ಬಿಜೆಪಿಯಿಂದ ಕರ್ನಾಟಕ ರಾಜ್ಯೋತ್ಸವ

ಉಡುಪಿ, ನ. 2: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ 61ನೇ ಕರ್ನಾಟಕ ರಾಜ್ಯೋತ್ಸವನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರೆ ಹೆಗ್ಡೆ ಧ್ವಜಾರೋಹಣ ನೆರವೇರಿಸಿ ರಾಜ್ಯದಲ್ಲಿ ಎಲ್ಲಾ ಅನಪೇಕ್ಷಿತ ಧುರಿತಗಳು ನಿವಾರಣೆಯಾಗಿ ಕನ್ನಡ ನಾಡು- ನುಡಿ, ಜಲ-ನೆಲೆ ಸಮೃದ್ಧಿಯೊಂದಿಗೆ, ಎಲ್ಲರೂ ಸಂತೋಷದಿಂದ ಬಾಳುವಂತೆ ಸಮೃದ್ಧಿ ತರಲಿ ಎಂದು ಸಂದೇಶ ನೀಡಿದರು.
ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಬಿ.ರವಿ ಅಮೀನ್, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
Next Story





