ್ ಸರ್ರೆ ತಂಡದಲ್ಲಿ ಆಟಗಾರನಾಗಿ ಒಪ್ಪಂದ ಮಾಡಿಕೊಂಡಿದ್ದ ಕಾರಣ ಪಾಕ್ ತಂಡದಲ್ಲಿ ತಾತ್ಕಾಲಿಕ ಕೋಚ್ ಆಗಿದ್ದರು.
2007ರಲ್ಲಿ ಅಝರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಪಾಕಿಸ್ತಾನ ತಂಡ ಅಝರ್‌ರಿಂದ ತುಂಬಾ ಲಾಭ ಪಡೆದಿದೆ. ಅಝರ್‌ಗೆ ಕೋಚ್ ಆಗಿ ಕಡಿಮೆ ಅನುಭವವಿದ್ದರೂ ಇಂಗ್ಲೆಂಡ್, ಭಾರತ, ಬಾಂಗ್ಲಾದೇಶ, ನ್ಯೂಝಿಲೆಂಡ್ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಟ್ವೆಂಟಿ-20 ಸ್ಪೆಷಲಿಸ್ಟ್ ಆಗಿ ಆಡಿರುವ ಅಪಾರ ಅನುಭವವಿದೆ.







