Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ

ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ

ಭದ್ರತಾ ಲೋಪದ ಹೊಣೆ ಹೊರುವವರು ಯಾರು?

ಸೈಕತ್ ದತ್ತಾಸೈಕತ್ ದತ್ತಾ2 Nov 2016 11:30 PM IST
share
ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ

ವಿವಿಧ ಭಾರತೀಯ ಬ್ಯಾಂಕ್‌ಗಳು 30.20ಲಕ್ಷಕ್ಕೂ ಅಧಿಕ ಡೆಬಿಟ್ ಕಾರ್ಡ್‌ಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕಾರಣವಾದ ಸನ್ನಿವೇಶದಿಂದ ಕಲಿಯಬೇಕಾದ ಪಾಠವೇನೆಂದರೆ ಪ್ರಮುಖ ಸೈಬರ್ ದಾಳಿಯನ್ನು,ಸರಕಾರ ಹಾಗೂ ದೇಶದ ಅರ್ಥಿಕ ವಲಯವು ನಿಯೋಜಿಸಿರುವ ಬಹುತೇಕ ವ್ಯವಸ್ಥೆಗಳು, ದತ್ತಾಂಶಗಳ ಮಾಹಿತಿಯ ಚೌರ್ಯವನ್ನು ಪತ್ತೆಹಚ್ಚಲು ವಿಫಲವಾಗಿರುವುದೇ ಈ ಡೆಬಿಟ್ ಕಾರ್ಡ್‌ಗಳನ್ನು ಹಿಂಪಡೆಯಬೇಕಾಯಿತು.
ಭಾರತದಲ್ಲಿ ಅತಿ ದೊಡ್ಡ ಭದ್ರತಾ ಉಲ್ಲಂಘನೆಗೆ ಕಾರಣವಾದಂತಹ ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ನಡೆದ ಮಾಲ್‌ವೇರ್ (ಕಿಡಿಗೇಡಿತನದ ಸಾಫ್ಟ್‌ವೇರ್) ದಾಳಿಯ ಘಟನಾವಳಿಗಳನ್ನು ವಿಶ್ಲೇಷಿಸಲು ಬ್ಯಾಂಕ್‌ಗಳು ಪೇಚಾಡುತ್ತಿವೆ. ಆದರೆ ಡೇಟಾ ಸೋರಿಕೆಯ ಮಾಹಿತಿಗಳನ್ನು ಹಂಚಿಕೊಳ್ಳಲು ಸಂಸ್ಥೆಗಳ ವೈಫಲ್ಯವೇ ಮಾಲ್‌ವೇರ್ ದಾಳಿಗೆ ಕಾರಣವೆಂಬುದು ಮನದಟ್ಟಾಗತೊಡಗಿದೆ.
  ಕೇವಲ ಮೂರು ವರ್ಷಗಳ ಹಿಂದೆ, ದೇಶದ ಹಣಕಾಸು ವಲಯವು ಹೈದರಾಬಾದ್ ಮೂಲದ ಬ್ಯಾಂಕಿಂಗ್ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಸಂಸ್ಥೆಯ ಮೂಲಕ ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರವೊಂದನ್ನು ಸ್ಥಾಪಿಸಿದೆ. ಈ ಕೇಂದ್ರವು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧೀನಕ್ಕೊಳಪಟ್ಟಿದೆ.
 ‘‘ಪ್ರಸ್ತುತ ಐಎಸ್‌ಎಸಿ (ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರ)ಯು ಸೈಬರ್ ದಾಳಿಗಳು ಹಾಗೂ ಬೆದರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆಯೆಂದು ಬ್ಯಾಂಕಿಂಗ್ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನಾ ಕೇಂದ್ರದ ಅಧಿಕಾರಿಯೊಬ್ಬರು ಹೇಳುತ್ತಾರೆ. ಆದಾಗ್ಯೂ, ಪ್ರಸಕ್ತ ಬಿಕ್ಕಟ್ಟನ್ನು ನಿಭಾಯಿಸುವ ಕಾರ್ಯದಲ್ಲಿ ನಿಕಟವಾಗಿ ಪಾಲ್ಗೊಂಡಿರುವ ಬ್ಯಾಂಕಿಂಗ್ ವಲಯದ ಕೆಲವರು, ಈ ಬೃಹತ್ ಪ್ರಮಾಣದ ಡೆಬಿಟ್‌ಕಾರ್ಡ್ ಮಾಹಿತಿ ಸೋರಿಕೆ ಹಗರಣದ ಬಗ್ಗೆ ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರದಿಂದ ಯಾವುದೇ ಎಚ್ಚರಿಕೆಯ ಸಂದೇಶ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಡೆಬಿಟ್‌ಕಾರ್ಡ್‌ಗಳು ಚೀನಾದಲ್ಲಿ ಬಳಕೆಯಾಗಿವೆ ಯೆಂದು ಗ್ರಾಹಕರು ವೈಯಕ್ತಿಕವಾಗಿ ದೂರು ನೀಡಿದ ಬಳಿಕವಷ್ಟೇ ಪ್ರತಿಯೊಂದು ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ತನಿಖೆಯನ್ನು ಆರಂಭಿಸಿದವು. ಆದರೆ ಇದೊಂದು ಅತ್ಯಂತ ವ್ಯವಸ್ಥಿತವಾಗಿ ನಡೆದ ವಂಚನೆಯ ಕೃತ್ಯವಾಗಿದೆ ಹಾಗೂ ಎಲ್ಲಾ ಬ್ಯಾಂಕ್‌ಗಳೂ ಇದರಿಂದ ಬಾಧಿತವಾಗಿವೆಯೆಂಬುದನ್ನು ಯಾರೂ ಕೂಡಾ ಬೆಟ್ಟು ಮಾಡಿ ತೋರಿಸಿಲ್ಲ.
  ಅದೇ ರೀತಿ ತಮ್ಮ ಭದ್ರತಾ ವ್ಯವಸ್ಥೆಗಳಿಗೆ ಎದುರಾಗುವ ಬೆದರಿಕೆಯನ್ನು ನಿಭಾಯಿಸುವ ಹಾಗೂ ಕಣ್ಗಾವಲು ನಡೆಸುವ ಹೊಣೆಗಾರಿಕೆಯನ್ನು ನಿಭಾಯಿಸಲು ಬ್ಯಾಂಕ್‌ಗಳು ಭದ್ರತಾ ನಿರ್ವಹಣಾ ಕೇಂದ್ರಗಳನ್ನು ಹೊಂದಿವೆ. ಆದರೆ ಯಾವುದೇ ಭದ್ರತಾ ಕಾರ್ಯಾಚರಣೆಗಳ ಕೇಂದ್ರ ಕೂಡಾ, ಡೆಬಿಟ್ ಕಾರ್ಡ್ ಮಾಹಿತಿಗಳ ಕಳವಿನ ಕುರಿತಾದ ದೂರುಗಳ ತನಿಖೆಯನ್ನು ಕೈಗೆತ್ತಿಕೊಂಡಿರಲಿಲ್ಲ. ಇದರ ಪರಿಣಾಮವಾಗಿ ಹೆಚ್ಚಿನ ಬ್ಯಾಂಕ್‌ಗಳು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳನ್ನು ವಿರಳವಾದ ಘಟನೆಗಳು ಎಂದೇ ಪರಿಗಣಿಸಿದ್ದವು. ಆದರೆ ಅದೊಂದು ಮಹಾವೈಫಲ್ಯವೆಂದು ಅರಿವಾಗುವ ಹೊತ್ತಿಗೆ ಸಹಸ್ರಾರು ಬ್ಯಾಂಕ್ ಗ್ರಾಹಕರ ದತ್ತಾಂಶಗಳು ಸೋರಿಕೆಯಾಗಿದ್ದವು.
 ಭಾರತದಲ್ಲಿ ನಿರ್ಣಾಯಕವಾದ ಮಾಹಿತಿ ಮೂಲಸೌಕರ್ಯದ ಮೇಲೆ ದೊಡ್ಡ ಪ್ರಮಾಣದಲ್ಲಿ ನಡೆದ ಸೈಬರ್ ದಾಳಿ ಇದಾಗಿದೆ. ಎಟಿಎಂಗಳನ್ನು ನಿರ್ವಹಿಸುವ ಕಂಪೆನಿಯ ಮೇಲೆ ನಡೆದ ಮಾಲ್‌ವೇರ್ ದಾಳಿಯ ಪರಿಣಾಮಗಳು ಹಲವು ವಾರಗಳವರೆಗೂ ಮುಂದುವರಿದರೂ, ಯಾರೂ ಕೂಡಾ ಭದ್ರತಾಲೋಪಗಳನ್ನು ಗುರುತಿಸುವ ಗೋಜಿಗೆ ಹೋಗಿರಲಿಲ್ಲ.

ಅಸಮರ್ಪಕ ವ್ಯವಸ್ಥೆ

ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರವು ಮೂರು ವರ್ಷಗಳ ಹಿಂದೆಯಷ್ಟೇ ಸ್ಥಾಪನೆಯಾಗಿದೆ. 2012ರಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯಾಲಯವು ಸ್ಥಾಪಿಸಿದ ಜಂಟಿ ಕ್ರಿಯಾ ಸಮಿತಿ ಮಾಡಿದ ಕೆಲವು ಶಿಫಾರಸುಗಳ ಹಿನ್ನೆಲೆಯಲ್ಲಿ ಅದನ್ನು ರಚಿಸಲಾಗಿತ್ತು.
 ಆ ಸಮಯದಲ್ಲಿ ಭಾರತೀಯ ದತ್ತಾಂಶ ಭದ್ರತಾ ಮಂಡಳಿಯ ಡಾ. ಕಮಲೇಶ್ ಬಜಾಜ್ ನೇತೃತ್ವದ ಸಮಿತಿಯು,‘‘ಖಾಸಗಿ ವಲಯವು ವಿವಿಧ ಕೇಂದ್ರಗಳಲ್ಲಿ ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರಗಳನ್ನು ಸ್ಥಾಪಿಸಬೇಕು ಹಾಗೂ ವಲಯಮಟ್ಟದ ಸಿಇಆರ್‌ಟಿ (ಕಂಪ್ಯೂಟರ್ ತುರ್ತುಸ್ಥಿತಿ ಕಾರ್ಯನಿರ್ವಹಣಾ ತಂಡ) ಜೊತೆ ಸಹಕರಿಸಬೇಕು’’ ಎಂದು ಶಿಫಾರಸು ಮಾಡಿತ್ತು.
‘‘ಈ ಶಿಫಾರಸಿನ ಬಳಿಕ ಬ್ಯಾಂಕಿಂಗ್ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನಾ ಸಂಸ್ಥೆಯು ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಪ್ರಸ್ತುತ ಕೇಂದ್ರವು 62 ಬ್ಯಾಂಕ್‌ಗಳನ್ನು ಹಾಗೂ ವಿತ್ತ ಸಂಸ್ಥೆಗಳನ್ನು ಸದಸ್ಯರನ್ನಾಗಿ ಹೊಂದಿದ್ದು, ಅವುಗಳೊಂದಿಗೆ ಅನಾಮಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳಲಿದೆ ಹಾಗೂ ವಿತರಿಸಲಿದೆ.
  ಮಾಹಿತಿಯನ್ನು ವಿತರಿಸಲು ಬ್ಯಾಂಕಿಂಗ್ ವಲಯದ ಇಂಟರ್‌ನೆಟ್ ಜಾಲವನ್ನು ತಾವು ಬಳಸಿಕೊಳ್ಳುತ್ತಿರುವುದಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರ್‌ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ ಹೆಚ್ಚಿನ ಬ್ಯಾಂಕ್‌ಗಳು ಆರ್ಥಪೂರ್ಣವಾದ ಎಸ್‌ಒಸಿ (ಭದ್ರತಾ ನಿರ್ವಹಣಾ ಕೇಂದ್ರಗಳು)ಗಳನ್ನು ಸ್ಥಾಪಿಸಲಿದ್ದು, ಈ ರೀತಿಯ ಭದ್ರತಾ ಬೆದರಿಕೆಗಳನ್ನು ಅವು ಸಕ್ರಿಯವಾಗಿ ಎದುರಿಸಲಿದೆ’’ಎಂದವರು ಹೇಳುತ್ತಾರೆ.
ಆದರೆ ಬ್ಯಾಂಕ್‌ಗಳಲ್ಲಿರುವ ಭದ್ರತಾ ನಿರ್ವಹಣಾ ಕೇಂದ್ರಗಳು ಸಮರ್ಪಕವಾಗಿಲ್ಲವೆಂದು ಸೈಬರ್ ಭದ್ರತೆಯ ಹೊಣೆಗಾರಿಕೆ ವಹಿಸಲ್ಪಟ್ಟಿರುವ ಸರಕಾರದ ಹಲವು ಅಧಿಕಾರಿಗಳು ಬೆಟ್ಟು ಮಾಡಿ ತೋರಿಸುತ್ತಾರೆ.
 ‘‘ಎಸ್‌ಒಸಿಗಳು(ಭದ್ರತಾ ನಿರ್ವಹಣಾ ಕೇಂದ್ರಗಳು) ಒಂದೋ ಅಸ್ತಿತ್ವದಲ್ಲೇ ಇಲ್ಲ ಅಥವಾ ಅವು ತೀವ್ರವಾಗಿ ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿವೆ’’ ಎಂದು ಸರಕಾರದ ಹಿರಿಯ ಸೈಬರ್ ಭದ್ರತಾ ಅಧಿಕಾರಿಯೊಬ್ಬರು ಹೇಳುತ್ತಾರೆ. ಸೈಬರ್ ಬೆದರಿಕೆಗಳನ್ನು ಪತ್ತೆಹಚ್ಚಲು ಅಥವಾ ವರದಿ ಮಾಡಲು ಸ್ವಯಂಚಾಲಿತ (ಅಟೋಮೇಟೆಡ್) ವ್ಯವಸ್ಥೆಗಳನ್ನು ನಿಯೋಜಿಸಬಾರದೆಂದು ಅವರು ಅಭಿಪ್ರಾಯಿಸುತ್ತಾರೆ.
 ಹಣಕಾಸು ಸಂಸ್ಥೆಗಳಿಗೆ ಎದುರಾಗುವ ಸೈಬರ್ ಬೆದರಿಕೆಗಳನ್ನು ನಿಭಾಯಿಸುವ ಉದ್ದೇಶದಿಂದ ತಾನು ಕೈಗೊಂಡ ಸರಣಿ ಕ್ರಮಗಳ ಭಾಗವಾಗಿ 2011ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದ ಗೋಪಾಲಕೃಷ್ಣ ಸಮಿತಿಯು, ಸೈಬರ್ ಭದ್ರತೆಗೆ ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಶಿಫಾರಸು ಮಾಡಿತ್ತು. ಬ್ಯಾಂಕ್‌ಗಳ ಐಟಿ ಜಾಲಗಳನ್ನು ಬಲಪಡಿಸಲು ಹಾಗೂ ಅವು ಸೈಬರ್‌ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡಲು ತಜ್ಞರ ತಂಡವೊಂದನ್ನು ಕೂಡಾ ಅದು ರಚಿಸಿತ್ತು.

  ಗೋಪಾಲಕೃಷ್ಣ ಸಮಿತಿಯ ಪ್ರಮುಖ ಶಿಫಾರಸುಗಳಲ್ಲೊಂದು ಹೀಗಿದೆ:
  ‘‘ಮಾಹಿತಿ ಭದ್ರತಾ ಉಲ್ಲಂಘನೆಯ ಘಟನೆಗಳ ಪರಿಣಾಮವನ್ನು ಸೀಮಿತಗೊಳಿಸಲು ಬ್ಯಾಂಕೊಂದು ಸ್ಪಷ್ಟವಾದ ಉತ್ತರದಾಯಿತ್ವದ ಕಾರ್ಯವಿಧಾನಗಳನ್ನು ಹಾಗೂ ಸಂವಹನ ಯೋಜನೆಗಳನ್ನು ಹೊಂದುವ ಅಗತ್ಯವಿದೆ. ಪ್ರಮುಖ ಸೈಬರ್ ಭದ್ರತೆಯ ಘಟನೆಗಳ ಬಗ್ಗೆ ಅದು ಸಿಇಆರ್‌ಟಿ-ಇನ್ (ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ-ಭಾರತ), ಐಡಿಆರ್‌ಬಿಟಿ (ಬ್ಯಾಂಕಿಂಗ್ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ)ಗೆ ಕ್ರಿಯಾತ್ಮಕವಾದ ಮಾಹಿತಿ ನೀಡಬೇಕಾಗಿದೆ.’’
ಆದಾಗ್ಯೂ ಈ ಶಿಫಾರಸುಗಳ ಪೈಕಿ ಹಲವು ಇನ್ನೂ ಕಾಗದಪತ್ರಗಳಲ್ಲಷ್ಟೇ ಉಳಿದುಕೊಂಡಿದೆ.

ದಿವ್ಯನಿರ್ಲಕ್ಷ

  2008ರಲ್ಲಿ ಮಾಹಿತಿ ಹಕ್ಕು ತಂತ್ರಜ್ಞಾನ ಕಾಯ್ದೆ ತಿದ್ದುಪಡಿಗೊಂಡ ಬಳಿಕ ಭಾರತವು ಸೈಬರ್ ಭದ್ರತೆಗೆ ವಿಸ್ತೃತವಾದ ಮಾರ್ಗನಕ್ಷೆಯೊಂದನ್ನು ಸಿದ್ಧಪಡಿಸಿದೆಯೆಂದು ಸರಕಾರ ಹೇಳಿದೆ. ಸೈಬರ್ ಭದ್ರತೆಗಾಗಿ ನಿರ್ಣಾಯಕವಾದ ಹಾಗೂ ನಿರ್ಣಾಯಕವಲ್ಲದ ವಲಯಗಳನ್ನು ಅದು ಗುರುತಿಸಿದೆ. ಕಂಪ್ಯೂಟರ್ ತುರ್ತುಸ್ಥಿತಿ ನಿರ್ವಹಣಾ ತಂಡ (ಸಿಇಆರ್‌ಟಿ) ಒಂದು ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿದ್ದು ನಿರ್ಣಾಯಕವಲ್ಲದ ವಲಯಗಳಲ್ಲಿ ಕಂಪ್ಯೂಟರ್ ಭದ್ರತಾ ಉಲ್ಲಂಘನೆಯ ಘಟನೆಗಳನ್ನು ನಿರ್ವಹಿಸುತ್ತದೆ.
   ವಿತ್ತವಲಯದಂತಹ ನಿರ್ಣಾಯಕವಾದ ವಲಯಗಳ ಸೈಬರ್ ಭದ್ರತೆಗಾಗಿ ಭಾರತವು ರಾಷ್ಟ್ರೀಯ ನಿರ್ಣಾಯಕ ಮಾಹಿತಿ ಮೂಲಸೌಕರ್ಯ ಸಂರಕ್ಷಣಾ ಕೇಂದ್ರವೆಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಕೇಂದ್ರವು ನೋಡಲ್ ಸಂಸ್ಥೆಯಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ನಿರ್ಣಾಯಕವಾದ ವಲಯಗಳ ರಕ್ಷಣೆಗಾಗಿ ಮಾನದಂಡಗಳನ್ನು ರೂಪಿಸುವಂತೆ 2014ರ ಜನವರಿಯಲ್ಲಿ ಪ್ರಕಟಿಸಲಾದ ಅಧಿಸೂಚನೆಯೊಂದು ತಿಳಿಸಿದೆ.
 ನಿರ್ಣಾಯಕ ವಲಯಗಳ ಮೇಲೆ ನಡೆಯುವ ಯಾವುದೇ ರೀತಿಯ ಸೈಬರ್‌ದಾಳಿಯನ್ನು ಸಿಇಆರ್‌ಟಿ-ಐಎನ್ (ಕಂಪ್ಯೂಟರ್ ತುರ್ತು ಸ್ಥಿತಿ ಪ್ರತಿಕ್ರಿಯಾ ತಂಡ-ಭಾರತ) ಜೊತೆ ಹಂಚಿಕೊಳ್ಳಬೇಕಿದ್ದು,ಪ್ರತಿಯಾಗಿ ಅದು ರಾಷ್ಟ್ರೀಯ ನಿರ್ಣಾಯಕ ಮಾಹಿತಿ ಮೂಲಸೌಕರ್ಯ ರಕ್ಷಣಾ ಕೇಂದ್ರದೊಂದಿಗೆ ಹಂಚಬೇಕಾಗುತ್ತದೆ. ಆದಾಗ್ಯೂ ಮಾಲ್‌ವೇರ್ ದಾಳಿ ಉಲ್ಬಣಿಸಿದರೂ, ಈ ಮೇಲಿನ ಯಾವುದೇ ಸಂಸ್ಥೆಗೂ ಮಾಹಿತಿ ದೊರೆತಿರಲಿಲ್ಲ.
 ಸೈಬರ್ ದಾಳಿಯ ಬಗ್ಗೆ ಬ್ಯಾಂಕ್‌ಗಳು ಕಂಡೂ ಕಾಣದಂತೆ ವರ್ತಿಸಿದರೂ, ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಮೇಲೆ ಕಣ್ಗಾವಲಿರಿಸಲು ಅನೇಕ ಸಂಸ್ಥೆಗಳನ್ನು ರಚಿಸಲಾಗಿದೆ. ಅದರೆ ಅವು ಕೂಡಾ ಭದ್ರತಾ ಉಲ್ಲಂಘನೆಯನ್ನು ಗುರುತಿಸಲು ವಿಫಲವಾಗಿವೆ. ಆದರೆ ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ಎದುರಿಸಲು ಬ್ಯಾಂಕ್‌ಗಳು ಮತ್ತಿತರ ದೇಶದ ನಿರ್ಣಾಯಕ ವಲಯಗಳು ಸೂಕ್ತ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರವೇ ಪರಿಸ್ಥಿತಿ ಬದಲಾಗಲು ಸಾಧ್ಯವಿದೆ.

ಕೃಪೆ: scroll.in

share
ಸೈಕತ್ ದತ್ತಾ
ಸೈಕತ್ ದತ್ತಾ
Next Story
X